ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಾರ ಚೆನ್ನಯ್ಯ ಜಯಂತಿ

Last Updated 16 ಡಿಸೆಂಬರ್ 2019, 10:38 IST
ಅಕ್ಷರ ಗಾತ್ರ

ಸುರಪುರ: ‘ಮಾದಾರ ಚೆನ್ನಯ್ಯ ಅವರು 12ನೇ ಶತಮಾನದ ಪ್ರಮುಖ ಶರಣರಾಗಿದ್ದರು. ಬಸವಣ್ಣನವರ ಮೆಚ್ಚಿನ ಶರಣರಲ್ಲಿ ಚೆನ್ನಯ್ಯ ಒಬ್ಬರು’ ಎಂದು ದೀವಳಗುಡ್ಡದ ಮಾದಾರ ಚೆನ್ನಯ್ಯ ಯುವಕ ಸಂಘದ ಅಧ್ಯಕ್ಷ ಚಂದಪ್ಪ ದೊಡ್ಮನಿ ಹೇಳಿದರು.

ದೀವಳಗುಡ್ಡದ ಮಾದಾರ ಚೆನ್ನಯ್ಯ ವೃತ್ತದಲ್ಲಿ ಭಾನುವಾರ ಏರ್ಪಡಿಸಿದ್ದ ಮಾದಾರ ಚೆನ್ನಯ್ಯನವರ ಜಯಂತಿ ಆಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಚೆನ್ನಯ್ಯನವರು ಅನನ್ಯ ವಚನಕಾರರು. ಬಸವಣ್ಣನವರು ಮಾದಾರನೆಂಬೆನೆ ಚೆನ್ನಯ್ಯನ, ಡೋಹಾರನೆಂಬೆನೆ ಕಕ್ಕಯ್ಯನ ಎಂದು ಚೆನ್ನಯ್ಯನವರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿದ್ದರು’ ಎಂದು
ವಿವರಿಸಿದರು.

‘ಬಸವಣ್ಣ ತಮ್ಮ ವಚನದಲ್ಲಿ ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಕೂಡಲ ಸಂಗಮದೇವನ ಸಾಕ್ಷಿಯಾಗಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಮಾದಾರ ಚೆನ್ನಯ್ಯನ ಮನೆ ಅಂಬಲಿಯನ್ನುಂಡು ಬೆಳೆದೆನೆಂದು ಹೇಳುತ್ತಾರೆ’ ಎಂದು ತಿಳಿಸಿದರು.

‘ಅಂತಹ ಚೆನ್ನಯ್ಯ ನಮ್ಮ ಕುಲತಿಲಕ. ಅವರನ್ನು ನಾವು ನಿತ್ಯವೂ ಸ್ಮರಿಸಬೇಕು. ಬಸವಾದಿ ಶರಣರ ವಚನಗಳನ್ನು ನಿತ್ಯ ಓದಿ ಅವುಗಳನ್ನು ನಮ್ಮ ಬದುಕಿನಲ್ಲಿಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ’ ಎಂದರು.

ಭಾಗಪ್ಪ ತೊಳೆನವರ್, ಭೀಮಪ್ಪ ತೊಳೆನವರ್, ಚಂದ್ರಕಾಂತ ಕಟ್ಟಿಮನಿ, ಬಸವರಾಜ ಅಗ್ನಿ, ಪರಶುರಾಮ ಕಟ್ಟಿಮನಿ, ಮಾನಪ್ಪ ಬುಡ್ಡ, ಮಲ್ಲಪ್ಪ ತೊಳೆನವರ್, ಭೀಮಣ್ಣ ದೊಡ್ಮನಿ, ಚಂದಪ್ಪ ಹಿರಗೋಟ್,
ಭೀಮಪ್ಪ ಬುಡ್ಡ, ಮಲ್ಲಪ್ಪ ಕಟ್ಟಿಮನಿ, ಅಂಬ್ರೇಶ ಅಕ್ಕರಕಿ ಸತ್ಯಂಪೇಟೆ, ದುರ್ಗಪ್ಪ ಹಿರಗೋಟ್ ಭಾಗವಹಿಸಿದ್ದರು. ರಾಜು ತೊಳೆನವರ್ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT