ಶುಕ್ರವಾರ, ಮೇ 20, 2022
23 °C
ಛಾಯಾ ಅನಸುಗೂರ ಅಧ್ಯಕ್ಷೆ, ಖಾಜಾ ಮೈನೋದ್ದೀನ್ ಉಪಾಧ್ಯಕ್ಷ

ನಾಯ್ಕಲ್ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆ, ಉಪಾಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯ್ಕಲ್ (ಯಾದಗಿರಿ): ನಗರ ಹೊರವಲಯದ ನಾಯ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಛಾಯಾ ಅನಸುಗೂರ, ಉಪಾಧ್ಯಕ್ಷರಾಗಿ ಖಾಜಾ ಮೈನೋದ್ದೀನ್ ಆಯ್ಕೆಯಾದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಿತು. ಅಧ್ಯಕ್ಷ ಸ್ಥಾನ ಎಸ್‌.ಸಿ (ಮಹಿಳೆ) ಮೀಸಲು ಆಗಿತ್ತು. ಛಾಯಾ ಅನಸುಗೂರ ಮತ್ತು ಮರೆಮ್ಮ ಮೈತ್ರೆ ನಾಮಪತ್ರ ಸಲ್ಲಿಸಿದ್ದರು. ಗುಪ್ತ ಮತದಾನ ನಡೆಯಿತು. ಛಾಯಾ ಅವರಿಗೆ 10 ಮತ ಪಡೆದು ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ (ಪುರುಷ) ಆಗಿದ್ದರಿಂದ ಖಾಜಾ ಮೈನೋದ್ದೀನ್ ಮತ್ತು ದಾವೂದ್ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು. ಖಾಜಾ ಮೈನೋದ್ದೀನ್ 10 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪಂಚಾಯಿತಿಯ 17 ಜನ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲಾ ಹಿಂದುಳಿದ ವರ್ಗ ಕಲ್ಯಾಣ ಅಧಿಕಾರಿಯಾದ ಚುನಾವಣಾಧಿಕಾರಿ ಪ್ರಭು ದೊರೆ ಅವರು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಆಯ್ಕೆ ಘೋಷಿಸಿದರು.

ಪಿಡಿಒ ಸುರೇಶ ಹಾಗೂ ಸಿಬ್ಬಂದಿ ಇದ್ದರು. ಯಾದಗಿರಿ ಡಿವೈಎಸ್‌ಪಿ ಸಂತೋಷ ಬನ್ನೇಟ್ಟಿ, ಸಿಪಿಐ ಸೋಮಶೇಖರ ಕೆಂಚರಡ್ಡಿ, ವಡಗೇರಾ ಠಾಣೆ ಪಿಎಸ್‍ಐ ಸಿದ್ದರಾಯ ಬಳ್ಳೂರ್ಗಿ, ಎಎಸ್‍ಐ ಹಾಗೂ ಪೊಲೀಸ್ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.