ಯಾದಗಿರಿ: ಜಿಲ್ಲೆಯ ವಿವಿಧೆಡೆ ಸೋಮವಾರ ಬೆಳಗಿನ ಜಾವ ಉತ್ತಮ ಮಳೆಯಾಗಿದ್ದು, ಧಗೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಶುರುವಾದ ಮಳೆ, ಒಂದು ಗಂಟೆ ಕಾಲ ಸುರಿಯಿತು.
ತಾಲ್ಲೂಕಿನ ಯರಗೋಳ ವಲಯದಲ್ಲಿ ರಾತ್ರಿ ಜೋರು ಮಳೆಯಾಗಿದ್ದು, ಬೆಳಗಿನ ಸಮಯ ತುಂತುರು ಮಳೆ ಸುರಿಯಿತು.
ಸುರಪುರದಲ್ಲಿ ಬೆಳಗಿನ ಜಾವದಲ್ಲಿ ಉತ್ತಮ ಮಳೆ ಆಗಿದೆ. ವಾತಾವರಣ ಸಂಪೂರ್ಣ ತಂಪಾಗಿದೆ.
ಶಹಾಪುರದಲ್ಲಿ ಬೆಳಗಿನ ಜಾವ ಉತ್ತಮ ಮಳೆಯಾಗಿದೆ. ಹುಣಸಗಿ, ನಾರಾಯಣಪುರ, ಸೈದಾಪುರದಲ್ಲಿ ತುಂತುರು ಮಳೆ, ಕೆಂಭಾವಿಯಲ್ಲಿ ಮೋಡ ಕವಿದ ವಾತಾವರಣ ಇದೆ.