ಕಂದಕೂರ (ಗುರುಮಠಕಲ್): ಗಡಿಯನ್ನು ಕಾಯುವ ಯೋಧರಂತೆ ಗ್ರಾಮಗಳ ಅಭ್ಯುದಯಕ್ಕೆ ಮಾಡುವ ನಿಸ್ವಾರ್ಥ ಸೇವೆಯೂ ದೇಶ ಸೇವೆಯಾಗುತ್ತದೆ ಎಂದು ಉಪನ್ಯಾಸಕ ಪುರುಷೋತ್ತಮ ಜೋಶಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅದ್ಯಯನ ಕೇಂದ್ರದ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಶುಕ್ರವಾರ ಜರುಗಿದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗಾಂಧೀಜಿಯವರ ಜನ್ಮ ಶತಮಾನೋತ್ಸವ ವರ್ಷ ಡಾ.ಎಸ್.ರಾದಾಕೃಷ್ಣನ್ ಅವರ ಅಧ್ಯಕ್ಷತೆಯ ಸಮಿತಿ ಶಿಕ್ಷಣದ ಜೊತೆಗೆ ಸಮಾಜ ಕಾರ್ಯದ ಅವಶ್ಯಕತೆ ಮನಗಂಡು ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಯನ್ನು ಆರಂಭಿಸಿತು. ಸದ್ಯ ವಾರ್ಷಿಕ ₹16 ಕೋಟಿ ಅನುದಾನವನ್ನು ದೇಶಾದ್ಯಂತ ಎನ್‌ಎಸ್‌ಎಸ್‌ಗಾಗಿ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಸಾಮಾನ್ಯ ಸೇವಾ ಚಟುವಟಿಕೆ, ರಕ್ತದಾನ ಮತ್ತು ಜಾಗೃತಿ ಚಟುವಟಿಕೆಗಳೆಂಬ ಮೂರು ಆಯಾಮಗಳಿವೆ. ಈ ಮೂರೂ ಆಯಾಮಗಳು ಒಳಗೊಂಡಂತಾ ಶಿಬಿರವು ನಮ್ಮಲ್ಲಿ ನಾಯಕತ್ವ ಗುಣ, ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳುವುದು ಮತ್ತು ಸೇವಾ ಮನೋಭಾವಗಳ ಉದ್ದೀಪನೆಯ ಮೂಲಕ ಸಮಾಜವನ್ನು ಸದೃಡಗೊಳಿಸಲಿವೆ ಎಂದರು.
ಪತ್ರಕರ್ತ ಅನಿಲ ಬಸೂದೆ ಮಾತನಾಡಿ, ಶಿಬಿರದಲ್ಲಿ ಕಲಿತದನ್ನು ಜೀವನದುದ್ದಕ್ಕೂ ಅನುಸರಿಸಿದರೆ ದೇಶದ ಉನ್ನತಿ ಸಾಧ್ಯ ಎಂದರು.
ಉಪನ್ಯಾಸಕ ರಾಯಪ್ಪ ಅವರು ಮಾತನಾಡಿದರು. ಪಿಡಿಒ ಮಹಮ್ಮದ್ ಅಲಿ ಜಮಾದಾರ, ಮುಖಂಡ ಜಾನ್ ವೆಲ್ಸಿ, ಮುಖ್ಯಶಿಕ್ಷಕ ಗಂಗಾಧರ ಮಾತನಾಡಿದರು.
ಶಿಬಿರಾರ್ಥಿಗಳಾದ ಜಯಶ್ರೀ, ಪ್ರವೀಣಕುಮಾರ, ವಾಸುದೇವ, ಸರೋಜಾ, ರವಿ, ಹಣಮಂತ ಶಿಬಿರದಲ್ಲಿ ತಮಗಾದ ಕಲಿಕೆ ಕುರಿತು ವಿವರಿಸಿದರು.
ಶಂಕರರೆಡ್ಡಿ ಕಂದಕೂರ, ಉಪನ್ಯಾಸಕ ಮರಿಯಪ್ಪ ನಾಟೇಕರ್, ಮುಖ್ಯಶಿಕ್ಷಕ ಗಂಗಾಧರ, ಎನ್‌ಎಸ್‌ಎಸ್ ಸಂಯೋಜಕ ಚಿನ್ನ ಆಶಪ್ಪ, ಹಣಮಂತ ದಾಸನ್, ಪತ್ರಕರ್ತರಾದ ರಾಜಲಿಂಗಪ್ಪ ಸಜ್ಜನ, ಮುಖಂಡ ಶರಬುದ್ಧೀನ್, ಎನ್‌ಎಸ್‌ಎಸ್ ಘಟಕಾಧಿಕಾರಿ ಬಾಬುರಾಯ ದೊರೆ, ಉಪನ್ಯಾಸಕರಾದ ಇಮ್ರಾನ್ ಖಾಜಿ, ಮಹೇಶ, ಪ್ರವೀಣ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.