ಕೆಂಭಾವಿ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ವಿವಿಧೆಡೆ ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಲಾಯಿತು.

ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ ಪಾಟೀಲ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ. ಮುಖ್ಯಾಧಿಕಾರಿ ಮಹ್ಮದ ಯುಸುಫ್ ಸೇರಿದಂತೆ ಪುರಸಭೆ ಸದಸ್ಯರು ಹಾಜರಿದ್ದರು.

ಧ್ವಜಾರೋಹಣದ ನಂತರ ವಿವಿಧ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಾಡ ಕಚೇರಿಯಲ್ಲಿ ಉಪತಹಶೀಲ್ದಾರ್ ಪ್ರವೀಣಕುಮಾರ ಧ್ವಜಾರೋಹಣ ನೆರವೇರಿಸಿದರು. ಕಂದಾಯ ನಿರೀಕ್ಷಕ ರಾಜೇಸಾಬ ಇದ್ದರು.

ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಅಮೋಜ ಕಾಂಬಳೆ, ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವನಾಥ ಹರಸೂರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಗಿರೀಶ ಕುಲಕರ್ಣಿ ಧ್ವಜಾರೋಹಣ ಮಾಡಿದರು. ಸ್ಪಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಂಕ್ರೆಪ್ಪ ದೇವೂರ ಧ್ವಜಾರೋಹಣ ನೆರವೇರಿಸಿದರು. ಡಿ.ಸಿ. ಪಾಟೀಲ, ಮುಖ್ಯಶಿಕ್ಷಕ ರೇವಣಸಿದ್ದಯ್ಯ ಸೇರಿದಂತೆ ಇತರರಿದ್ದರು.

ಯಾಳಗಿ ಗ್ರಾಮದ ಡಾ.ಅಂಬೇಡ್ಕರ್ ವೃತದಲ್ಲಿ 77ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪಿಡಿಓ ಸತೀಶ ಆಲಗೂರ ಧ್ವಜಾರೋಹಣ ನೆರವೇರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶ್ರೀನಿವಾಸ್ ಮಾಲಿ ಪಾಟೀಲ ಹಾಗೂ ರಾಮನಗೌಡ ಹೊಸಮನಿ ಮಾಲಾರ್ಪಣೆ ಮಾಡಿದರು. ಮುಖಂಡರಾದ ಮಹಾದೇವಪ್ಪ ಜಲಪುರ, ಶಿವಶರಣ ಯಾಳಗಿ, ಬಸವರಾಜ ಹೆಳವರ, ಭಾಸ್ಕರ, ದೇವರಡ್ಡಿ, ರಾಜು ನಾಗರಡ್ಡಿ, ರವಿ ನಾಗರಡ್ಡಿ ಸೇರಿದಂತೆ ಇತರರಿದ್ದರು.

ಪಟ್ಟಣದ ಭಾಜಪ ಕಾರ್ಯಾಲಯದಲ್ಲಿ ಪುರಸಭೆ ಸದಸ್ಯ ಶರಣಪ್ಪ ಯಾಳಗಿ ಹಾಗೂ ಉಮೇಶರೆಡ್ಡಿ ಯಲ್ಹೇರಿ ಧ್ವಜಾರೋಹಣ ನೆರವೇರಿಸಿದರು.

ಭೀಮನಗೌಡ ಮಲ್ಕಾಪುರ, ಮಂಜುನಾಥ ತುಂಬಗಿ, ರುದ್ರಗೌಡ ಕಾಚಾಪೂರ, ರಾಮಕೃಷ್ಣ ಯಲಮಟ್ಟಿ, ಮಲ್ಕಣ್ಣ ಮುದನೂರು, ಅಯ್ಯಣ್ಣ ಬಳಬಟ್ಟಿ, ಮಲ್ಲಿಕಾರ್ಜುನ ನಾಲವಾರ, ದಯಾನಂದ ಪತ್ತೆಪುರ, ರಮೇಶ ಜಾಧವ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.