ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಲಿಂಗೇಶ್ವರ ಬೆಟ್ಟ: ಮಹಾಶಿವರಾತ್ರಿ ಮಹೋತ್ಸವ

Published 7 ಮಾರ್ಚ್ 2024, 16:16 IST
Last Updated 7 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ಶಹಾಪುರ: ರಾಜಯೋಗಿ ಗಂಗಾಧರ ಶಿವಯೋಗಿಗಳು ಹಾಗೂ ಶಂಕರನಾಂದ ಶಿವಯೋಗಿಗಳ ತಪೋಭೂಮಿ ಸಿದ್ದಲಿಂಗೇಶ್ವರ ಬೆಟ್ಟದಲ್ಲಿ ಮಾ. 8ರಿಂದ 100ನೇ ಮಹಾಶಿವರಾತ್ರಿ ಮಹೋತ್ಸವ ಆಚರಿಸಲಾಗುತ್ತಿದೆ.

ರುದ್ರಪಶುಪತೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮಹಾಶಿವಯೋಗ ಸಂಜೆ ಶ್ರೀಗಳ ಪಾದಪೂಜೆ, ಪ್ರವಚನ, ಸಂಗೀತ ಕಾರ್ಯಕ್ರಮ ಜರುಗಲಿದೆ.

ಮಾ. 9ರಂದು ಗಂಗಾಧರ ಮಹಾಶಿವಯೋಗಿಗಳ ಮತ್ತು ಶಂಕರಾನಂದ ಮಹಾಶಿವಯೋಗಿಗಳ ಗದ್ದುಗೆ ರುದ್ರಾಭಿಷೇಕ ಜರುಗುವುದು.

ಮಾ. 10ರಂದು ಅಮವಾಸ್ಯೆ ಪ್ರಯುಕ್ತ ಕ್ಷೇತ್ರಾಧಿಪತಿ ಸಿದ್ದಲಿಂಗೇಶ್ವರ ಶಿವಲಿಂಗಕ್ಕೆ ರುದ್ರಾಭಿಷೇಕ,ಮಾ.11ಸೋಮವಾರ ನವಗ್ರಹ ದಂಪತಿಗಳ ಮೂರ್ತಿಗಳಿಗೆ ರುದ್ರಾಭಿಷೇಕ, ಮಾ. 12ರಂದು ಶಿವರಾತ್ರಿ ಮಹಾಮಹೋತ್ಸವ ಮಹಾಮಂಗಲದೊಂದಿಗೆ ಮುಕ್ತಾಯವಾಗಲಿದೆ. ಮಠದ ಸಿದ್ಧಲಿಂಗೇಶ್ವರ ಜನಕಲ್ಯಾಣ ಸಾಂಸ್ಕೃತಿಕ ಸೇವಾ ಟ್ರಸ್ಟ್‌ನ ಚನ್ನಬಸಯ್ಯ ಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT