ಶುಕ್ರವಾರ, ಜುಲೈ 1, 2022
27 °C
ಪಿಎಸ್‌ಐ: ಮರುಪರೀಕ್ಷೆ ನಡೆಸಿ

ಎನ್‌ಎಸ್‌ಯುಐನಿಂದ ಪ್ರತಿಭಟನೆ, ಸಿಎಂ, ಗೃಹ ಸಚಿವರ ರಾಜೀನಾಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದನ್ನು ಖಂಡಿಸಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ಮಾಡಲಾಯಿತು.

ನಗರದ ಪದವಿ ಮಹಾವಿದ್ಯಾಲಯದಿಂದ ಹೊರಟ ಮೆರವಣಿಗೆ ಸುಭಾಷ ವೃತ್ತದಲ್ಲಿ ಜಯಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

545 ಪಿಎಸ್‌ಐಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ರದ್ದು ಮಾಡಬೇಕು ಮತ್ತು ಮರುಪರೀಕ್ಷೆ ನಡೆಸಬೇಕು. ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಕ್ರಮ ನಡೆಸಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ತಕ್ಷಣವೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನಿಡಬೇಕು ಎಂದು ಆಗ್ರಹಿಸಿದರು.

ಅಕ್ರಮದಲ್ಲಿ ನೇರವಾಗಿ ವಿದ್ಯಾ ಹಾಗರಗಿ ಕಲಬುರಗಿ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಕೂಡಲೇ ಇವರನ್ನು ಬಂಧಿಸಿ ಇವರು ನಡೆಸುತ್ತಿರುವ ವಿದ್ಯಾಸಂಸ್ಥೆಯ ಪರವಾನಗಿ ರದ್ದುಪಡಿಸಿ ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಂಡು ಅರ್ಹತೆ ಇದ್ದರೂ ಉದ್ಯೋಗದಿಂದ ವಂಚಿತರಾಗಿದ ಪರವಾಗಿ ಹೋರಾಡುತ್ತೇವೆ ಎಂದರು.

ಅಕ್ರಮದಲ್ಲಿ ಭಾಗಿಯಾದವರನ್ನು ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಬಹಳಮಂದಿ ಆಯ್ಕೆಯಾಗಿದ್ದಾರೆ. ಪರೀಕ್ಷೆಯಲ್ಲಿ ಅಕ್ರಮ ಮಾಡಲು ಬ್ಲೂಟೂತ್ ಸಾಧನ ಬಳಸಿದ್ದಾರೆ. ₹30ರಿಂದ 40 ಲಕ್ಷ ರೂಪಾಯಿಗಳಿಗೆ ಹುದ್ದೆಗಳು ಬಿಕರಿಯಾಗಿವೆ. ಸರ್ಕಾರದ ಉನ್ನತ ಮಟ್ಟದಲ್ಲಿಯೇ ಅವ್ಯವಹಾರಕ್ಕೆ ಕುಮ್ಮಕ್ಕು ಮತ್ತು ಆಶೀರ್ವಾದ ಸಿಕ್ಕಿದೆ. ಹೀಗಾಗಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಿಂದಾಗಿ ಸುಭಾಷ ವೃತ್ತದಲ್ಲಿ ಕೆಲ ಕಾಲ ಟ್ರಾಫಿಕ್‌ ಜಾಂ ಉಂಟಾಗಿತ್ತು. ನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ರಾಜ್ಯ ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಜಯಕುಮಾರ ಕವಲಿ ಮುಂಡರಗಿ, ಜಿಲ್ಲಾಧ್ಯಕ್ಷ ಹೊನ್ನೇಶ ದೊಡ್ಡಮನಿ, ಮುಖಂಡರಾದ ರಾಘವೇಂದ್ರ ಮಾನಸಗಲ್, ಮಾಣಿಕರಡ್ಡಿ ಕುರಕುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ನಾಯಕ ವರ್ಕನಳ್ಳಿ, ದೇವೇಂದ್ರ ಬಾವೂರ ಮುಂಡರಗಿ, ನಿರಂಜನ ರಾಠೋಡ, ವೆಂಕಟೇಶ ಚಿನ್ನಾಕರ, ಆಕಾಶ ಪವಾರ ಮುಂಡರಗಿ, ವಿಶ್ವನಾಥರಡ್ಡಿ, ರಾಮು ಬಳಿಚಕ್ರ, ಹಣಮಂತ ಚವಾಣ್‌, ವಿಜಯ ಕಂದಳ್ಳಿ, ಮಹೇಶ ಕೋಟಗೇರಾ, ದೇವು ಭೀಮನಳ್ಳಿ, ಸಾಬಣ್ಣ, ಕುಮಾರ, ಅಶೋಕ ಗಣಪುರ, ಬಸವರಾಜ, ಶಿವಪ್ಪ, ರಾಜು ವರ್ಕನಳ್ಳಿ, ಮಹೇಶ, ಅಂಜು ಕೂಯಿಲೂರ, ರವಿ, ಭೀಮು, ಬನ್ನಪ್ಪ, ಮಲ್ಲು ಯಡ್ಡಳ್ಳಿ, ಮಂಜುನಾಥ ಮೇತ್ರಿ ಮಲ್ಹಾರ, ಕೃಷ್ಣ ಚವಾಣ್‌, ರವಿ, ವೆಂಕಟೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.