ಶಹಾಪುರ: ‘ತಾಲ್ಲೂಕಿನ ಗೋಗಿ(ಕೆ) ಗ್ರಾಮದ ಜಯಮ್ಮ ಅವರ ಆತ್ಮಹತ್ಯೆ ಪ್ರಕರಣ ನಿಗೂಢವಾಗಿದೆ. ಈಗಾಗಲೇ ಕುಟುಂಬದ ಸದಸ್ಯರು ಕೊಲೆ ಶಂಕೆಯನ್ನು ವ್ಯಕ್ತಪಡಿಸಿದರು ಸಹ ಪೊಲೀಸರು ಸೂಕ್ತ ತನಿಖೆ ಮಾಡುತ್ತಿಲ್ಲ. ಹೀಗಾಗಿ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣ ಸ್ಥಾಪಿತ) ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

‘ಜಯಮ್ಮ ಅವರ ಕೊಲೆ ಪ್ರಕರಣ ಸತ್ಯಾಂಶ ಹೊರಬರಲಿ ಎನ್ನುವುದು ಕುಟುಂಬದ ಬೇಡಿಕೆಯಾಗಿದೆ. ಆದರೆ ಪೊಲೀಸರು ಸೂಕ್ತವಾದ ತನಿಖೆ ನಡೆಸುತ್ತಿಲ್ಲ. ಇಲ್ಲ ಸಲ್ಲದ ಸಬೂಬು ಹೇಳಿ ತನಿಖೆ ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಕುಟುಂಬ ವರ್ಗ ಆತಂಕಕ್ಕೆ ಒಳಗಾಗಿದೆ’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರೈತ ಮುಖಂಡರಾದ ಚೆನ್ನಪ್ಪ ಆನೇಗುಂದಿ, ದಾವಲಸಾಬ್ ನದಾಫ್,ಎಸ್. ಸಾಗರ, ಶರಣರಡ್ಡಿ ಹತ್ತಿಗೂಡೂರ. ಸುಭಾಸ ಹೊತಪೇಟ, ಶಿವಕುಮಾರ ದೊಡ್ಮನಿ, ಮಾನಪ್ಪ ಮದ್ರಿಕಿ, ಭೀಮಾಶಂಕರ ಕಟ್ಟಿಮನಿ, ರಮೇಶ ಗಾಂಜಿ, ದುರ್ಗಮ್ಮ ಕಟ್ಟಿಮನಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.