ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ವಿವಿಧೆಡೆ ಮಳೆ ಸಿಂಚನ

Published 2 ಜೂನ್ 2024, 16:07 IST
Last Updated 2 ಜೂನ್ 2024, 16:07 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ವಿವಿಧೆಡೆ ಭಾನುವಾರ ಸಂಜೆ ತುಂತುರು ಮಳೆಯಾಗಿದೆ. 

5ರಿಂದ 10 ನಿಮಿಷಗಳ ಕಾಲ ನಗರದಲ್ಲಿ ಮಳೆ ಸುರಿಯಿತು. ನಗರದಲ್ಲಿ ಸ್ವಲ್ಪ ಮಳೆ, ಮೋಡವಾದರೂ ವಿದ್ಯುತ್‌ ಕಟ್‌ ಆಗುತ್ತಿದೆ. ಹಲವಾರು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ನಗರ ನಿವಾಸಿಗಳು ಪರದಾಡಿದರು.

ತಾಲ್ಲೂಕಿನ ಸೈದಾಪುರದಲ್ಲಿ ಅರ್ಧ ಗಂಟೆ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಗುರುಮಠಕಲ್‌, ಕೆಂಭಾವಿಯಲ್ಲಿ ತುಂತುರು ಮಳೆ ಸುರಿದಿದೆ. ವಡಗೇರಾ ಪಟ್ಟಣದಲ್ಲಿ ಒಂದೂವರೆ ಗಂಟೆ ಮಳೆಯಾಗಿದೆ.

ಪಟ್ಟಣದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ಮಳೆ ನೀರಿನಿಂದಾಗಿ ಮನೆಯೊಂದು ಸೋರುತ್ತಿದ್ದು, ಮಳೆ ನೀರಿಗೆ ಮನೆಯವರು ಪಾತ್ರೆಗಳನ್ನು ಇಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT