ಮಂಗಳವಾರ, ಮೇ 17, 2022
24 °C

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಕಚೇರಿಯಿಂದ ಗಾಂಧಿವೃತ್ತ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ರೈತರು ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕಲು ಯತ್ನಿಸುತ್ತಿದೆ. ಇದು ಪ್ರಜಾತಂತ್ರ ವಿರೋಧಿ ನೀತಿ. ರೈತರಿಗೆ ಮರಣ ಶಾಸನವಾಗಿರುವ ಕಾಯ್ದೆಗಳನ್ನು ರದ್ದುಪಡಿಸಬೇಕು’ ಎಂದು ನೇತೃತ್ವ ವಹಿಸಿದ್ದ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಆಗ್ರಹಿಸಿದರು.

‘ತೈಲ ಸೇರಿದಂತೆ ಎಲ್ಲ ಬೆಲೆಗಳು ಗಗನ ಮುಟ್ಟಿವೆ. ಜನಸಾಮಾನ್ಯರು ಜೀವಿಸಲು ತೊಂದರೆ ಪಡುವಂತಾಗಿದೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

‘ನೂತನ ಕೃಷಿ ಕಾಯ್ದೆಗಳಿಂದ ಯಾರು ಬೇಕಾದರೂ ಜಮೀನು ಖರೀದಿಸಬಹುದು. ₹ 5ಲಕ್ಷಕ್ಕೆ ಖರೀದಿಸಿದ ಜಮೀನನ್ನು 5 ಕೋಟಿಗೆ ಮಾರುವ ಅಂಬಾನಿ, ಅದಾನಿಯಂತಹ ಬಂಡವಾಳ ಶಾಹಿಗಳಿಗೆ ಸರ್ಕಾರ ಮಣೆಹಾಕಿದೆ. ಕೃಷಿ ಉತ್ಪನ್ನ ಖರೀದಿ ಲೈಸನ್ಸ್ ಇಲ್ಲದೆ ಖರೀದಿಸಿದರೆ ಮೋಸ ಮಾಡುವ ಸಾಧ್ಯತೆಯಿದೆ’ ಎಂದು ದೂರಿದರು.

ಗ್ರೇಡ್ 2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜಾರೂಪಕುಮಾರ ನಾಯಕ, ರಾಜಾ ವೇಣುಗೋಪಾಲ ನಾಯಕ, ವಿಠ್ಠಲ್ ಯಾದವ್, ರಾಜಾ ಕುಮಾರ ನಾಯಕ, ರಾಜಾ ಸುಶಾಂತ ನಾಯಕ, ನಿಂಗರಾಜ್ ಬಾಚಿಮಟ್ಟಿ, ಮುದಿಗೌಡ ಕುಪ್ಪಿ, ಪ್ರಕಾಶ್ ಗುತ್ತೇದಾರ್, ನಿಂಗಪ್ಪ ಬಾದ್ಯಾಪುರ, ಮಲ್ಲಣ್ಣ ಸಾಹುಕಾರ ಮುಧೋಳ, ಸೂಗುರೇಶ ವಾರದ, ಸೋಮನಾಥ ಡೊಣ್ಣಿಗೇರಾ, ಅಬ್ದುಲ್ ಗಫರ್ ನಗನೂರಿ, ಮಹಿಬೂಬ ಒಂಟಿ, ದೇವೇಂದ್ರ ಮುದ್ನೂರು, ಈರಣ್ಣ ಚೌಧರಿ ಮುದ್ನೂರು, ರಮೇಶ್ ದೊರೆ ಆಲ್ದಾಳ, ವೆಂಕಟೇಶ್ ಹೊಸಮನಿ, ಮಾನಪ್ಪ ಸುಗೂರ, ಚನ್ನು ದೇವಾಪುರ, ನಂದನಗೌಡ ದೇವಾಪುರ, ಭೀಮುನಾಯಕ ಕಾಮನಟಗಿ, ವೆಂಕಟೇಶ ಬೇಟೆಗಾರ, ನಾಗರಾಜ ದೇವತ್ಕಲ್, ಮಾನಪ್ಪ ಸಾಹುಕಾರ ಆಲ್ದಾಳ, ರವಿ ಸಾಹುಕಾರ ಆಲ್ದಾಳ, ನಿಂಗಪ್ಪ ಬೇನಿಗಿಡ, ಹನುಮಂತ್ರಾಯ ಮಕಾಶಿ, ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು