ಮಂಗಳವಾರ, ಮಾರ್ಚ್ 9, 2021
31 °C
ಜಿಲ್ಲೆಯಾದ್ಯಂತ ಸುಭಾಷ್‌ ಚಂದ್ರ ಬೋಸ್ ಜಯಂತಿ ಆಚರಣೆ, ಸ್ಫೂರ್ತಿದಾಯಕ ಹೋರಾಟದ ಸ್ಮರಣೆ

ನೇತಾಜಿ ದೇಶಪ್ರೇಮ ಯುವಜನರಿಗೆ ಮಾದರಿ: ವೆಂಕಟರೆಡ್ಡಿ ಮುದ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ನೇತಾಜಿ ಸುಭಾಷ್‌ ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು.

‘ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಮಹಾನ್‌ ವ್ಯಕ್ತಿ ನೇತಾಜಿ ಅವರಾಗಿದ್ದಾರೆ. ರಕ್ತ ಹರಿಸಿಯಾದರೂ ಸ್ವಾತಂತ್ರ್ಯ ಪಡದೆ ತಿರುತ್ತೇವೆ’ ಎಂದು ಯುವಕರಲ್ಲಿ ಸ್ವಾತಂತ್ರ್ಯ ಬೆಳಕು ಬೆಳೆಗಿಸಿದವರು ಎಂದು ನೇತಾಜಿ ಬಗ್ಗೆ ಗಣ್ಯರು ಗುಣಗಾನ ಮಾಡಿದರು.

ಸುಭಾಷ ವೃತ್ತ: ನಗರದ ಸುಭಾಷ್ ವೃತ್ತದಲ್ಲಿ ನೇತಾಜಿಯವರ 125ನೇ ಜನ್ಮದಿನ ಅಂಗವಾಗಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ನೇತಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಬೋಸ್ ಅವರು ಬ್ರಿಟಿಷರ ವಿರುದ್ಧ ಮೊದಲ ಸೇನಾಪಡೆ ಕಟ್ಟುವ ಮೂಲಕ ಜನರಲ್ಲಿ ಜಾಗೃತಿ ಹಾಗೂ ಒಗ್ಗಟ್ಟು ಮೂಡಿಸಿದರು ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಅವರ ದೇಶಪ್ರೇಮ, ಹೋರಾಟ, ತ್ಯಾಗ ಇಂದಿನ ಯುವಕರಿಗೆ ಆದರ್ಶಪ್ರಾಯವಾಗಲಿ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ಯುವಕರು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವ ಮೂಲಕ ಸಾಮರಸ್ಯ ಮೂಡಿಸಲು ಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.

ಯೂಡಾ ಅಧ್ಯಕ್ಷ ಬಸವರಾಜ ಚಂಡರಕಿ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಮುಖಂಡರಾದ ಮಹೇಶರೆಡ್ಡಿ ಮುದ್ನಾಳ, ಸುರೇಶ ರಾಠೋಡ, ಸುರೇಶ ಆಕಳ, ಮೋಹನ ಬಾಬು, ರಾಜು ಹೆಂದೆ, ಹಣಮಂತ ಇಟಗಿ, ಸ್ವಾಮಿದೇವ ದಾಸನಕೆರೆ, ರವಿ ಮುದ್ನಾಳ, ಎಂ.ಕೆ.ಬೀರನೂರ, ಬಲವಂತ ದಾಸನಕೆರೆ, ಸುರೇಶ ಮಡ್ಡಿ, ರಮೇಶ ದೊಡ್ಡಮನಿ, ನಾರಾಯಣ ಚವ್ಹಾಣ, ಮಲ್ಲಿಕಾರ್ಜುನ ಕುರಕುಂಬಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಕರವೇ ಕಾರ್ಯಾಲಯ: ನಗರದ ಕರವೇ ಜಿಲ್ಲಾ ಕಚೇರಿಯಲ್ಲಿ ನೇತಾಜಿ ಜಯಂತಿ ಆಚರಿಸಲಾಯಿತು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಭೀಮುನಾಯಕ, ಯುವ ಘಟಕ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ, ಅಂಬ್ರೆಷ್‌ ಹತ್ತಿಮನಿ, ಸಿದ್ದು ನಾಯಕ ಹತ್ತಿಕುಣಿ, ರವಿಕುಮಾರ ಮೊಸಳಿ, ಅಬ್ದುಲ್ ಅಜೀಜ್ ರಿಯಾಜ್ ಪಟೇಲ, ವಿಜಯ್ ರಾಠೋಡ, ಅನಿಲ್ ದಾಸನಕೇರಿ, ಹರೀಶ್ ವಾಲಿ, ಕಾಶೀನಾಥ್ ನಾನೇಕ, ಮಲ್ಲು ಇದ್ದರು.

ಮಿತ್ರಾ ಸೇವಾ ಸಂಸ್ಥೆ ಕಚೇರಿ: ನಗರದ ಮಿತ್ರಾ ಸೇವಾ ಸಂಸ್ಥೆ ಕಚೇರಿಯಲ್ಲಿ ನೇತಾಜಿ ಜಯಂತಿ ಆಚರಿಸಲಾಯಿತು. ಕಿರಣ ಕುಮಾರ, ಮಹೇಶ, ಯೋಹನ್ ಮಧ್ವಾರ, ಶಶಿಕುಮಾರ್ ಯಾದಗಿರಿ ಮತ್ತು ಇತರರು ಇದ್ದರು.

ಎಬಿವಿಪಿ ಸಂಘಟನೆ: ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಎಬಿವಿಪಿಯಿಂದ ನೇತಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ನಗರ ಸಹ ಕಾರ್ಯದರ್ಶಿ ರಾಜೀವ ಬೇಗಾರ, ಎಬಿವಿಪಿ ಮುಖಂಡ ನಿತೇಶ್ ಕುರಕುಂದಿ, ಮುಖಂಡರಾದ ಅಶೋಕ ಗುತ್ತೇದಾರ, ಹಣಮಂತ, ಲಕ್ಷ್ಮಣ, ಶರಣಪ್ಪ, ವೆಂಕಟೇಶ, ಅಶೋಕ, ಶಂಕರ, ಶಿವು ಯಂಪಾಡ ಇದ್ದರು

ನೇತಾಜಿ ಆದರ್ಶ ಪಾಲಿಸಲು ಸಲಹೆ
ಸೈದಾಪುರ:
ದೇಶದ ಯುವಕರು ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳನ್ನು ಪಾಲಿಸಿ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಾಸವಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಬಸವಲಿಂಗಪ್ಪ ವಡಿಗೇರಕರ್ ತಿಳಿಸಿದರು.

ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ನೇತಾಜಿ ಜಯಂತಿಯಲ್ಲಿ ಅವರು ಮಾತನಾಡಿದರು.

ಸುಭಾಷ್ ಚಂದ್ರ ಬೋಸರು ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಸೈನ್ಯವನ್ನು ಸಂಘಟಿಸಿ ಬ್ರಿಟೀಷರ ವಿರುದ್ಧ ಹೋರಾಡಿದ ಅವರ ಹೋರಾಟದ ಮನೋಭಾವ ಯುವಕರಿಗೆ ಸ್ಫೂರ್ತಿಯಾಗಿದೆ ಎಂದರು.

ಬಿ.ಬಿ.ವಡವಟ್, ಖಾಸಿಂಬಿ ಇಮ್ತಿಯಾಜ್, ಸರಸ್ವತಿ ಆರ್ ಪಾಟೀಲ್, ಖಾಸಿನಾಥ ಶೆಟ್ಟಿಹಳ್ಳಿ, ಸಂತೋಷ ದೇಸಾಯಿ, ವಿದ್ಯಾರ್ಥಿಗಳು ಇದ್ದರು.

‘ಬೋಸ್‌ರದ್ದು ರಾಜಿ ರಹಿತ ಹೋರಾಟ’
ಯರಗೋಳ:
ಆಲ್ ಇಂಡಿಯ ಡೆಮಾಕ್ರಟಿಕ್ ಯೂತ್ ಆರ್ಗನೈಸೆಷನ್ (ಎಐಡಿವೈಒ) ಗ್ರಾಮ ಘಟಕದ ವತಿಯಿಂದ ಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು.

ಎಐಯುಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ರಾಮಲಿಂಗಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ರಾಜಿರಹಿತವಾಗಿ ಬ್ರಿಟೀಷರೊಂದಿಗೆ ಹೋರಾಡಿದ ನೇತಾಜಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ ಎಂದರು.

ನೇತಾಜಿ ಅವರು ಬ್ರಿಟೀಷರಿಂದ ಸ್ವಾತಂತ್ರ್ಯ ತಂದು ಕೊಡುವ ಜತೆಗೆ ಶೋಷಣೆಯಿಲ್ಲದ ಸಮಾಜವಾದಿ ರಾಷ್ಟ್ರನಿರ್ಮಾಣದ ಕನಸನ್ನು ಕಂಡಿದ್ದರು. ಅವರ ಆಶಯವನ್ನು ಈಡೇರಿಸಲು ಯುವಕರು ಮುಂದಾಗಬೇಕು ಎಂದು ತಿಳಿಸಿದರು.

ಎಐಡಿವೈಒ ಗ್ರಾಮ ಘಟಕದ ಅಧ್ಯಕ್ಷ ಸಾಬಣ್ಣ ಬಂದಳ್ಳಿ, ಕಾರ್ಯದರ್ಶಿ ಸಾಬಣ್ಣ, ನಿಂಗಪ್ಪ, ಮಾರುತಿ ಕಲಾಲ್, ಮಲ್ಲಿಕಾರ್ಜುನ್, ನಿಂಗಪ್ಪ, ಭಾಗಪ್ಪ ಮತ್ತು ಗ್ರಾಮದ ಪ್ರಮುಖರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು