ಯರಗೋಳ: ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಬುಧವಾರ ಕರ್ಪ್ಯೂ ಸಂಪೂರ್ಣ ಯಶಸ್ವಿಯಾಗಿದೆ. ಹಾಲು, ಹಣ್ಣು, ತರಕಾರಿ, ಕಿರಾಣಿ ಅಂಗಡಿಗಳು ಬೆಳಿಗ್ಗೆ 10 ಗಂಟೆಯವರೆಗೂ ತೆರೆದಿದ್ದವು.

ಗ್ರಾಮ ಪಂಚಾಯಿತಿ, ಪೊಲೀಸ್, ಗ್ರಾಮ ಲೆಕ್ಕಿಗ ಮತ್ತು ಸಹಾಯಕರು ಬಟ್ಟೆ, ಮೊಬೈಲ್, ಗ್ಯಾರೇಜ್, ಪಾನಶಾಪ್, ಕಬ್ಬಿಣ, ಮಾಂಸ, ಹೋಟೆಲ್‌ಗಳ ಬಾಗಿಲು ಮುಚ್ಚಿಸಿದರು. ಮೆಡಿಕಲ್, ಆಸ್ಪತ್ರೆಗಳು ತೆರೆದಿದ್ದವು. ಗುಂಪಾಗಿ ಸೇರುತ್ತಿದ್ದ ಜನರನ್ನು ಚದುರಿಸಲಾಯಿತು.

ಆಟೊ, ಬೈಕ್, ಕ್ರೂಸರ್ ಸಂಚಾರ ನಿಲ್ಲಿಸಲಾಗಿತ್ತು. ಬಸ್‌ಗಳು ಸಂಚರಿಸಿದವು. ಸಾರ್ವಜನಿಕರು ಹಲವು ಗ್ರಾಮಗಳಲ್ಲಿ ಬಂದ್‌ಗೆ ಬೆಂಬಲಿಸಿರುವುದು ಕಂಡುಬಂತು.

ಮದುವೆ, ತೊಟ್ಟಿಲು, ದೇವರು ಸಮಾರಂಭದಲ್ಲಿ ಜನರು ಕಾಣಿಸಿಕೊಂಡರು. ಮುಖಕ್ಕೆ ಮಾಸ್ಕ್ ಹಾಕುವುದನ್ನು ಜನ ಮರೆತಿದ್ದರು. ಕೃಷಿ ಮತ್ತು ಕಟ್ಟಡ ಕಾರ್ಮಿಕರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ತೊಡಗಿದ್ದರು.

ಮಲಕಪ್ಪನಳ್ಳಿ, ಅಲ್ಲಿಪುರ, ವಡ್ನಳ್ಳಿ, ಕಂಚಗಾರಳ್ಳಿ, ಗುಲಗುಂಜಿ, ವೆಂಕಟೇಶ ನಗರ, ಕಂಚಗಾರಳ್ಳಿ, ಖಾನಳ್ಳಿ, ಅರಿಕೇರಾ ಬಿ., ಕ್ಯಾಸಪ್ಪನಳ್ಳಿ, ಬಸವಂತಪುರ, ಹೆಡಗಿಮದ್ರಾ, ಅಬ್ಬೆತುಮಕೂರು, ಮುದ್ನಾಳ, ಚಾಮನಳ್ಳಿ, ಬಂದಳ್ಳಿ, ಯಡ್ಡಳ್ಳಿ, ಬೆಳಗೇರಾ, ಹೊನಗೇರಾ, ಕಟ್ಟಿಗೆ ಶಾಹಾಪುರ, ಮೋಟ್ನಳ್ಳಿ ಗ್ರಾಮಗಳಲ್ಲಿ ಕರ್ಪ್ಯೂ ವಾತಾವರಣವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.