ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಿದ್ಯುತ್ ಹರಿದು ಲೈನ್‌ಮನ್‌ ಸಾವು

Published 7 ಏಪ್ರಿಲ್ 2024, 16:01 IST
Last Updated 7 ಏಪ್ರಿಲ್ 2024, 16:01 IST
ಅಕ್ಷರ ಗಾತ್ರ

ಯಾದಗಿರಿ: ವಿದ್ಯುತ್ ಹರಿದು ಲೈನ್‌ಮನ್‌ ಮೃತಪಟ್ಟಿರುವ ಘಟನೆ ವಡಗೇರಾ ತಾಲ್ಲೂಕಿನ ನಾಯ್ಕಲ್‌ ಸಮೀಪದ ಭಾನುವಾರ ನಡೆದಿದೆ.

ಲೈನ್‌ಮನ್‌ ರಮೇಶ(48) ಮೃತರು. ನಾಯ್ಕಲ್ ಸಮೀಪದ ಹೆದ್ದಾರಿ ಹತ್ತಿರ ವಿದ್ಯುತ್ ಲೈನ್‌ ದುರಸ್ತಿಗಾಗಿ ಭಾನುವಾರ ಬೆಳಿಗ್ಗೆ ಕಂಬ ಹತ್ತಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಕಂಬದಲ್ಲಿ ದುರಸ್ತಿ ವೇಳೆ ಏಕಾಏಕಿ ವಿದ್ಯುತ್ ಹರಿದು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

‘ರೈತರ ಭತ್ತದ ಜಮೀನಿನಲ್ಲಿರುವ ವಿದ್ಯುತ್ ಕಂಬ ದುರಸ್ತಿ ಕಾರ್ಯಕ್ಕೆ ಲೈನ್‌ಮನ್‌ ಕಂಬ ಹತ್ತಿದ್ದರು. ಎಲ್‌ಸಿ ತೆಗೆದುಕೊಂಡರೂ ಯಾರು ಎಲ್‌ಸಿ ರಿಟರ್ನ್ ಮಾಡಿದರು ಎಂಬುದು ತಿಳಿದಿಲ್ಲ. ಅವೆಲ್ಲದರ ತನಿಖೆಗೆ ಮತ್ತು ಯಾವ ರೈತರು ಈತನನ್ನು ಕರೆದರು. ಯಾವ ಅಧಿಕಾರಿ ಈತನಿಗೆ ಕಂಬ ಹತ್ತಲು ಹೇಳಿದರು? ಎಂಬ ಸಮಗ್ರ ತನಿಖೆ ಕೈಗೊಳ್ಳಬೇಕು‘ ಎಂದು ಕುಟುಂಬಸ್ಥರು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜೆಸ್ಕಾಂ ಎಇಇ ಡಿ.ರಾಘವೇಂದ್ರ, ‘ಘಟನೆ ಕುರಿತು ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಯಾವ ರೀತಿ ದುರ್ಘಟನೆಯಾಯಿತು ಎಂದು ಪರಿಶೀಲಿಸಲಾಗುತ್ತದೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT