ಸುರಪುರ: ವಿಜಯನಗರ ಸಾಮ್ರಾಜ್ಯ ಪತನದ ನಂತರ ಉದಯವಾದ ಸುರಪುರದ ಗೋಸಲ ಸಂಸ್ಥಾನ ಆಧ್ಯಾತ್ಮದ ಆಚರಣೆಗಳಿಗೆ ಹೆಚ್ಚಿನ ಮಹತ್ವ ನೀಡಿತ್ತು. ಕಳೆದ ಮೂರು ಶತಮಾನಗಳಿಂದ ನಿರಂತರ ನಡೆಯುತ್ತಿರುವ ಈ ಸಂಪ್ರದಾಯಗಳು ಸ್ವಾತಂತ್ರ್ಯ ನಂತರವೂ ಮುಂದುವರಿದುಕೊಂಡು ಬಂದಿರುವುದು ವಿಶೇಷ.

ಇಲ್ಲಿನ ಅರಸರು ತಮಗೆ ಅಧ್ಯಾತ್ಮ ಸಲಹೆ, ಸೂಚನೆ ನೀಡಲು ಒಬ್ಬ ರಾಜಗುರುಗಳನ್ನು ಮತ್ತು ದೇವಸ್ಥಾನಗಳ ಚಟುವಟಿಕೆಗಳಿಗೆ ಸಲಹೆ ತೆಗೆದುಕೊಳ್ಳಲು ಮತ್ತೊಬ್ಬ ರಾಜಗುರುಗಳಿಗೆ ರಾಜಾಶ್ರಯ ಜಹಾಗೀರುಗಳನ್ನು ಕೊಟ್ಟು ನೇಮಕ ಮಾಡಿಕೊಂಡಿದ್ದರು. ಅರಮನೆಯ ರಾಜಗುರುಗಳು ಆಂಧ್ರಪ್ರದೇಶದ ಬುಕ್ಕಪಟ್ಟಣಂ ಮತ್ತು ದೇಗುಲಗಳ ರಾಜಗುರುಗಳು ಆಂಧ್ರಪ್ರದೇಶದ ಶಂಖಾವರಂ ಪ್ರದೇಶದವರು. ಇಬ್ಬರೂ ತಮ್ಮ ಹೆಸರುಗಳ ಮುಂದೆ ತಮ್ಮ ಊರಿನ ಹೆಸರು ಉಳಿಸಿಕೊಂಡಿದ್ದಾರೆ. ಆದರೆ ಅರಸರು ಮತ್ತು ಸಾರ್ವಜನಿಕರು ಅವರಿಗೆ ರಾಜಗುರುಗಳು ಎಂದೇ ಸಂಬೋಧಿಸುತ್ತಾರೆ.

ದೇಗುಲಗಳ ರಾಜಗುರು ಮೊದಲು ವಿಜಯನಗರದಲ್ಲಿದ್ದರು. ಸುರಪುರ ಸಂಸ್ಥಾನದಲ್ಲಿ ದೇಗುಲಗಳ ನಿರ್ಮಾಣ ಹೆಚ್ಚಾಯಿತು. ಆರಾಧ್ಯ ದೈವ ವೇಣುಗೋಪಾಲಸ್ವಾಮಿಯ ದೊಡ್ಡ ದೇವಸ್ಥಾನವನ್ನೂ ಕಟ್ಟಲಾಯಿತು. ಈ ದೇವಸ್ಥಾನಗಳ ಅಧ್ಯಾತ್ಮ ಸಲಹೆಗಳಿಗೆ ರಾಜಗುರುಗಳ ಅಗತ್ಯತೆ ಇದ್ದ ಕಾರಣ ಇಲ್ಲಿನ ಅರಸರು ವಿಜಯನಗರದಲ್ಲಿ (ಹಂಪಿ) ವಾಸವಾಗಿದ್ದ ಶಂಖಾವರಂ ಮನೆತನದವರಿಗೆ ಕರೆಸಿಕೊಂಡು ಜವಾಬ್ದಾರಿ ವಹಿಸಿದರು.

ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಸಂಕ್ರಾಂತಿ, ಯುಗಾದಿ, ಹಾಲೋಕಳಿ ಜಾತ್ರೆ ಮತ್ತು ದಸರಾ ಉತ್ಸವಗಳ ಪರಂಪರೆ ಇದೆ. ಪ್ರತಿ ಉತ್ಸವಕ್ಕೆ ರಾಜಗುರುಗಳ ಉಪಸ್ಥಿತಿ ಅಗತ್ಯ. ಈಗ ಯುಗಾದಿ ಹೊರತುಪಡಿಸಿ ಉಳಿದ ಉತ್ಸವಗಳು ವಿಜೃಂಭಣೆಯಿಂದ ಆಚರಿಸಲ್ಪಡುತ್ತಿವೆ.

ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ ನಡೆಯುತ್ತದೆ. ಸಂಜೆ ಮಂಗಳಾರುತಿ ಇರುತ್ತದೆ. ವಿಶೇಷ ದಿನಗಳಲ್ಲಿ ಸಂಜೆಯೂ ಅಲಂಕಾರ, ಪೂಜೆಯ ನಂತರ ರಾಜಗುರುಗಳ ಆಗಮನವಾಗುತ್ತದೆ.
ಗರ್ಭಗುಡಿಯ ಪಕ್ಕದಲ್ಲಿ ರಾಜಗುರುಗಳಿಗೆ ವಿಶೇಷ ಆಸನವಿರುತ್ತದೆ, ರಾಜಗುರುಗಳ ಸಮ್ಮುಖದಲ್ಲಿ ಪ್ರಧಾನ ಅರ್ಚಕರು ಮತ್ತೊಮ್ಮೆ ಮಂಗಳಾರುತಿ ಮಾಡುತ್ತಾರೆ. ನಂತರ ಅರಮನೆಯಿಂದ ಅರಸರು ಅಥವಾ ಪ್ರತಿನಿಧಿಯ ತೆಂಗಿನಕಾಯಿಯೊಂದಿಗೆ ಬರುತ್ತಾರೆ. ಆಗ ರಾಜಗುರುಗಳಿಗೆ ವಿಶೇಷ ತುಳಸಿಯ ಹಾರ ಹಾಕಿ ಗೌರವಿಸಲಾಗುತ್ತದೆ. ಮೊದಲ ತೀರ್ಥ ರಾಜಗುರುಗಳಿಗೆ ನೀಡುತ್ತಾರೆ. ನಂತರ ಮಂಗಳಾರುತಿ, ತೀರ್ಥ ಪ್ರಸಾದ ವಿನಿಯೋಗವಾಗುತ್ತದೆ. ಅರಸರು ಮನೆಗೆ ತೆರಳಿದ ಮೇಲೆ ಸಾರ್ವಜನಿಕರಿಗೆ ತೀರ್ಥ ವಿನಿಯೋಗವಾಗುತ್ತದೆ.

ಸಂಕ್ರಾಂತಿ ಸಮಯದಲ್ಲಿ ಒಂದು ದಿನ, ಹಾಲೋಕಳಿ ಜಾತ್ರೆಯಲ್ಲಿ ಕೃಷ್ಣಜನ್ಮಾಷ್ಟಮಿ ಮತ್ತು ದೇವಸ್ತಂಭಾರೋಹಣದ ಎರಡು ದಿನ ಮತ್ತು ದಸರಾ ಉತ್ಸವದಲ್ಲಿ 10 ದಿನ ಈ ಪದ್ಧತಿ ನಡೆದುಕೊಂಡು ಬಂದಿದೆ. ಈ ಸಂಪ್ರದಾಯಗಳನ್ನು ಇಲ್ಲಿನ ಜನ ಗೌರವಿಸುತ್ತಾರೆ. ತಾವು ಪದ್ಧತಿಗಳನ್ನು ಕಣ್ತುಂಬಿಕೊಂಡು ಉತ್ಸವಗಳಲ್ಲಿ ಭಾಗವಹಿಸಿದ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ನಮ್ಮ ಪೂರ್ವಜರು ಹಲವಾರು ದೇಗುಲಗಳನ್ನು ನಿರ್ಮಿಸಿದ್ದಾರೆ. ಅವರ ಸಂಪ್ರದಾಯಗಳನ್ನು ಈಗಲೂ ಮುಂದುವರಿಸಿದ್ದೇವೆ. ಇದರಿಂದ ನಮಗೆ ಮತ್ತು ಜನರಿಗೆ ಶುಭವಾಗಲಿ ಎಂಬುದು ನಮ್ಮ ಆಪೇಕ್ಷೆ
ರಾಜಾ ಕೃಷ್ಣಪ್ಪನಾಯಕ ಸಂಸ್ಥಾನಿಕ

ಕಳೆದ ಮೂರು ತಲೆಮಾರುಗಳಿಂದ ಈ ಪದ್ಧತಿ ನನಗೆ ನೆನಪಿದೆ. ನಮ್ಮ ತಂದೆ ರಾಮಾಚಾರ್ಯ ನಮ್ಮ ಅಣ್ಣ ಸೀತಾರಾಮ ಆಚಾರ್ಯ ಅವರ ನಂತರ ನಾನು ಈಗ ಅದರ ಭಾಗವಾಗಿದ್ದೇನೆ
ರಘುನಾಥ ಆಚಾರ್ಯ ರಾಜಗುರು

ವೇಣುಗೋಪಾಲಸ್ವಾಮಿ ದೇವಸ್ಥಾನಗಳಲ್ಲಿ ನಡೆಯುವ ಉತ್ಸವಗಳಿಗೆ ಮೊದಲು ರಾಜಗುರುಗಳು ಮತ್ತು ರಾಜರೊಂದಿಗೆ ಚರ್ಚೆ ನಡೆಯುತ್ತದೆ. ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ
ಆಂಜನೇಯಚಾರ್ಯಲು ಪ್ರಧಾನ ಅರ್ಚಕ

ಮಂಗಳವಾದ್ಯ ಹಗಲು ದೀವಟಿಗೆ: ಸಾಮಾನ್ಯವಾಗಿ ದೀವಟಿಗೆಯನ್ನು ರಾತ್ರಿ ಸಮಯದಲ್ಲಿ ಬೆಳಕಿಗಾಗಿ ಉರಿಸಲಾಗುತ್ತದೆ. ಹಗಲು ದೀವಟಿಗೆಗೆ ವಿಶೇಷ ಮಹತ್ವವಿದೆ. ವಿಶೇಷ ಗೌರವ ನೀಡಲು ಈ ಪದ್ಧತಿ ಆನುಸರಿಸಿಕೊಂಡು ಬರಲಾಗಿದೆ. ಉತ್ಸವದಲ್ಲಿ ಭಾಗವಹಿಸಲು ರಾಜಗುರುಗಳನ್ನು ಅವರ ಮನೆಯಿಂದ ಹಗಲು ದೀವಟಿಗೆಯೊಂದಿಗೆ ವಾದ್ಯ ಬಾರಿಸುತ್ತಾ ದೇಗುಲಕ್ಕೆ ಕರೆದೊಯ್ಯಲಾಗುತ್ತದೆ. ಅದೇ ತಂಡ ಅರಮನೆಗೆ ತೆರಳಿ ರಾಜನರನ್ನು ಸಹ ಅದೇ ಪದ್ಧತಿಯಲ್ಲಿ ದೇಗುಲಕ್ಕೆ ಕರೆದುಕೊಂಡು ಬರುತ್ತಾರೆ. ಈ ಕಾರ್ಯ ಮಾಡುವ ಜನರಿಗೆ ಉಂಬಳಿಯನ್ನು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.