ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ: ಪ.ಪಂ ಚುನಾವಣೆಗೆ ಸಕಲ ಸಿದ್ಧತೆ

Published 26 ಡಿಸೆಂಬರ್ 2023, 16:25 IST
Last Updated 26 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ಹುಣಸಗಿ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಇಂದು ಪ್ರಥಮ ಚುನಾವಣೆ ನಡೆಯಲಿದ್ದು ತಾಲ್ಲೂಕು ಆಡಳಿತ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. 

ಮಂಗಳವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವಣದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಲು ಸಿಬ್ಬಂದಿ ಆಗಮಿಸಿದ್ದರು. ಬೆಳಿಗ್ಗಿಯಿಂದಲೇ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವಿಧ ವಾರ್ಡ್‌ಗಳಿಗೆ ನೇಮಕವಾದ ಪಿಆರ್‌ಒ ಹಾಗೂ ಎಪಿಆರ್‌ಒ ಅವರಿಗೆ ಅಗತ್ಯ ಪರಿಕರಗಳನ್ನು ನೀಡಿದರು.

ಮತಗಟ್ಟೆಗಳು: 1ರಿಂದ 8ನೇ ವಾರ್ಡ್‌ ಮತದಾರರಿಗೆ ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ (ಊರಾನ ಶಾಲೆಯಲ್ಲಿ) ಮತಗಟ್ಟೆ ತೆರೆಯಲಾಗಿದೆ.

ವಿದ್ಯಾನಗರ ಪ್ರಾಥಮಿಕ ಶಾಲೆಯಲ್ಲಿ 9ನೇ ವಾರ್ಡ್,  10 ಮತ್ತು 11ನೇ ವಾರ್ಡ್‌ಗಳಿಗೆ ಪಶು ಚಿಕಿತ್ಸಾಲಯದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. 12 ರಿಂದ 15ನೇ ವಾರ್ಡ್‌ಗೆ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಯುಕೆಪಿ ಕ್ಯಾಂಪ್‌ನಲ್ಲಿ ಮತಗಟ್ಟೆ ನಿರ್ಮಿಸಲಾಗಿದೆ. 16ನೇ ವಾರ್ಡ್‌ಗೆ ಭಾಗ್ಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಮಾಡಲಾಗಿದೆ.

ವಾರ್ಡ್ ನಂ 2, 5, 8, 9, 12, 13, 14 ಸೂಕ್ಷ್ಮ ಹಾಗೂ 4, 7ನೇ ವಾರ್ಡ್‌ಗಳನ್ನು ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.

ಪಟ್ಟಣದ 16 ವಾರ್ಡ್‌ಗಳ ಒಟ್ಟು 6,370 ಪುರುಷ, 6,094 ಮಹಿಳೆಯರು ಸೇರಿ ಒಟ್ಟು 12,475 ಮತದಾರರಿದ್ದಾರೆ. 9ನೇ ವಾರ್ಡ್‌ನಲ್ಲಿ ಓರ್ವ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ.

ವಾರ್ಡ್ ನಂ 9 ವಿದ್ಯಾನಗರ ಕಾಲೊನಿಯಲ್ಲಿ ಅತಿಹೆಚ್ಚು 1,369 ಮತದಾರರು, 14ನೇ ವಾರ್ಡ್ ಯುಕೆಪಿ ಕ್ಯಾಂಪ್ ಪ್ರದೇಶದಲ್ಲಿ 1,227 ಮತದಾರರಿದ್ದಾರೆ.

ವಾರ್ಡ್ ನಂ7 ಪಡಶೆಟ್ಟಿ ಕಾಲೊನಿಯಲ್ಲಿ ಅತ್ಯಂತ ಕಡಿಮೆ (203 ಪುರುಷ, 214 ಮಹಿಳಾ) 417 ಮತದಾರರು ಇದ್ದಾರೆ.

ಅಗತ್ಯ ಪೊಲೀಸ್ ಬಂದೋಬಸ್ತ್: ಯಾವುದೇ ತೊಂದರೆಯಾಗದಂತೆ ಮತದಾನ ನಡೆಯಲು ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. 1 ಡಿವೈಎಸ್ಪಿ, 3 ಸರ್ಕಲ್ ಇನ್ಸ್‌ಪೆಕ್ಟರ್, 10 ಪಿಎಸ್ಐ, 11 ಎಎಸ್ಐ ಹಾಗೂ ಮುಖ್ಯ ಪೇದೆ 70 ಪೊಲೀಸರು ಹಾಗೂ 2 ಡಿಎಅರ್ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಹುಣಸಗಿ ಪಿಎಸ್ಐ ಚಂದ್ರಶೇಖರ ನಾರಾಯಣಪುರ ಮಾಹಿತಿ ಪ್ರಜಾವಾಣಿಗೆ ನೀಡಿದರು.

ಬಹಿರಂಗ ಪ್ರಚಾರ ಅಂತ್ಯವಾಗಿದ್ದರೂ ಅಭ್ಯರ್ಥಿಗಳು ಹಾಗೂ ಅವರ ಮನೆಯ ಸದಸ್ಯರು ತಮ್ಮ ವಾರ್ಡ್‌ನಲ್ಲಿರುವ ಸಂಬಂಧಿಕರ, ಆಪ್ತರ ಮನೆಗಳಿಗೆ ತೆರಳಿ ಉಭಯ ಕುಶಲೋಪಚಾರ ವಿಚಾರಿಸಿಕೊಳ್ಳುವ ಜೊತೆಯಲ್ಲಿ ತಮ್ಮ ಆಶೀರ್ವಾದದಿಂದಲೇ ಗೆಲುವು ಸಾಧ್ಯ ಎಂದು ಮತಯಾಚನೆ ಮಾಡಿದ್ದಾರೆ.

ಕೊನೆಯ ಕ್ಷಣದವರೆಗೂ ಕಸರತ್ತು ಮುನ್ನಡೆಸಿಕೊಂಡು ಬಂದಿದ್ದು, ಕೆಲ ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಮೀರಿಸುವಂತೆ ಪಕ್ಷೇತರ ಅಭ್ಯರ್ಥಿಗಳು ತಮ್ಮದೇ ತಂತ್ರ ರೂಪಿಸಿದ್ದಾರೆ.

ಶಾಂತಿಯುತ ಮತದಾನಕ್ಕೆ ಪೊಲೀಸ್‌ ಭದ್ರತೆ 1 ಡಿವೈಎಸ್ಪಿ, 3 ಸರ್ಕಲ್ ಇನ್ಸ್‌ಪೆಕ್ಟರ್, 10 ಪಿಎಸ್ಐ ನಿಯೋಜನೆ
ಹುಣಸಗಿ ಪಟ್ಟಣ ಪಂಚಾಯಿತಿ ಚುನಾವಣೆ ಶಾಂತ ರೀತಿಯಲ್ಲಿ ಮತದಾನ ನಡೆಯಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ
ಬಸಲಿಂಗಪ್ಪ ನೈಕೋಡಿ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT