ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇವಾಲಾಲ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಿರಿ’

ಸೈದಾಪುರ; ಸೇವಾಲಾಲ್‌ ಜಯಂತಿ ಆಚರಣೆ, ಶರಣಗೌಡ ಕಂದಕೂರ ಸಲಹೆ
Last Updated 16 ಫೆಬ್ರುವರಿ 2023, 6:19 IST
ಅಕ್ಷರ ಗಾತ್ರ

ಸೈದಾಪುರ: ‘ಯುವಜನತೆ ಸಂತ ಸೇವಾಲಾಲ್ ಮಹಾರಾಜರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಿರಿ’ ಎಂದು ಜೆಡಿಎಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಶರಣಗೌಡ ಕಂದಕೂರ ಹೇಳಿದರು.

ಪಟ್ಟಣದ ಗಾಂಧಿ ವೃತ್ತದಲ್ಲಿ ಸೇವಾಲಾಲ್ ಜಯಂತಿಯಲ್ಲಿ ಅವರು ಮಾತನಾಡಿದರು.

ನನ್ನ ತಂದೆಯವರಿಗೆ ಆರ್ಶೀವದಿಸಿದಂತೆ ಮುಂದಿನ ದಿನಗಳಲ್ಲಿ ನನಗೆ ಒಂದು ಅವಕಾಶ ನೀಡಿದರೆ ನಿಮ್ಮ ಸಮುದಾಯ ಮತ್ತು ತಾಂಡಗಳ ಅಭಿವೃದ್ಧಿಗೆ ನಾನು ಬದ್ಧನಾಗಿರುತ್ತೇನೆ. ಸೈದಾಪುರದಲ್ಲಿನ ಸೇವಾಲಾಲ್ ದೇವಸ್ಥಾನದ ನಿರ್ಮಾಣಕ್ಕೆ ₹5 ಲಕ್ಷ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಿ ದೇವಸ್ಥಾನದ ಕೆಲಸ ಪೂರ್ಣಗೊಳಿಸಿ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ರೈಲು ನಿಲ್ದಾಣದಿಂದ ಗಾಂಧಿ ವೃತ್ತದವರೆಗೆ ಹಮ್ಮಿಕೊಂಡಿದ್ದ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆಗೆ ಕೆಪಿಸಿಸಿ ಸದಸ್ಯ ಚಂದ್ರಶೇಖರ್ ವಾರದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳಪ್ಪ ಅರಿಕೇರಿ, ಮುಕುಂದ ಕುಮಾರ ಅಲಿಝಾರ್ ಚಾಲನೆ ನೀಡಿದರು.

ಸಮುದಾಯದ ಮಹಿಳೆಯರು, ಯುವಕ, ಯುವತಿಯರು ತಮ್ಮ ಸಾಂಪ್ರಾದಾಯಿಕ ಉಡುಗೆ ತೊಟ್ಟು, ನೃತ್ಯದ ಮೂಲಕ ವೇದಿಕೆಗೆ ಆಗಮಿಸಿದರು.

ಸೇವಲಾಲ್ ಸಂಘದ ಅಧ್ಯಕ್ಷ ಭೀಮು ಚವ್ಹಾಣ, ಗ್ರಾಮ ಪಂಚಾಯಿತಿ ಸದಸ್ಯರಾದ ಹಣಮಂತ, ವಲಿಯೋದ್ದೀನ್, ಶಾಂತಪ್ಪ ರಾಂಪುರ, ಅರ್ಜುನ ಚವ್ಹಾಣ, ಬಸವಂತರಾ ಯಗೌಡ ಪೊಲೀಸಪಾಟೀಲ ಸೈದಾಪುರ, ನರಸಪ್ಪ ಕವಡೆ, ರಾಮಣ್ಣ, ರಾಜು ಉಡುಪಿ, ರಾಜು ದೊರೆ, ಆನಂದ ಮಿರಿಯಾಲ್, ತಾಯಪ್ಪ ಬದ್ದೇಪಲ್ಲಿ, ಕುಂದನ್ ಕುಮಾರ, ಈಶ್ವರ ನಾಯಕ್, ಶಾಂತು ಜಾಧವ್, ಏಕನಾಥ್ ಚವ್ಹಾಣ, ಧರ್ಮರಾಜ್ ರಾಠೋಡ, ಅರ್ಜುನ ಚವ್ಹಾಣ, ಜಗನ್ನಾಥ, ಅಮರೇಶ ರಾಠೋಡ, ಗೋವಿಂದ, ಶ್ರೀನಿವಾಸ, ಸಚೀನ್, ಸುರೇಶ, ಶಂಕರ್, ರವೀಂದ್ರ, ವಿಜಯ್, ಪ್ರೇಮ್‍ಸಿಂಗ್, ಯಂಕಪ್ಪ, ಗೋಪಾಲ, ಆನಂದ, ರವೀಂದ್ರ, ರಮೇಶ, ವೆಂಕಟೇಶ ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.

ವಿವಿಧೆಡೆ ಆಚರಣೆ

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ, ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಲ್ಲಿ ಸಂತ ಸೇವಾಲಾಲ್ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಯಂತಿಯಲ್ಲಿ ತಹಶೀಲ್ದಾರ್ ಜಗದೀಶ ಚೌರ್ ಅವರು ಸೇವಾಲಾಲ್‌ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಉಪನ್ಯಾಸಕ ತಾರಾನಾಥ ಚವ್ವಾಣ, ಶೇಖರ ನಾಯಕ ಮಾರನಾಳ ತಾಂಡಾ, ಬಂಜಾರಾ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಸುನಾಯಕ, ತಾಲ್ಲೂಕು ಅಧ್ಯಕ್ಷ ನಿಂಗಾನಾಯಕ, ವಿಠಲ ಪವಾರ, ಬಾಬು ರಾಠೋದ, ಸೀತಾರಾಮ, ಸಂತೋಷ ರಾಠೋಡ, ಕೃಷ್ಣಾ, ಗುಂಡುರಾವ, ಜಯರಾಮ ಇದ್ದರು.

ಪಟ್ಟಣದ ವಿದ್ಯಾವಿಕಾಸ ಪ್ರಾಥಮಿಕ ಶಾಲೆಯಲ್ಲಿ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಿಸಲಾಯಿತು. ಬಸವರಾಜ ಸ್ವಾಮಿ ಸ್ಥಾವರಮಠ, ಶ್ರೀಕಾಂತ ಇಸಾಂಪುರ, ಶಿವರಾಜ ಇದ್ದರು.

ಬಲಶೆಟ್ಟಿಹಾಳ ಗ್ರಾಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸಂಗಯ್ಯ ಬಾಚ್ಯಾಳ ಅವರು ಸಂತ ಸೇವಾಲಾಲ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಈ ವೇಳೆ ಶಾಲೆಯ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು
ಇದ್ದರು.

ವಜ್ಜಲ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿ ಕೊಂಡಿದ್ದ ಜಯಂತಿಯಲ್ಲಿ ಸದಸ್ಯ ಶಾಂತಗೌಡ ಪಾಟೀಲ ಮಾತನಾಡಿದರು. ಮಲ್ಲನಗೌಡ ಅಮಲಿಹಾಳ, ರಾಮಚಂದ್ರ, ಕೃಷ್ಣಾ ನಾಯಕ, ಮುತ್ತಣ್ಣ ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.

‘ಇಂದಿಗೂ ಆದರ್ಶ’: ಕಕ್ಕೇರಾ: ‘ಸೇವಾಲಾಲರ ಪ್ರಖರ ಜ್ಞಾನದ ನುಡಿಗಳು ಇಂದಿಗೂ ಆದರ್ಶವಾಗಿವೆ’ ಎಂದು ಮುಖ್ಯ ಶಿಕ್ಷಕ ಚನ್ನಯ್ಯ ಹಿರೇಮಠ ಹೇಳಿದರು.

ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರಾದ ಬಸವಣ್ಣ, ಬುದ್ದ, ಗುರುನಾನಕ್, ಕಬೀರ ಮುಂತಾದ ಮಹಾ ಮಾನವತಾದಿಗಳ ಮಧ್ಯೆ ನಮ್ಮಂತಹ ಸಾಮಾನ್ಯ ಜಾನುವಾರುಗಳನ್ನು ಮೇಯಿಸುವ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ದನಗಾಯಿ ಗೋಪಾಲನಾಗಿದ್ದ ಸೇವಾಲಾಲ್, ಅಹಿಂಸಾ ಸತ್ಯದ ಮಾರ್ಗಗಳನ್ನು ಜನಸಾಮಾನ್ಯರಿಗೆ ಬೋಧಿಸಿದ ಮಹಾನ್ ಸಂತರಾಗಿದ್ದರು ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಾನಾನಾಯ್ಕ್, ಶಿಕ್ಷಕರಾದ ಗುಡದಪ್ಪ ಜಂಪಾ, ನಾರಾಯಣ, ವಿಜಯಲಕ್ಷ್ಮೀ, ಸೋಮನಾಥ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಸಮಾಜದ ಮುಖಂಡರು, ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT