ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ:‘ಕೋಲಿ ಸಮಾಜದವರು ಉತ್ತಮ ಶಿಕ್ಷಣ ಪಡೆಯಿರಿ’

ಗುಜರಾತ್ ಸಚಿವ ಕುನ್ವರ್‌ಜಿ ಬವಲಿಯಾ ಸಲಹೆ
Last Updated 29 ಜನವರಿ 2023, 6:11 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯದಲ್ಲಿ ಕೋಲಿ, ಕಬ್ಬಲಿಗ ಸಮಾಜ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ, ಜಾಗೃತಿ ಕೊರತೆಯಿಂದ ಹಿಂದುಳಿದಿದೆ ಎಂದು ತಿಳಿದು ಬಂದಿದೆ. ಜಾಗೃತರಾಗಲು ಶಿಕ್ಷಣ ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಕುನ್ವರ್‌ಜಿ ಬವಲಿಯಾ ಸಲಹೆ ನೀಡಿದರು.

ನಗರದ ಇಂಪಿರಿಯಲ್ ಗಾರ್ಡನ್‌ನಲ್ಲಿ ಶನಿವಾರ ಜಿಲ್ಲಾ ಕೋಲಿ ಸಮಾಜದಿಂದ ಬವಲಿಯಾ ಅವರಿಗೆ ಆಯೋಜಿಸಿದ್ದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಇದೇ ವೇಳೆ ತಿಳಿಸಿದರು.

ದೇಶದ ಇತಿಹಾಸವನ್ನು ಒಮ್ಮೆ ಅಧ್ಯಯನ ಮಾಡಿದಾಗ ನಾಗರಿಕ ಸಮಾಜ ನಿರ್ಮಾಣ ಮಾಡುವಲ್ಲಿ ನಮ್ಮ ಸಮುದಾಯದ ಪಾತ್ರ ಹಿರಿದಾಗಿದೆ. ಸಣ್ಣಪುಟ್ಟ ವಿಷಯಕ್ಕಾಗಿ ಸಮಸಮಾಜದಲ್ಲಿ ವೈರತ್ವ ಬೆಳಸಿಕೊಳ್ಳದೆ, ಎಲ್ಲರೂ ಒಗ್ಗಟ್ಟಾಗಿ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರ ಪೆಟ್ರೋಲಿಯಂ ಮಂಡಳಿ ನಿರ್ದೇಶಕ ಘನಶ್ಯಾಮ್ ಅನುರಾಗಿ ಮಾತನಾಡಿ, ಯಾದಗಿರಿ ಸಣ್ಣ ಜಿಲ್ಲೆಯಾದರೂ ಇಲ್ಲಿ ಪ್ರಜ್ಞಾವಂತರೂ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ನಾವಿಂದು ಸಂಘರ್ಷ ರಹಿತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ, ಜಿಲ್ಲೆಯಲ್ಲಿ ನಮ್ಮ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯದಿಂದ ನಾವಿನ್ನೂ ಹಿಂದೆ ಉಳಿದಿದ್ದೇವೆ. ಪ್ರತಿಯೊಬ್ಬರೂ ಜಾಗತರಾದರೆ ಮಾತ್ರ ಸಮಾಜದ ಬಲಿಷ್ಠಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರನ್ನು ಇಲ್ಲಿಗೆ ಕರೆಸಿ ಅಭಿನಂದಿಸಲಾಗಿದೆ ಎಂದು ವಿವರಿಸಿದರು.

ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ, ವರಲಿಂಗೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಎಂಎಲ್ಸಿಗಳಾದ ರಮೇಶ ದಾದಾ, ಸಾಬಣ್ಣ ತಳವಾರ, ಸಮಾಜದ ರಾಜ್ಯ ಮುಖಂಡ ಬಿ.ಮೌಲಾಲಿ, ತಿಪ್ಪಣ್ಣ ರೆಡ್ಡಿ, ಮೌಲಾಲಿ ಅನಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT