ಸೈದಾಪುರ: ‘ಉತ್ತಮ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಅತ್ಯಗತ್ಯ. ತೆರವಾಗಿರುವ ಸ್ಥಾನದಲ್ಲಿ ನನ್ನನ್ನು ನಿಯೋಜಿಸಿರುವ ಕಾರಣ ಜವಾಬ್ದಾರಿ ಹೆಚ್ಚಾಗಿದೆ’ ಎಂದು ನೂತನ ಬಿಇಒ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.
ಯಾದಗಿರಿ ನಗರದಲ್ಲಿ ಸೈದಾಪುರ ಆತ್ಮೀಯರ ಬಳಗದಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಈಗಾಗಲೇ ನಾನು ಕ್ಷೇತ್ರ ಸಮನ್ವಯಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದು, ಈ ಕೆಲಸ ನಿರ್ವಹಿಸಲು ನೆರವಾಗಬಹುದು. ನಾನು ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳಲ್ಲಿನ ಆತ್ಮೀಯರು ನನ್ನನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಸಂತಸ ಉಂಟು ಮಾಡಿದೆ. ಮುಂದೆಯೂ ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿ’ ಎಂದು ಆಶಿಸಿದರು.
ವಿದ್ಯಾವರ್ಧಕ ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಸಾಬಯ್ಯ ರಾಯಪ್ಪನೋರ ರಾಮಸಮುದ್ರ, ಶಿಕ್ಷಕರಾದ ಕಾಶೀನಾಥ ಶೇಖಸಿಂದಿ, ರಾಚಯ್ಯ ಸ್ವಾಮಿ ಬಾಡಿಯಾಲ, ತೋಟೇಂದ್ರ ಸೇರಿದಂತೆ ಇದ್ದರು.
Quote - ‘ಉತ್ತಮ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಅತ್ಯಗತ್ಯ. ತೆರವಾಗಿರುವ ಸ್ಥಾನದಲ್ಲಿ ನನ್ನನ್ನು ನಿಯೋಜಿಸಿರುವ ಕಾರಣ ಜವಾಬ್ದಾರಿ ಹೆಚ್ಚಾಗಿದೆ’ ಎಂದು ನೂತನ ಬಿಇಒ ಮಲ್ಲಿಕಾರ್ಜುನ ಪೂಜಾರಿ ಅಭಿಪ್ರಾಯಪಟ್ಟರು.