ನಮ್ಮ ಬಾಲ ಮಂದಿರ ಬಾಲಕಿಯರು ಮಲ್ಲಕಂಬದಂತಹ ಕ್ರೀಡೆಯಲ್ಲಿ ಪ್ರದರ್ಶನ ನೀಡಿ ಮೆಚ್ಚಿಗೆ ಪಡೆದಿರುವುದು ನೋಡಿದರೆ ನಮಗೂ ಖುಷಿಯಾಗುತ್ತದೆ
ಶಿಲ್ಪಾ ರಾಣಿ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ
ಮಲ್ಲಕಂಬದಲ್ಲಿ ಪ್ರದರ್ಶನ ನೀಡುವ ಮಕ್ಕಳನ್ನು ನೋಡಿ ಬೇರೆ ಮಕ್ಕಳು ಸಹ ಯಾವುದಾದರು ಕ್ರೀಡೆ ಕಲೆಯಲ್ಲಿ ತಮ್ಮ ಪ್ರತಿಭೆಯ ಪ್ರದರ್ಶನ ನೀಡಲು ಮುಂದೆ ಬರುತ್ತಿದ್ದಾರೆ
ಮಲ್ಲಿಕಾರ್ಜುನ ಹೂಗಾರ ಸರ್ಕಾರಿ ಬಾಲಕರ ಬಾಲ ಮಂದಿರದ ಸೂಪರಿಂಟೆಂಡೆಂಟ್
ಮಲ್ಲಕಂಬ ಮತ್ತು ಯೋಗಾಸನಲ್ಲಿ ತೊಡಗಿಸಿಕೊಂಡ ಬಳಿಕ ಓದಿನಲ್ಲಿ ಏಕಾಗ್ರತಿ ಮೂಡಿ ಪಾಠಗಳು ಬೇಗ ಅರ್ಥ ಆಗುತ್ತಿವೆ. ವಿಶ್ವಾಸವೂ ಮೂಡಿದೆ
ಲಕ್ಷ್ಮಿ ಮಲ್ಲಕಂಬ ಕ್ರೀಡಾಪಟು
‘ಯೋಗಾಸನ; ಇಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆ’
‘ಕಂಬದ ಮೇಲೆ ಕಸರತ್ತುಗಳನ್ನೆಲ್ಲ ಲೀಲಾಜಾಲವಾಗಿ ಮಾಡಬೇಕಾದರೆ ದೇಹದ ಸಮತೋಲನ ಮುಖ್ಯವಾಗುತ್ತದೆ. ಹೀಗಾಗಿ ಯೋಗಾಸನ ಮಾಡುವುದು ಕಡ್ಡಾಯ. ಯೋಗಾಸನ ಪ್ರದರ್ಶನದಲ್ಲಿ ಬಾಲಕಿಯರ ಬಾಲ ಮಂದಿರದ ಇಬ್ಬರು ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ’ ಎನ್ನುತ್ತಾರೆ ರವಿ ಯಳವಾರ. ‘ಶಾಲಾ ಶಿಕ್ಷಣ ಇಲಾಖೆಯು ನವೆಂಬರ್ 19ರಿಂದ 20ರ ವರೆಗೆ ಹಾವೇರಿಯಲ್ಲಿ ನಡೆಸುವ ರಾಜ್ಯ ಮಟ್ಟದ ಯೋಗಾಸನ ಪಂದ್ಯಾವಳಿಗೆ ಸಹನಾ ಹಾಗೂ ಲಕ್ಷ್ಮಿ ಆಯ್ಕೆಯಾಗಿದ್ದಾರೆ. ಇದು ಸಾಧ್ಯವಾಗಿದ್ದು ಮಲ್ಲಕಂಬದಿಂದ’ ಎಂದರು.