ಸೈದಾಪುರ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸಿ.ಸಿ ರಸ್ತೆಯಲ್ಲಿ ಸಂಗ್ರವಾದ ಮಳೆ ನೀರಿನಲ್ಲಿ ಸಾಹಸಮಯವಾಗಿ ಸಂಚರಿಸುತ್ತಿರುವ ವಾಹನ ಸವಾರರು
ರವೀಂದ್ರಕುಮಾರ ಕಡೇಚೂರು
ವೀರೇಶ ಸಜ್ಜನ
ಹೇಮರೆಡ್ಡಿ ಮಲ್ಲಮ್ಮ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗಿನ ಸಿ.ಸಿ ರಸ್ತೆಯಲ್ಲಿ ಉಂಟಾದ ಗುಂಡಿಗಳಿಂದ ಮಳೆಗಾಲ ನೀರು ನಿಂತು ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು.
ರವಿಂದ್ರ ಕುಮಾರ ಕಡೇಚೂರು ಸ್ಥಳೀಯ
ಕೆರೆಯಂತಾದ ಮುಖ್ಯರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವುದು ಜೀವಕ್ಕೆ ಸಂಕಟ ತಂದೊಡ್ಡಿದೆ. ಸ್ವಲ್ಪ ಯಾಮಾರಿದರೂ ಕೂಡ ಅಪಾಯ ತಪ್ಪಿದ್ದಲ್ಲ. ಚರಂಡಿ ಮೇಲೆ ಇದ್ದ ಅಂಗಡಿಗಳನ್ನು ತೆರವುಗೊಳಿಸಿ ಚರಂಡಿ ಸ್ವಚ್ಛಗೊಳಿಸಿದರೆ ರಸ್ತೆ ಮೇಲಿನ ನೀರು ಸರಾಗವಾಗಿ ಹರಿದು ಹೋಗುತ್ತವೆ
ವೀರೇಶ ಸಜ್ಜನ ವಲಯಾಧ್ಯಕ್ಷ ಜಯ ಕರ್ನಾಟಕ ರಕ್ಷಣಾ ಸೇನೆ ಸೈದಾಪುರ
ಈ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿರಲಿಲ್ಲ. ಶೀಘ್ರದಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನೂಕೂಲ ಮಾಡಿಕೊಡುತ್ತೇನೆ
ಸುನೀಲ್ ರಾಠೋಡ ಸಹಾಯಕ ಇಂಜಿನಿಯರ್ ಲೊಕೋಪಯೋಗಿ ಇಲಾಖೆ ಯಾದಗಿರಿ