ಬುಧವಾರ, ಮಾರ್ಚ್ 3, 2021
30 °C

ಯಾದಗಿರಿ ತಲುಪಿದ ‘ಮಾದಿಗ ಚೈತನ್ಯ ರಥಯಾತ್ರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ವಿರಾಟ್‌ ಶಕ್ತಿ ಪ್ರದರ್ಶನ ಅಂಗವಾಗಿ ನಡೆಯುತ್ತಿರುವ ಮಾದಿಗ ಚೈತನ್ಯ ರಥಯಾತ್ರೆ ಶನಿವಾರ ಯಾದಗಿರಿ ಜಿಲ್ಲೆ ತಲುಪಿತು.

ರಾಯಚೂರು ಜಿಲ್ಲೆಯ ಜಾಲಹಳ್ಳಿ ಮೂಲಕ ಜಿಲ್ಲೆ ತಲುಪಿದ ರಥಯಾತ್ರೆಗೆ ಸುರಪುರದ ಪ್ರವಾಸಿ ಮಂದಿರದ ಬಳಿ ಸ್ವಾಗತಕೋರಲಾಯಿತು.

‘ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ ಎಂದು ಬಿಜೆಪಿಯವರು ಶಿರಾ ಉಪ ಚುನಾವಣೆ ವೇಳೆ ಹೇಳಿದ್ದರು. ಈಗ ಅದನ್ನು ಮರೆತಿದ್ದು, ಇದು ಜಾರಿಯಾಗುವರೆಗೆ ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌, ಜೆಡಿಎಸ್‌ನವರು ಮಾದಿಗ ಸಮುದಾಯ ಕಡೆಗಣಿಸಿದ್ದಾರೆ. ಬಿಜೆಪಿಯವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ’ ಎಂದು ಸಮುದಾಯದ ಮುಖಂಡರಾದ ಹೆಣ್ಣೂರು ಲಕ್ಷ್ಮಿನಾರಾಯಣ, ನಾಗರಾಜ ಗುತ್ತಳ್ಳಿ, ಸುಬ್ಬಣ್ಣ ಹೊಸಕೋಟೆ ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು