ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ‘ದೀಪಾವಳಿ ವಿಶೇಷಾಂಕ’ ಬಿಡುಗಡೆ

ಹಲವು ವೈವಿಧ್ಯತೆಯಿಂದ ಕೂಡಿದ ವಿಶೇಷಾಂಕ: ಶಾಸಕ ವೆಂಕಟರೆಡ್ಡಿ
Last Updated 30 ಅಕ್ಟೋಬರ್ 2021, 0:51 IST
ಅಕ್ಷರ ಗಾತ್ರ

ಯಾದಗಿರಿ: ‘ಪ್ರಜಾವಾಣಿ’ ಪತ್ರಿಕೆ ಹೊರ ತಂದಿರುವ ‘ದೀಪಾವಳಿ’ ವಿಶೇಷಾಂಕವನ್ನು ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ವೀರಬಸವಂತರೆಡ್ಡಿ ಮುದ್ನಾಳ ಅವರು ಬಿಡುಗಡೆ ಮಾಡಿದರು.

ನಗರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಹಾಲಿ, ಮಾಜಿ ಶಾಸಕರು ‘ದೀಪಾವಳಿ’ ವಿಶೇಷಾಂಕ ಬಿಡುಗಡೆ ಮಾಡಿ ಶುಭಹಾರೈಸಿದರು.

ಈ ವೇಳೆ ಮಾತನಾಡಿದ ಶಾಸಕ ವೆಂಕಟರೆಡ್ಡಿ ಮುದ್ನಾಳ, ‘ಪ್ರಜಾವಾಣಿ’ಯ ‘ದೀಪಾವಳಿ’ ವಿಶೇಷಾಂಕ ಹಲವು ವೈವಿಧ್ಯತೆಯಿಂದ ಕೂಡಿದೆ. ಕಥೆ, ಕವನ, ಪ್ರವಾಸ ಕಥನ, ಅಡುಗೆ, ಮಕ್ಕಳ ಕಥೆಗಳು, ಸ್ಪರ್ಧಾ ಕಥೆಗಳು ಓದುಗರನ್ನು ಸೆಳೆಯುತ್ತವೆ ಎಂದು ಅಭಿಪ್ರಾಯಪಟ್ಟರು.

ವಿಶೇಷಾಂಕ ಇಡೀ ರಾಜ್ಯ ಮಟ್ಟದಲ್ಲಿ ಬಿಡುಗಡೆಯಾಗಿದ್ದರಿಂದ ಉತ್ತರ ಕರ್ನಾಟಕದವರು, ದಕ್ಷಿಣ ಕರ್ನಾಟಕವನ್ನು, ದಕ್ಷಿಣ ಕರ್ನಾಟಕದವರು ಉತ್ತರ ಕರ್ನಾಟಕವನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಹಾಸ್ಯ, ವಿಡಂಬನೆ, ಸಿನಿಮಾ, ಕೋವಿಡ್‌ ಸಂಕಷ್ಟದ ದಿನಗಳು, ಭೀಮಾ ನದಿ ಬಗ್ಗೆ, ಭಕ್ಷ್ಯಭೋಜನ ಸೇರಿದಂತೆ ಹಲವಾರು ವಿಷಯಗಳನ್ನು ಓದುಗರಿಗೆ ವಿಶೇಷಾಂಕ ಉಣಬಡಿಸಲಿದೆ ಎಂದರು.

‘ನಾನು ವಿದ್ಯಾರ್ಥಿ ಜೀವನದಲ್ಲಿ ಹಲವಾರು ಪುಸ್ತಕಗಳನ್ನು ಓದಿದ್ದೇನೆ. ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನಾರ್ಜನೆ ಸಿಗಲಿದೆ’ ಎಂದರು.

ಈ ವೇಳೆ ಮಾಜಿ ಶಾಸಕ ವೀರಬಸವಂತರೆಡ್ಡಿ ಮುದ್ನಾಳ, ಶಾಸಕರ ಆಪ್ತ ಸಹಾಯಕ ಸುಧೀರ್‌ ಪಾಟೀಲ, ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ, ಪ್ರಸಾರಂಗ ಪ್ರತಿನಿಧಿ ಶರಣಗೌಡ ಅರಿಕೇರಿ, ಜಾಹಿರಾತು ಪ್ರತಿನಿಧಿ ಪರಮೇಶರೆಡ್ಡಿ, ಛಾಯಾಗ್ರಾಹಕ ರಾಜಕುಮಾರ ನಳ್ಳಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT