ಯಾದಗಿರಿ: ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ನೀಡದೆ ಸತಾಯಿಸುತ್ತಿದ್ದು, ಇದನ್ನು ಖಂಡಿಸಿ ಫೆ.22ರಂದು ಜಿಲ್ಲಾ ಪಂಚಾಯಿತಿ ಬಳಿ ನೂರಾರು ಕೂಲಿಕಾರರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ್ ನದಾಫ್ ತಿಳಿಸಿದರು.

‘ಗ್ರಾಮ ಪಂಚಾಯಿತಿಗಳಲ್ಲಿ ಕೂಲಿಗಾರರಿಗೆ ಉದ್ಯೋಗ ನೀಡದಿದ್ದರಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಾರಕೊಮ್ಮೆ ಖಾತ್ರಿ ಯೋಜನೆಯಡಿ ಉದ್ಯೋಗ ನೀಡಿ ಹಣ ನೀಡುವುದನ್ನು ವಿಳಂಬ ಮಾಡುತ್ತಾರೆ. ಜೊತೆಗೆ 15 ದಿನಗಳಾದರೂ ಕೂಲಿ ನೀಡುವುದಿಲ್ಲ. ಮಾರ್ಚ್ 31ರೊಳಗೆ 150 ದಿನಗಳ ಕಾಲ ನಿರಂತರ ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕು. ಕೂಲಿ ಕೊಡಲು ಆಗ್ರಹಿಸಿದ ಕಡೆ ಮಾತ್ರ ಪಿಡಿಒಗಳು ನೀಡುತ್ತಾರೆ’ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ’ ಆರೋಪಿಸಿದರು.

‘ನಮ್ಮ ಸಂಘಟನೆ ಎಲ್ಲೆಲ್ಲಿ ಗಟ್ಟಿಯಾಗಿದಿಯೋ ಅಲ್ಲಿ ಮಾತ್ರ ಉದ್ಯೋಗ ನೀಡುತ್ತಾರೆ. ಇಲ್ಲದ ಕಡೆ ಉದ್ಯೋಗ ಇಲ್ಲ, ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಕ್ಕಾಗಿ ಅರ್ಜಿ ಸ್ವೀಕರಿಸಲು ಪಿಡಿಒಗಳು ಮುಂದಾಗುತ್ತಿಲ್ಲ. ಈ ಧೋರಣೆ ಖಂಡಿಸಿಜಿಲ್ಲೆಯ ಆಯಾ ತಾಲ್ಲೂಕು ಪಂಚಾಯಿತಿಗಳ ಮುಂದೆ ಪ್ರತಿಭಟನೆ ಮಾಡಲಾಗಿದೆ. ಕೊನೆಯ ಎಚ್ಚರಿಕೆಯಾಗಿ ಜಿಲ್ಲಾ ಪಂಚಾಯಿತಿ ಬಳಿ ಪ್ರತಿಭಟನೆ ಮಾಡುತ್ತೇವೆ. ಅಂದು ನಮ್ಮ ಬೇಡಿಕೆ ಈಡೇರಿದ್ದರೆ ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ’ ಎಂದು ಪ್ರಕಟಿಸಿದರು.

‘ಅಂದು ಮಧ್ಯಾಹ್ನ 12 ಗಂಟೆಗೆ ನಗರದ ಸುಭಾಷ ವೃತ್ತದಿಂದ ಜಿಲ್ಲಾ ಪಂಚಾಯಿತಿ ಕಾರ್ಯಾಲಯದವರೆಗೆ ಮೆರವಣಿಗೆ ಮಾಡುತ್ತೇವೆ. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ, ಜೆಎಂಎಸ್ನ ರಾಜ್ಯ ಉಪಾಧ್ಯಕ್ಷೆ ನೀಲಾ ಕೆ, ಮಲ್ಲಪ್ಪ ಕೊಡ್ಲಿ ಸೇರಿದಂತೆ ಪ್ರಗತಿಪರ ಹೋರಾಟಗಾರರು ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ದುಡಿದವರಿಗೆ ಕೂಲಿ ಹಣ ನೀಡಬೇಕು. ಪ್ರೋತ್ಸಾಹ ಧನ ನೀಡಬೇಕು. ಕೂಲಿಕಾರರಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕು. ಸಲಕರಣೆ ಬಾಡಿಗೆ ವೆಚ್ಚ ಕೆಲ ಕಡೆ ಮಾತ್ರ ನೀಡುತ್ತಿದ್ದಾರೆ. ಇದನ್ನು ಎಲ್ಲ ಕಡೆ ನೀಡಬೇಕು. ವರ್ಷದಲ್ಲಿ 200ದಿನ ಕೆಲಸ, ದಿನಕ್ಕೆ ₹600 ಕೂಲಿ ನೀಡಬೇಕು. ಇಬ್ರಾಹಿಂಪುರ ಗ್ರಾಮ ಪಂಚಾಯಿತಿಗೆ ಕೂಡಲೇ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಬಿ.ಅನಸೂಗುರ, ರಂಗಮ್ಮ ಕಟ್ಟಿಮನಿ, ಶರಣಪ್ಪ ಜಂಬಲದಿನ್ನಿ, ಬಾಬು ಗುಂಡಳ್ಳಿ, ರಮೇಶ ಕಡೇಚೂರ, ಬಾಬು ವಡಗೇರಿ ಕಡೇಚೂರು, ಮಾನಪ್ಪ ದೋರನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.