ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರೀ ಮಳೆ: ಹೆರೂರು (ಬಿ) ಗ್ರಾಮ ವಾಸ್ತವ್ಯ ಜುಲೈಗೆ ಮುಂದೂಡಿದ ಕುಮಾರಸ್ವಾಮಿ

Last Updated 22 ಜೂನ್ 2019, 3:13 IST
ಅಕ್ಷರ ಗಾತ್ರ

ಚಂಡರಕಿ (ಯಾದಗಿರಿ ಜಿಲ್ಲೆ): ಕಲಬುರ್ಗಿ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಆಫ್ಜಲಪುರ ತಾಲ್ಲೂಕಿನ ಹೆರೂರ (ಬಿ) ಗ್ರಾಮ ವಾಸ್ತವ್ಯವನ್ನು ಮುಂದೂಡಲಾಗಿದೆ. ಗ್ರಾಮ ವಾಸ್ತವ್ಯರದ್ದಾಗಿಲ್ಲ,ಮುಂದೂಡಲಾಗಿದೆ. ಜುಲೈ ಎರಡನೇ ವಾರದಲ್ಲಿ ಅಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಚಂಡರಕಿಯಲ್ಲಿ ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಸ್ತವ್ಯ ಮುಂದೂಡಲಾಗಿದೆ ಎನ್ನುವುದಕ್ಕಿಂತ ಈ ಭಾಗದಲ್ಲಿ ಆಶಾದಾಯಕ ಮಳೆ ಬಂದಿದೆ. ಹೀಗಾಗಿ ವಾಸ್ತವ್ಯ ಮುಂದೂಡಲಾಗಿದೆ. ಹೀಗಾಗಿ ಆ ಭಾಗದ ಜನರು ಏನೆಲ್ಲ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ಕ್ಷಮೆಯನ್ನು ಕೇಳುತ್ತೇನೆ ಎಂದು ತಿಳಿಸಿದರು.

ಕಲಬುರ್ಗಿ ತಾಲ್ಲೂಕಿನ ಹೇರೂರ(ಬಿ) ಗ್ರಾಮದಲ್ಲಿ ಸಿಎಂ ಜನತಾದರ್ಶನಕ್ಕೆ ಹಾಕಿದ್ದ ಪೆಂಡಾಲ್ ಮಳೆಗೆ ಹಾಳಾಗಿರುವುದು.
ಕಲಬುರ್ಗಿ ತಾಲ್ಲೂಕಿನ ಹೇರೂರ(ಬಿ) ಗ್ರಾಮದಲ್ಲಿ ಸಿಎಂ ಜನತಾದರ್ಶನಕ್ಕೆ ಹಾಕಿದ್ದ ಪೆಂಡಾಲ್ ಮಳೆಗೆ ಹಾಳಾಗಿರುವುದು.

ಜುಲೈನಲ್ಲಿ 10 ದಿನಗಳ ವಿಧಾನಸಭೆ ಅಧಿವೇಶನ ನಡೆಸಬೇಕಾಗಿದೆ. ಅದರಿಂದ ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.

ಚಂಡರಕಿ ಗ್ರಾಮ ವಾಸ್ತವ್ಯದಲ್ಲಿ ಜನ ಸಾಮಾನ್ಯರ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಕೆಲ ಅರ್ಜಿಗಳನ್ನು ನ್ಯಾಯಾಲಯದಲ್ಲಿ ಮಾತ್ರ ಬಗೆಹರಿಸಬಹುದಾಗಿದೆ. ಹೀಗಾಗಿ ಆ ಪ್ರಕರಣಗಳನ್ನು ಇತ್ಯರ್ಥಪಡಿಸಿಲ್ಲ ಎಂದರು.

ಯಾದಗಿರಿ ಜಿಲ್ಲೆಯ ತಾಜಾ ಅಪ್‌ಡೇಟ್‌ಗಳಿಗೆwww.prajavani.net/yadagiriನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT