ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ | ವಿದ್ಯುತ್ ಉಪಕೇಂದ್ರ ಕಾಮಗಾರಿ ವೀಕ್ಷಿಸಿದ ಶಾಸಕ ಶರಣಗೌಡ

Published 28 ನವೆಂಬರ್ 2023, 14:08 IST
Last Updated 28 ನವೆಂಬರ್ 2023, 14:08 IST
ಅಕ್ಷರ ಗಾತ್ರ

ಯರಗೋಳ: ಯಡ್ಡಳ್ಳಿ-ಹೊನಗೇರಾ ಮಧ್ಯದಲ್ಲಿರುವ 110 ಕೆ.ವಿ.ಎ. ವಿದ್ಯುತ್ ಉಪಕೇಂದ್ರ ಕಾಮಗಾರಿಯನ್ನು ಸೋಮವಾರ ಶಾಸಕ ಶರಣಗೌಡ ಕಂದಕೂರ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗುಣಮಟ್ಟದ ಕಾಮಗಾರಿ ಕಾಪಾಡಿಕೊಂಡು ನಿಗದಿತ ಸಮಯದಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

2019ನೇ ವರ್ಷದಲ್ಲಿ ಯಡ್ಡಳ್ಳಿ, ಗೊಂದಡಗಿ, ಕೌಳೂರು, ಕಂದಕೂರ್ ಮತ್ತು ಕಾಳಬೆಳಗುಂದಿಗೆ 110 ಕೆ.ವಿ.ಎ. ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿವೆ. ಈಗಾಗಲೇ ಯಡ್ಡಳ್ಳಿ ಮತ್ತು ಗೊಂದಡಗಿ ಕಾಮಗಾರಿ ಪ್ರಾರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಂದಕೂರ, ಕಾಳಬೆಳಗುಂದಿ ಹಾಗೂ ಕೌಳೂರು ಗ್ರಾಮಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಗಾಜರಕೋಟ ಗ್ರಾಮದಲ್ಲಿ 33-ಕೆ.ವಿ.ಎ ವಿದ್ಯುತ್ ಉಪಕೇಂದ್ರವಿದ್ದು, ಅದನ್ನು 110-ಕೆ.ವಿ.ಎ ಗೆ ಉನ್ನತೀಕರಿಸಲು ಸಂಬಂಧಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ತಿಳಿಸಿದ್ದು, ಬರುವ ಬೇಸಿಗೆಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಪೂರ್ಣಗೊಂಡರೇ ಮುಂದಿನ 25-30 ವರ್ಷಗಳ ಕಾಲ ವಿದ್ಯುತ್ ಅಭಾವವಿ ಇರುವುದಿಲ್ ಎಂದು ತಿಳಿಸಿದರು.

ಅಧಿಕಾರಿಗಳಾದ ರಾಜೇಶ ಹಿಪ್ಪರಿಗಿ, ಬಸಂತಕುಮಾರ, ಗುತ್ತಿಗೆದಾರರಾದ ದಯಾನಂದ, ಹತ್ತಿಕುಣ ಪಂಚಾಯ್ತಿ ಗ್ರಾಮೀಣಾಧಿಕಾರಿ ವಿಜಯಲಕ್ಷ್ಮೀ ಮತ್ತು ಹೊನಗೇರಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಗ್ರಾಮದ ಮುಖಂಡರಾದ ಭೋಜಣ್ಣಗೌಡ ಯಡ್ಡಳ್ಳಿ, ಈಶಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT