ಸುರಪುರ: ಮನುಷ್ಯನ ಮನಸ್ಸನ್ನು ಹಗುರಗೊಳಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತದಿಂದ ಮನಸ್ಸಿಗೆ ಉಲ್ಲಾಸ-ಆನಂದ ಸಿಗುತ್ತದೆ. ಸಂಗೀತಕ್ಕೆ ಜಾತಿ, ಮತ, ಪಂಥ, ಭೇದಭಾವವಿಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣ ಸುಬೇದಾರ್ ಹೇಳಿದರು.

ಇಲ್ಲಿಯ ಪಾಂಡುರಂಗ ದೇವಸ್ಥಾನದಲ್ಲಿ ಸಗರನಾಡು ಕಲಾ ವೇದಿಕೆ ರುಕ್ಮಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶರಣಬಸವ ಯಾಳವಾರ ಮಾತನಾಡಿ, ಸಂಗೀತ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಜನಪದ ಸಂಗೀತಕ್ಕೆ ಜನರ ಮನಸ್ಸನ್ನು ಹಿಡಿದಿಡುವ ಶಕ್ತಿ ಇದೆ. ಜನಪದ ಸಾಹಿತ್ಯ ಇಂದು ಅಳಿವಿನಂಚಿನಲ್ಲಿದ್ದು, ಉಳಿಸಿ ಬೆಳೆಸುವ ಕೆಲಸವಾಗಬೇಕು
ಎಂದರು.

ಕೇದಾರನಾಥ ಶಾಸ್ತ್ರಿ ಯಾಳಗಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು.

ಶ್ರೀಪಾದ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಿವಶರಣಯ್ಯಸ್ವಾಮಿ ತಂಡದಿಂದ ಶಾಸ್ತ್ರೀಯ ಸಂಗೀತ, ಮಲ್ಲಯ್ಯಸ್ವಾಮಿ ತಂಡದಿಂದ ತತ್ವ ಪದಗಳು, ಕೆಂಭಾವಿ ಸೋಮನಾಥ ಯಾಳಗಿ ತಂಡದಿಂದ ಜನಪದ ಗೀತೆಗಳ ಕಾರ್ಯಕ್ರಮ
ನಡೆಯಿತು.

ಪ್ರಾಣೇಶ ಕುಲಕರ್ಣಿ ತಂಡದಿಂದ ದಾಸವಾಣಿ, ವಿಜಯಲಕ್ಷ್ಮೀ ಯಾದವ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು. ಮೋಹನ ಮಾಳದಕರ, ಸುರೇಶ ಅಂಬೂರೆ, ಚಂದ್ರಹಾಸ ಮಿಟ್ಟಾ, ಮಾನು ಜಗದೀಶ, ರಮೇಶ ಕುಲಕರ್ಣಿ, ಉಮೇಶ ಯಾದವ, ಮಹಾಂತೇಶ ಶಹಾಪುರಕರ, ಲಕ್ಷ್ಮಣ ಆದೋನಿ ಸಂಗೀತ ಸೇವೆ
ನೀಡಿದರು.

ಕಲಾವಿದರಾದ ಲಕ್ಷ್ಮಣ ಗುತ್ತೇದಾರ, ಉಷಾ ಕುಲಕರ್ಣಿ, ಸಗರನಾಡು ಕಲಾ ವೇದಿಕೆ ಅಧ್ಯಕ್ಷ ರಾಜಶೇಖರ ಗೆಜ್ಜಿ ವೇದಿಕೆಯಲ್ಲಿದ್ದರು. ಶಿವುಕುಮಾರ ಮಸ್ಕಿ, ವೆಂಕಟೇಶ ಕುಲಕರ್ಣಿ ಕಾಮನಟಗಿ, ಶಶಿಕಾಂತ ರೆಡ್ಡಿ ಬಾಚಿಮಟ್ಟಿ, ರವಿಕುಮಾರ ಗುತ್ತೇದಾರ್, ಪ್ರಕಾಶ ಕುಲಕರ್ಣಿಗೆ ಸನ್ಮಾನಿಸಲಾಯಿತು. ರಾಘವೇಂದ್ರ ಭಕ್ರಿ ಇದ್ದರು.

ಎಚ್.ರಾಠೋಡ ನಿರೂಪಿಸಿದರು. ರಮೇಶ ಕುಲಕರ್ಣಿ ಸ್ವಾಗತಿಸಿದರು. ಮಲ್ಲಪ್ಪ ಹೂಗಾರ ವಂದಿಸಿದರು. ಸಂಗೀತ ಕಾರ್ಯಕ್ರಮ ನೆರೆದವರು ಮನಸೂರೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.