ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ: 41 ಶಾಲೆಗಳಿಗೆ ಕಾಯಂ ಶಿಕ್ಷಕರಿಲ್ಲ

Published 29 ಮೇ 2024, 5:25 IST
Last Updated 29 ಮೇ 2024, 5:25 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನಲ್ಲಿ 41 ಕಾಯಂ ಶಿಕ್ಷಕರು ಇಲ್ಲದ ಶಾಲೆಗಳಿವೆ.ಇವೆಲ್ಲದರ ನಡುವೆ ಶೈಕ್ಷಣಿಕ ವರ್ಷ ಹಲವು ಬದಲಾವಣೆಯೊಂದಿಗೆ ಬುಧವಾರ ಆರಂಭಗೊಳ್ಳಲಿದೆ.

ಪ್ರಸಕ್ತ ವರ್ಷ ಸರ್ಕಾರ ತಾಲ್ಲೂಕಿನ 26 ಶಾಲೆಗಳು ಎಲ್‌ಕೆಜಿಯಿಂದ ಆರಂಭಗೊಂಡರೆ, 18 ಶಾಲೆಗಳು ಆಂಗ್ಲ ಮಾಧ್ಯಮ ಶಾಲೆ, 10 ತಾಂತ್ರಿಕ ತರಬೇತಿ ಶಾಲೆಗಳು ಎಂದು ಗುರುತಿಸಿ ಆರಂಭಿಸಲಾಗುತ್ತಿದೆ. ಅಕ್ಷರ ಅವಿಷ್ಕಾರದ ಅಡಿಯಲ್ಲಿ ಮಹತ್ವದ ಹೆಜ್ಜೆಗಳನ್ನು ಇಡಲಾಗುತ್ತಿದೆ. ಅತಿಥಿ ಶಿಕ್ಷಕರು ಜೂನ್‌ 1ರಿಂದಲೇ ಶಾಲೆಗೆ ಆಗಮಿಸಲಿದ್ದಾರೆ. ತಾಲ್ಲೂಕಿನಲ್ಲಿ 41 ಶಾಲೆಗೆ ಕಾಯಂ ಶಿಕ್ಷಕರು ಇಲ್ಲ. ನಿಯೋಜನೆ ಮೇಲೆ ತಾತ್ಕಾಲಿಕವಾಗಿ ನೇಮಿಸಲಾಗಿದೆ ಎಂದು ಬಿಇಒ ಕಚೇರಿಯ ಮೂಲಗಳು ತಿಳಿಸಿವೆ.

‘ತಾಲ್ಲೂಕಿನಲ್ಲಿ 288 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. 881 ಶಿಕ್ಷಕರ ಕೊರತೆ ಇದೆ. ಅಲ್ಲದೆ 46 ಸರ್ಕಾರಿ ಪ್ರೌಢಶಾಲೆಗಳಿವೆ ಅದರಲ್ಲಿ 208 ಶಿಕ್ಷಕರ ಹುದ್ದೆ ಖಾಲಿ ಇವೆ. ಅದರಲ್ಲಿ ಹೆಚ್ಚಾಗಿ ಇಂಗ್ಲಿಷ್, ವಿಜ್ಞಾನ, ಗಣಿತ ಭಾಷೆಯ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪ್ರದೀಪ ಅಣಬಿ.

ತಾಲ್ಲೂಕಿನಲ್ಲಿ ಅನಧಿಕೃತವಾಗಿ ನಡೆಯುವ ಕೋಚಿಂಗ್ ಕೇಂದ್ರಗಳ ಜಾಲವಿದೆ. ಸರ್ಕಾರದಿಂದ ಯಾವುದೇ ಮಾನ್ಯತೆ ಹಾಗೂ ಪರವಾನಗಿ ಪಡೆದಿಲ್ಲ. ಅಲ್ಲದೆ ನಗರ ಪ್ರದೇಶದಲ್ಲಿ ಶಿಕ್ಷಕರು ಉಳಿದುಕೊಳ್ಳಲು ಮಕ್ಕಳ ದಾಖಲಾತಿಯನ್ನು ತೋರಿಸುತ್ತಾರೆ. ಆದರೆ ಹಾಜರಿ ಅಷ್ಟು ಇರುವುದಿಲ್ಲ ಇದರ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಅವರು.

ಇಂದಿನಿಂದ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಆಯಾ ಶಾಲಾ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕು
ರೇಣುಕಾ ಪಾಟೀಲ ಬಿಆರ್‌ಸಿ ಶಹಾಪುರ
ಶೈಕ್ಷಣಿಕ ವರ್ಷದಿಂದ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಜಾರಿಗೆ ತರಬೇಕು. ಶಾಲೆಗೆ ಚಕ್ಕರ್‌ ಹೊಡೆಯುವ ಶಿಕ್ಷಕರನ್ನು ಅಮಾನತುಗೊಳಿಸಬೇಕು.
ಪ್ರದೀಪ ಅಣಬಿ ಸಾಮಾಜಿಕ ಕಾರ್ಯಕರ್ತ

ಮಕ್ಕಳ ಡಬಲ್ ಎಂಟ್ರಿ

ಸೈನಿಕ ನವೋದಯ ಶಾಲೆಗೆ ಪ್ರವೇಶ ಪಡೆಯುವ ಉದ್ದೇಶದಿಂದ ಹಲವು ಪಾಲಕರು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆಯುತ್ತಾರೆ. ನಂತರ ಅವರನ್ನು ಅನಧಿಕೃತವಾಗಿ ನಡೆಯುವ ಕೋಚಿಂಗ್ ಕೇಂದ್ರದ ಶಾಲೆಯಲ್ಲಿ ಅಭ್ಯಾಸ ಮಾಡಲು ಬಿಡುತ್ತಾರೆ. ಇದು ಡಬಲ್ ಎಂಟ್ರಗೆ ಅವಕಾಶ ನೀಡಿದಂತೆ ಆಗುತ್ತದೆ. ‘ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಅಂತಹ ಮಕ್ಕಳು ಶಾಲೆಯಲ್ಲಿ ಪ್ರವೇಶ ಪಡೆದುಕೊಳ್ಳಲು ಅವಕಾಶ ನೀಡಿದ ಸರ್ಕಾರಿ ಶಾಲೆಯ ಮುಖ್ಯಗುರುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಬಿಇಒ ಕಚೇರಿ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT