ಭಾನುವಾರ, ಸೆಪ್ಟೆಂಬರ್ 26, 2021
28 °C

ಲೋಕ ಅದಾಲತ್; 89 ಸಾವಿರ ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಬೃಹತ್ ಲೋಕ್ ಅದಾಲತ್‍ನಲ್ಲಿ ಸಂಧಾನದ ಮುಖೇನ 89 ಸಾವಿರ ಪ್ರಕರಣ ಇತ್ಯರ್ಥಪಡಿಸಲಾಗಿದ್ದು, ವಿವಿಧ ಪ್ರಕರಣಗಳಿಂದ ₹50.98 ಲಕ್ಷ ವಸೂಲಿ ಮಾಡಲಾಗಿದೆ’ ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ತಯ್ಯಬಾ ಸುಲ್ತಾನ ಅವರು ತಿಳಿಸಿದರು.

ಜೆಎಂಎಫ್‍ಸಿ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ ಬೃಹತ್ ಲೋಕ ಅದಾಲತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ದಿವಾಣಿ ಮತ್ತು ಸಿವಿಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಕಕ್ಷಿದಾರರ ನಡುವೆ ವಕೀಲರ ಮೂಲಕ ರಾಜಿ ಸಂಧಾನ ನಡೆಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ’ ಎಂದರು.

‘ಬೆಳೆ ಸಾಲ, ಕೃಷಿ ಸಾಲ, ಮೋಟಾರು ವಾಹನ ಕಾಯ್ದೆ, ಜೆಸ್ಕಾಂ ಅವಘಡ, ಜಮೀನು ವಿವಾದ ಸೇರಿದಂತೆ ವಿವಿಧ ಪ್ರಕರಣಗಳನ್ನು ಹಣದ ಪರಿಹಾರವಾಗಿ ವಸೂಲಿ ಮಾಡಿ, ದೂರುದಾರಿಗೆ ಸಂದಾಯ ಮಾಡಲಾಯಿತು’ ಎಂದು ವಿವರಿಸಿದರು.

‘ಸಣ್ಣಪುಟ್ಟ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಕಕ್ಷಿದಾರರಿಗೆ ಇದೊಂದು ಉತ್ತಮ ಅವಕಾಶ. ಇದರಿಂದ ಹಣ ಮತ್ತು ಸಮಯ ಉಳಿಯುತ್ತದೆ. ತ್ವರಿತ ನ್ಯಾಯದಾನ ದೊರಕುತ್ತದೆ’ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ್, ಎಪಿಪಿ ರಾಘವೇಂದ್ರ ಜಾಹಗೀರದಾರ, ಎಜಿಪಿ ನಂದನಗೌಡ ಪಾಟೀಲ, ವಕೀಲರಾದ ಜಿ.ಎಸ್. ಪಾಟೀಲ, ದೇವಿಂದ್ರಪ್ಪ ಬೇವಿನಕಟ್ಟಿ, ಜಿ.ತಮ್ಮಣ್ಣ, ರಮಾನಂದ ಕವಲಿ, ವಿ.ಎಸ್. ಜೋಷಿ, ಮಹಮ್ಮದ್ ಹುಸೇನ್. ಬಿ.ಕೆ.ದೇಸಾಯಿ, ಎಸ್.ವ್ಯಾಸರಾಜ, ವಿ.ಸಿ. ಪಾಟೀಲ. ಛಾಯಾ ಕುಂಟೋಜಿ, ಬಸವರಾಜ ಅನ್ಸೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.