ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ನೋಟ; ವಿವಿಧ ತರಕಾರಿ ದರ ಏರಿಕೆ

ಈಚೆಗೆ ಸುರಿದ ಮಳೆಗೆ ಬೆಲೆ ಹೆಚ್ಚಳ, ಗ್ರಾಹಕರಿಗೆ ಹೊರೆ
Last Updated 3 ಅಕ್ಟೋಬರ್ 2021, 7:29 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ನಗರದಲ್ಲಿ ವಿವಿಧ ತರಕಾರಿ ದರ ಹೆಚ್ಚಳವಾಗಿದೆ.

ಕಳೆದ ಎರಡ್ಮೂರು ವಾರಗಳಿಂದ ತರಕಾರಿ ದರ ಹೆಚ್ಚಳವಾಗಿರಲಿಲ್ಲ. ಟೊಮೆಟೊ, ಈರುಳ್ಳಿ ಬೆಲೆ ಅತಿ ಕಡಿಮೆಯಾಗಿತ್ತು. ಆದರೆ, ಈ ವಾರ ಈ ತರಕಾರಿಗಳ ದರ ಏರಿಕೆಯಾಗಿದೆ.

ಮಳೆ ಕಾರಣ ಟೊಮೆಟೊ, ಈರುಳ್ಳಿ ದರ ಜಾಸ್ತಿಯಾಗಿದೆ. ಒಂದು ಕೆಜಿ ಶುಂಠಿ ₹60, ಬೆಳ್ಳೋಳ್ಳಿ ಎರಡು ಗಾತ್ರದಿದ್ದು, ₹100ರಿಂದ 120 ದರವಿದೆ.

ಎಲ್ಲ ತರಕಾರಿ ದರ ಹೆಚ್ಚಳ: ಎಲ್ಲ ವಿಧಧ ತರಕಾರಿ ದರ ₹10ರಿಂದ ₹20 ದರ ಹೆಚ್ಚಳವಾಗಿದೆ. ಸೊಪ್ಪುಗಳ ದರ ಮಾತ್ರ ಯಥಾಸ್ಥಿತಿ ಮುಂದುವರಿದಿದೆ.

ನಗರದ ರೈಲ್ವೆ ಸ್ಟೇಷನ್‌ ರಸ್ತೆ, ಮಹಾತ್ಮ ಗಾಂಧಿ ಮಾರುಕಟ್ಟೆ, ವನಕೇರಿ ಬಡಾವಣೆ ಮಾರುಕಟ್ಟೆ ಸೇರಿದಂತೆ ತಳ್ಳುಗಾಡಿ ಮತ್ತು ಮನೆ ಮನೆಗೆ ತರುವ ಪುಟ್ಟಿ ತರಕಾರಿ ದರವೂ ಹೆಚ್ಚಳವಾಗಿದೆ.

ಹವಾಮಾನ ವೈಪರೀತ್ಯ ಕಾರಣದಿಂದ ಜಿಲ್ಲೆಯ ಅಲ್ಲಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಅಲ್ಲದೇ ತುಂತುರು ಮಳೆ ಕೂಡ ಆಗುತ್ತಿದೆ. ಇದರಿಂದ ತರಕಾರಿ ಬಿಡಿಸಲು ರೈತರಿಗೆ ಸಮಸ್ಯೆ ಆಗಿದೆ. ಮಾರುಕಟ್ಟೆಗೆ ಹೆಚ್ಚಿನ ಆವಕ ಬಾರದ ಕಾರಣ ತರಕಾರಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ನಗರಕ್ಕೆ ಗ್ರಾಮಾಂತರ ಭಾಗ, ಶಹಾಪುರ ತಾಲ್ಲೂಕಿನ ದೋರನಹಳ್ಳಿ ಸೇರಿದಂತೆ ವಿವಿಧ ಕಡೆ ತರಕಾರಿ ಆವಕ ಆಗಮಿಸುತ್ತದೆ. ಇಲ್ಲಿಂದ ಬರುವ ತರಕಾರಿ ತಡವಾದರೆ ಮಾತ್ರ ಮಾರುಕಟ್ಟೆಗಳಲ್ಲಿ ದರ ಏರುಪೇರಾಗುತ್ತದೆ.

ಸೊಪ್ಪುಗಳ ದರ: ಕೆಲ ವಾರಗಳಿಂದ ಸೊಪ್ಪುಗಳ ದರ ಹೆಚ್ಚು ಏರಿಕೆಯಾಗಿಲ್ಲ. ಆದರೆ, ಕೆಲವೊಂದು ಸೊಪ್ಪು ₹20ಕ್ಕೆ ಮೂರು ಕಟ್ಟು ಸೊಪ್ಪು ದರ ನಿಗದಿಯಾಗಿದೆ. ಮೆಂತೆ ಸೊಪ್ಪುಗೆ ಹೆಚ್ಚಿನ ದರವಿದೆ.

ಮೆಂತೆ ಸೊಪ್ಪು ದೊಡ್ಡ ಗಾತ್ರದು ₹20–25, ಪಾಲಕ್‌ ಸೊಪ್ಪು ಒಂದು ಕಟ್ಟು ₹5, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಒಂದು ಕಟ್ಟು ₹ 20ಗೆ ಮೂರು ಸೊಪ್ಪು, ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಸೊಪ್ಪು ಒಂದು ಕಟ್ಟು ₹20–25 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹20 ದರ ಇದೆ. ಮಳೆ ಆಗಾಗ ಸುರಿಯುತ್ತಿರುವ ಕಾರಣ ಸೊಪ್ಪುಗಳ ಬೆಲೆ ಹೆಚ್ಚಳವಾಗಿಲ್ಲ.

ಹಣ್ಣುಗಳ ದರ; ಸದ್ಯ ಮಾರುಕಟ್ಟೆಯಲ್ಲಿ ಸೇಬು ಹಣ್ಣು ಕಡಿಮೆ ದರವಿದ್ದು, ಹೆಚ್ಚು ಆವಕ ಇದೆ. ದೊಡ್ಡ ಗಾತ್ರದ್ದು ₹100 ನಾಲ್ಕು, ಚಿಕ್ಕ ಗಾತ್ರದು ₹20 ದರ ಇದೆ. ಪಚ್ಚೆ ಬಾಳೆಹಣ್ಣು ₹40 ಡಜನ್‌, ಏಲಕ್ಕಿ ಬಾಳೆ ₹50 ಕೆಜಿ ಇದೆ. ಪೇರಲ ₹40 ಕೆಜಿ, ದಾಳಿಂಬೆ ₹160ರಿಂದ 180 ಕೆಜಿ ಇದೆ.

***

ಪಟ್ಟಿ: ತರಕಾರಿ ದರ(ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ; 30-35
ಬದನೆಕಾಯಿ;55–60
ಬೆಂಡೆಕಾಯಿ; 60–50
ದೊಣ್ಣೆಮೆಣಸಿನಕಾಯಿ; 40–50
ಆಲೂಗಡ್ಡೆ; 30-35
ಈರುಳ್ಳಿ; 30–25
ಎಲೆಕೋಸು; 40–35
ಹೂಕೋಸು; 60–50
ಚವಳೆಕಾಯಿ; 65–70
ಬೀನ್ಸ್; 70–60
ಗಜ್ಜರಿ; 70-80
ಸೌತೆಕಾಯಿ; 60–50
ಮೂಲಂಗಿ; 40-35
ಮೆಣಸಿನಕಾಯಿ; 40-45
ಸೋರೆಕಾಯಿ; 25–30
ಬಿಟ್‌ರೂಟ್; 60-55
ಹೀರೆಕಾಯಿ; 60-70
ಹಾಗಲಕಾಯಿ; 50-55
ತೊಂಡೆಕಾಯಿ; 55-50
ಅವರೆಕಾಯಿ; 50–45

***

ತರಕಾರಿ ಆವಕ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಇದರಿಂದ ನಮಗೂ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ₹5ರಿಂದ 10 ದರ ಏರಿಕೆ ಅನಿವಾರ್ಯವಾಗಿದೆ.
-ಅಕ್ಬರ್‌, ತರಕಾರಿ ವ್ಯಾಪಾರಿ

***

ಮಳೆ ಕಾರಣದಿಂದ ತರಕಾರಿ ಬಂದಿಲ್ಲ. ಹೀಗಾಗಿ ಎಲ್ಲ ವಿವಿಧ ತರಕಾರಿ ದರ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿದ್ದು, ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
-ಭಾಗಣ್ಣ ಅಲ್ಲಿಪುರ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT