ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆಯಲ್ಲಿ ಜಾತ್ರೆಗೆ ತೆರಳಿದ ಭಕ್ತರು

Last Updated 21 ನವೆಂಬರ್ 2022, 7:42 IST
ಅಕ್ಷರ ಗಾತ್ರ

ನಾರಾಯಣಪುರ: ವಿಜಯಪುರ ಜಿಲ್ಲೆಯ ಅರಕೇರಾ ಗ್ರಾಮದಲ್ಲಿ ನಡೆಲಿರುವ ಅಮೋಘ ಸಿದ್ದೇಶ್ವರರ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಲು, ಸ್ಥಳೀಯ ಅಮೋಘ ಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದ 11 ಜನ ಯುವಕರು ಶನಿವಾರದಿಂದ ಪಾದಯಾತ್ರೆಯನ್ನು ಆರಂಭಿಸಿದರು.

ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ನ.23 ರಂದು ಜರಗುವ ಅಮೋಘ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಸೇರಿದಂತೆ ಭಂಡಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪಾದಯಾತ್ರಿ ಸಿದ್ದು ಕಮಲಾಪುರ ಮಾತನಾಡಿ ಕಳೆದ 9 ವರ್ಷಗಳಿಂದ ಪಾದಯಾತ್ರೆಯ ಮೂಲಕ ಅರಕೇರಾ ಜಾತ್ರೆಗೆ ತೆರಳಲಾಗುತ್ತಿದೆ ಎಂದು ತಿಳಿಸಿದರು.

ಆಂಜನೇಯ ದೊರೆ, ರಮೇಶ ಕೋಳುರ, ಸಿದ್ದು ನಾಗರಬೆಟ್ಟ, ದ್ಯಾಮಣ್ಣ, ಗದೆಪ್ಪ ಕಂಬಳಿ. ಮಲ್ಲು ತಪ್ಪಲಕಟ್ಟಿ, ಕಾಶೀನಾಥ ಹೂಗಾರ, ಪರಶುರಾಮ್ ಹಗರಟಗಿ, ಅವಿನಾಶ ದೊಡಮನಿ, ಮೌನೇಶ ಹಳ್ಳೆರ, ಮುತ್ತಪ್ಪ ಕಂಬಳಿ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT