ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ಸಮೀಪದ ರತ್ತಾಳ ಗ್ರಾಮದಲ್ಲಿ ಸಮಸ್ಯೆಗಳ ಸರಮಾಲೆ

ಮೂಲ ಸೌಲಭ್ಯ ವಂಚಿತ ರತ್ತಾಳ ಗ್ರಾಮ
Last Updated 24 ಡಿಸೆಂಬರ್ 2019, 16:05 IST
ಅಕ್ಷರ ಗಾತ್ರ

ಸುರಪುರ: ಎಲ್ಲೆಂದರಲ್ಲಿ ಕಸದ ರಾಶಿ, ಊರು ತುಂಬಾ ಹರಿಯುವ ಚರಂಡಿ ನೀರು, ಬಯಲೇ ಶೌಚಾಲಯ, ಆಗಾಗ ಕಾಡುವ ಸಾಂಕ್ರಾಮಿಕ ರೋಗಗಳು, ಬಸ್ ಕಾಣದ ಜನರು...

ಇಂತಹ ಹಲವು ಸಮಸ್ಯೆಗಳಿಂದ ನರಳುತ್ತಿರುವ ರತ್ತಾಳ ಗ್ರಾಮಸುರಪುರ ಪಟ್ಟಣದಕೇವಲ 4 ಕಿ.ಮೀ ಅಂತರದಲ್ಲಿ ಇದೆ. ಈ ಗ್ರಾಮದಲ್ಲಿ ಸುಮಾರು 2500 ಜನಸಂಖ್ಯೆ ಇದೆ. 6 ಜನ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ.

ಗ್ರಾಮದಲ್ಲಿ ಅಲ್ಲಲ್ಲಿ ಸಿ.ಸಿ ರಸ್ತೆಗಳು ಕಂಡುಬಂದರೂ ಸಮರ್ಪಕವಾಗಿಲ್ಲ. ಚರಂಡಿ ವ್ಯವಸ್ಥೆ ಇಲ್ಲವೇ ಇಲ್ಲ. ದಿನಾಲೂ ಬಿಡುವ ನಲ್ಲಿ ನೀರು ಇಡೀ ಗ್ರಾಮದ ತುಂಬೆಲ್ಲ ಹರಿಯುತ್ತದೆ. ಇದರಿಂದ ಗ್ರಾಮ ಗಬ್ಬೆದ್ದು ನಾರುತ್ತಿದೆ. ತೆಗ್ಗುಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ಅಧಿಕವಾಗಿದೆ. ರಸ್ತೆಗಳೆಲ್ಲ ಕೆಸರುಮಯವಾಗಿದ್ದು ಜನರು ತಿರುಗಾಡಲು ಪ್ರಯಾಸ ಪಡುವಂ
ತಾಗಿದೆ. ಅಗಾಗ ವಾಂತಿಭೇದಿ, ಡೆಂಗಿ ಬಾಧಿಸುವುದು ಸಾಮಾನ್ಯ.

ಇಂದಿನವರೆಗೂ ಗ್ರಾಮ ಸಾರಿಗೆ ಬಸ್ ಕಂಡಿಲ್ಲ. ಖಾಸಗಿ ವಾಹನಗಳ ಮೇಲೆ ಅವಲಂಬನೆ. ಸುರಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ತೆಗ್ಗು ಗುಂಡಿ
ಗಳು ಸಾಕಷ್ಟಿವೆ. ವಾಹನ ಸವಾರರು ಸಂಚರಿಸಲು ಹೆದರುವ ಸ್ಥಿತಿ ಇದೆ.

ದೊಡ್ಡ ಗ್ರಾಮವಾಗಿದ್ದು ಜಾನುವಾರುಗಳ ಸಂಖ್ಯೆ ಅಧಿಕವಾಗಿದೆ. ಪಶು ಚಿಕಿತ್ಸೆಗೆ ಸಮೀಪದ ರಂಗಂಪೇಟೆಗೆ ಬರಬೇಕು. ಆರೋಗ್ಯ ಉಪ ಕೇಂದ್ರವಿದ್ದರೂ ಸಮರ್ಪಕ ಸಿಬ್ಬಂದಿ ಇಲ್ಲ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಪ್ರೌಢ ಶಿಕ್ಷಣಕ್ಕೆ ದೇವಿಕೇರಿ ಅಥವಾ ಸುರಪುರಕ್ಕೆ ಬರಬೇಕು. ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಶಾಲೆಗೆ ಬರುತ್ತಾರೆ. ಗ್ರಂಥಾಲಯದ ಅವಶ್ಯಕತೆ ಇದೆ.

ಸಾರ್ವಜನಿಕ ಶೌಚಾಲಯ ಇಲ್ಲ. ವೈಯಕ್ತಿಕ ಶೌಚಾಲಯಗಳು ಕಡಿಮೆ. ಹೀಗಾಗಿ ಗ್ರಾಮಸ್ಥರೆಲ್ಲ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಗ್ರಾಮಕ್ಕೆ ಸ್ವಾಗತ ಮಲಮೂತ್ರಗಳಿಂದಲೇ ಆಗುತ್ತದೆ. ಮಹಿಳೆಯರ ಪಾಡು ದೇವರೇ ಬಲ್ಲ.

ಬಹುತೇಕ ಗ್ರಾಮಸ್ಥರು ಕೃಷಿಯನ್ನು ಅವಲಂಬಿಸಿದ್ದಾರೆ. ಕೃಷಿ ಕೆಲಸಗಳು ದೊರೆಯದಿರುವುದರಿಂದ ಶೇಕಡ 25 ರಷ್ಟು ಜನ ಗುಳೆ ಹೋಗುತ್ತಾರೆ. ಕೋಲಿ, ಯಾದವ, ಕುರುಬ ಮತ್ತು ಪರಿಶಿಷ್ಟ ಜಾತಿ ಜನರು ಮಾತ್ರ ಇಲ್ಲಿದ್ದಾರೆ.

ರತ್ತಾಳ ಮತ್ತು ದೇವಿಕೇರಿಯನ್ನು ಮಾತ್ರ ಸೇರಿಸಿಕೊಂಡು ಗ್ರಾಮ ಪಂಚಾಯಿತಿ ರಚಿಸಲಾಗಿದೆ. ರತ್ತಾಳ ಗ್ರಾಮ ದೊಡ್ಡದಿದ್ದರೂ ದೇವಿಕೇರಿ ಕೇಂದ್ರಸ್ಥಾನ ಮಾಡಿರುವುದಕ್ಕೆ ರತ್ತಾಳ ಗ್ರಾಮಸ್ಥರ ಅಸಮಾಧಾನವಿದೆ.

ಗ್ರಾಮ ಪಂಚಾಯಿತಿಯಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಬರುವ ದಿನಗಳಲ್ಲಿ ಗ್ರಾಮವನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಸಬೇಕು. ಇದರಿಂದಾದರೂ ಗ್ರಾಮ ಅಭಿವೃದ್ಧಿ ಹೊಂದಬಹುದು ಎಂಬುದು ಕೆಲ ಗ್ರಾಮಸ್ಥರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT