ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ |ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಶೇ 60ರಷ್ಟು ಮತದಾನ

Published 3 ಜೂನ್ 2024, 15:39 IST
Last Updated 3 ಜೂನ್ 2024, 15:39 IST
ಅಕ್ಷರ ಗಾತ್ರ

ಸುರಪುರ: ‘ಈಶಾನ್ಯ ಕರ್ನಾಟಕ ಪದವೀಧರ ವಿಧಾನ ಪರಿಷತ್ ಕ್ಷೇತ್ರಕ್ಕೆ ಸೋಮವಾರ ಶೇ 60.60ರಷ್ಟು ಮತದಾನವಾಗಿದೆ’ ಎಂದು ಮತಗಟ್ಟೆ ಅಧಿಕಾರಿ ಚಂದಪ್ಪ ನಾಯ್ಕೋಡಿ ತಿಳಿಸಿದರು.

ನಗರದ ಪೊಲೀಸ್ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಮತಗಟ್ಟೆಗಳಿದ್ದು ಒಟ್ಟು 2310 ಮತದಾರರ ಪೈಕಿ 1400 ಪದವೀಧರರು ಮತ ಚಲಾಯಿಸಿದ್ದಾರೆ.

ಮತದಾನ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿತ್ತು. ಆದರೆ ಮುಂಜಾನೆ ಮಳೆ ಇದ್ದುದರಿಂದ ಮತದಾರರು ಮತಗಟ್ಟೆಯತ್ತ ಸುಳಿದಿರಲಿಲ್ಲ. 10 ಗಂಟೆ ಸುಮಾರಿಗೆ ಮಳೆ ನಿಂತಿದ್ದರಿಂದ ಮತದಾನದಲ್ಲಿ ಚುರುಕು ಕಂಡುಬಂದಿತು. ಸಂಜೆ 4ಗಂಟೆ ನಂತರವೂ ಮತದಾನ ಮುಂದುವರಿದಿತ್ತು.

ಪದವೀಧರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆ ಬಳಿ ಕಾಂಗ್ರೆಸ್, ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಮುಖಂಡರು ಬೀಡು ಬಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT