ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ತಮ್ಮನ ಬದಲು ಪರೀಕ್ಷೆ ಬರೆದ ಪೊಲೀಸ್‌ ಅಣ್ಣ!

ಬಾಗೇಪ‍ಲ್ಲಿಯ ಪೊಲೀಸ್‌ ಕಾನ್‌ಸ್ಟೆಬಲ್ ಕೃತ್ಯ, ತಪಾಸಣೆ ವೇಳೆ ಬಯಲು
Last Updated 23 ಸೆಪ್ಟೆಂಬರ್ 2020, 4:41 IST
ಅಕ್ಷರ ಗಾತ್ರ

ಯಾದಗಿರಿ:ನಾಗರಿಕ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಸೆ.20ರಂದು ನಡೆದ ಲಿಖಿತ ಪರೀಕ್ಷೆಯಲ್ಲಿ ತಮ್ಮನ ಬದಲು ಅಣ್ಣನೇಪರೀಕ್ಷೆ ಬರೆದು ಸಿಕ್ಕಿಬಿದ್ದಿದ್ದಾರೆ. ಅಣ್ಣನೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

‌ನಗರದ ಮಹಾತ್ಮಗಾಂಧಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಸಿಇಟಿ ನಡೆಯುತ್ತಿತ್ತು. ಕಾನ್‌ಸ್ಟೆಬಲ್ ಹುದ್ದೆಗೆ ಮರೆಪ್ಪ ಅವರು ಪರೀಕ್ಷೆ ಬರೆಯಬೇಕಿತ್ತು. ಆದರೆ, ಅವರ ಅಣ್ಣಚಿಕ್ಕಬಳ್ಳಾಪುರಜಿಲ್ಲೆಯ ಬಾಗೇಪಲ್ಲಿಯ ಪೊಲೀಸ್‌ ಕಾನ್‌ಸ್ಟೆಬಲ್ ದೇವರಾಜ ಮಲ್ಲಪ‍್ಪ ಹೆಗ್ಗಣಗೇರಿ ಪರೀಕ್ಷೆ ಬರೆಯುವಾಗ ಸಿಕ್ಕಿಬಿದ್ದಿದ್ದಾರೆ.

ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ,ಸ್ಟೇಷನ್‌ ಜಾಮೀನು ನೀಡಿ ಕಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಪ್ರತಿಕ್ರಿಯಿಸಿ,‘ತಮ್ಮನ ಬದ
ಲಾಗಿ ಅಣ್ಣ ಪರೀಕ್ಷೆ ಬರೆಯುವಾಗ ಸಿಕ್ಕಿಬಿದ್ದಿದ್ದಾರೆ. ಈಗಾಗಲೇ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಕಾನ್‌ಸ್ಟೆಬಲ್‌ ಆಗಿರುವ ಅಣ್ಣನ ವಿರುದ್ಧ ಇಲಾಖೆ ಶಿಸ್ತುಕ್ರಮ ಕೈಗೊಳ್ಳಲಿದೆ’ ಎಂದರು.

‘‍ಪರೀಕ್ಷೆ ಪಾರದರ್ಶಕವಾಗಿ ನಡೆದಿದೆ. 13 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ನಡೆದಿದ್ದು, 4,085 ಅಭ್ಯರ್ಥಿಗಳಲ್ಲಿ 412 ಗೈರಾಗಿದ್ದರು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಯಾವ ಅಭ್ಯರ್ಥಿಗಳೂ ಅನುಮಾನ ಪಡುವುದು ಬೇಡ’ ಎಂದು ಅವರು ಹೇಳಿದರು.

ಮಾಸ್ಕ್‌ನಿಂದ ತಪ್ಪಿಸಿಕೊಂಡರು: ಪರೀಕ್ಷೆಗೆ ಹಾಜರಾಗುವವರುಮಾಸ್ಕ್‌ ಧರಿಸುವುದು ಕಡ್ಡಾಯವಾಗಿದ್ದು,ಮಾಸ್ಕ್‌ ಹಾಕಿಕೊಂಡು ಯಾಮಾರಿಸಿದ್ದಾರೆ. ತಮ್ಮನ ಪರೀಕ್ಷೆ ಬರೆಯಲುದೇವರಾಜ ಚಿಕ್ಕಬಳ್ಳಾಪುರದಿಂದ ರಜೆ ಹಾಕಿ ಬಂದಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT