ಸೋಮವಾರ, ಡಿಸೆಂಬರ್ 6, 2021
24 °C

ಯಾದಗಿರಿ: ಕೃಷ್ಣಾ ನದಿಯಲ್ಲಿ ಮೊಸಳೆ ದಾಳಿ, ವ್ಯಕ್ತಿ ಶವವಾಗಿ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡಗೇರಾ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಕೊಂಕಲ್‌ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಬುಧವಾರ ಕಟ್ಟಿಗೆ ತರಲು ತೆರಳಿದ್ದ ವೆಂಕಟೇಶ (40) ಮೊಸಳೆ ದಾಳಿಗೆ ಬಲಿಯಾಗಿದ್ದು, ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.

ಬುಧವಾರ ಸಂಜೆ ಕಟ್ಟಿಗೆ ತರಲು ವೆಂಕಟೇಶ ಕೃಷ್ಣಾ ನದಿ ದಡಕ್ಕೆ ತೆರಳಿದ್ದರು. ನಂತರ ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಾಗ ಮೊಸಳೆ ಎಳೆದೊಯ್ದದಿದೆ. ವೆಂಕಟೇಶ ಪತ್ತೆಗಾಗಿ ಬುಧವಾರ ಸ್ಥಳೀಯ ಮೀನುಗಾರರು ಶೋಧ ಕಾರ್ಯ ನಡೆಸಿದ್ದರು. ರಾತ್ರಿಯಾದರೂ ಪತ್ತೆಯಾಗದ ಕಾರಣ ಹುಡುಕಾಟ ಸ್ಥಗಿತಗೊಳಿಸಿದ್ದರು. ಗುರುವಾರ ಬೆಳಿಗ್ಗೆ ಅಗ್ನಿಶಾಮಕ ದಳ ಜೊತೆ ಮೀನುಗಾರರು ಶೋಧ ನಡೆಸಿದ್ದರು.

ಘಟನೆ ಸ್ಥಳಕ್ಕೆ ತಹಶೀಲ್ದಾರ್ ಸುರೇಶ ಅಂಕಲಗಿ, ಕಂದಾಯ ನಿರೀಕ್ಷಕ ಸಂಜುಕುಮಾರ ಕವಲಿ, ಅಗ್ನಿಶಾಮಕ ದಳದ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದರು.

ಇದನ್ನೂ ಓದಿ... ಜಲಾಂತರ್ಗಾಮಿ ಐಎನ್‌ಎಸ್‌ ವೇಲಾ ನೌಕಾಪಡೆಗೆ ಸೇರ್ಪಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು