ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಕುಸಿದ ನಗರಸಭೆ ಆಡಳಿತ ಯಂತ್ರ

Published 4 ಜುಲೈ 2023, 6:11 IST
Last Updated 4 ಜುಲೈ 2023, 6:11 IST
ಅಕ್ಷರ ಗಾತ್ರ

ಶಹಾಪುರ: ನಗರಸಭೆಯ 31 ವಾರ್ಡ್‌ಗಳ ಪೈಕಿ ಹೆಚ್ಚಿನವುಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಬಡಾವಣೆಯ ಜನರು ಪರದಾಡುತ್ತಿದ್ದಾರೆ. ಕುಡಿಯುವ ನೀರು, ಒಳಚರಂಡಿ ಸಮಸ್ಯೆ, ಹೂಳು ತುಂಬಿದ ಚರಂಡಿಯ ದುರ್ನಾತದಿಂದಾಗಿ ನಗರದ ಜನರು ಹೈರಾಣಾಗಿದ್ದಾರೆ.

ಶಹಾಪುರ-ಯಾದಗಿರಿ-ಸುರಪುರ ಹೆದ್ದಾರಿಯ ಕೊಂಡಿಯಾಗಿರುವ ಬಸವೇಶ್ವರ ವೃತ್ತದ ಹತ್ತಿರ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಾಣದ ಕಾರ್ಯ ಕೈಗೆತ್ತಿಕೊಂಡಿದೆ. ಹೆದ್ದಾರಿ ಎಡಭಾಗ ಮುಕ್ತಾಯವಾಗಿದೆ. ಬಲ ಭಾಗದ ಕೆಲಸ ಮಂದಗತಿಯಲ್ಲಿ ಸಾಗುತ್ತಿದ್ದು, ಸಂಚಾರಕ್ಕೆ ಸವಾಲಾಗಿ ಪರಿಣಮಿಸಿದೆ. ಬೇಸಿಗೆ ಸಂದರ್ಭದಲ್ಲಿ ಕೆಲಸ ಮುಕ್ತಾಯಗೊಳಿಸಿದ್ದರೆ, ತೊಂದ ರೆ ಬರುತ್ತಿರಲಿಲ್ಲ. ಮಳೆಗಾಲದಲ್ಲಿ ಕೆಲಸ ಆರಂಭಿಸಿರುವುದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ನರಸಭೆಯ ಜನಸಂಖ್ಯೆ 65, ಸಾವಿರ ಇದ್ದು, 12 ಸಾವಿರ ಕುಟುಂಬಗಳಿವೆ. 2,490 ನಲ್ಲಿ ಸಂಪರ್ಕ ಇವೆ. ಕೆಲ ವಾರ್ಡ್‌ಗಳಲ್ಲಿ ಕಿರು ನೀರು ಸರಬರಾಜಿನ ವ್ಯವಸ್ಥೆಯಿದೆ.

‘ಮುಂಗಾರು ಮುನಿಸಿಕೊಂಡಿ ದ್ದರಿಂದ ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಯಲ್ಲಿ ನೀರು ಇಲ್ಲವಾಗಿದೆ. ಫಿಲ್ಟರ್ ಬೆಡ್ ಕೆರೆಯಿಂದ ಮೂರು ದಿನಕ್ಕೆ ಒಮ್ಮೆ ನೀರು ಬಿಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನಗರದಲ್ಲಿ ಕಾಲಿಟ್ಟಿದೆ ಎಂದು ಆಸರ ಮೊಹಲ್ಲಾ ನಿವಾಸಿ ಆಯಿಷ್ ಪರ್ವನಿ ಜಮಖಂಡಿ ಅಸಮಾಧಾನ ವ್ಯಕ್ತಪಡಿಸಿದರು.

ನರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಮುಕ್ತಾಯವಾಗಿದೆ. ಜಿಲ್ಲಾಧಿಕಾರಿ ಸ್ನೇಹಲ್ ಆರ್ ನಗರಸಭೆಯ ಆಡಳಿತಾಧಿಕಾರಿಯಾಗಿ 2 ತಿಂಗಳು ಕಳೆದಿವೆ. ನಗರಸಭೆಗೆ ಈವರೆಗೂ ಭೇಟಿ ನೀಡಿಲ್ಲ. ನಗರದ ಸಮಸ್ಯೆ ಜಟಿಲವಾಗುತ್ತಲಿವೆ. ಪರಿಹಾರ ಮಾತ್ರ ಸಿಗುತ್ತಿಲ್ಲ. ನಗರಸಭೆಯಲ್ಲಿ ಹಲವು ವರ್ಷದಿಂದ ಕೆಲ ಸಿಬ್ಬಂದಿ ತಳವೂರಿದ್ದಾರೆ. ಸಣ್ಣಪುಟ್ಟ ಕೆಲ ಸಕ್ಕೆ ದಿನಾಲು ಅಲೆಯುವಂತೆ ಆಗಿದೆ. ಪೌರಾಯುಕ್ತರು ಯಾವಾಗ ನೋಡಿ ದರೂ ಸಭೆ, ಎನ್ನುತ್ತ ಕಚೇರಿಯಲ್ಲಿ ಇರು ವುದಿಲ್ಲ. ಬಡಾವಣೆಯ ಸಮಸ್ಯೆಯನ್ನು ಯಾರ ಮುಂದೆ ತೋಡಿಕೊಳ್ಳಬೇಕು ಎಂದು ಜಿಹ್ವೇಶ್ವರ ನಗರದ ನಿವಾಸಿ ಉಮೇಶ ಮುಡಬೂಳ ಪ್ರಶ್ನಿಸಿದ್ದಾರೆ.

ನಗರದ ಸಿ.ಬಿ. ಕಮಾನದಿಂದ ಹೊಸ ಬಸ್ ನಿಲ್ದಾಣದವರೆಗೆ ಹೆದ್ದಾರಿ ಬೀದಿ ದೀಪಗಳು ಕಣ್ಣು ಮುಚ್ಚಿವೆ. ರಾತ್ರಿ ಕತ್ತಲೆಯಲ್ಲಿ ತಿರುಗಾಡುವಂತೆ ಆಗಿದೆ. ಬೀದಿ ದೀಪ ಅಳವಡಿಸಲು ನಗರಸಭೆಯ ಸಿಬ್ಬಂದಿ ತಾಂತ್ರಿಕ ನೆಪ ಹೇಳುತ್ತಲೆ ಕಾಲಹರಣ ಮಾಡುತ್ತಿದ್ದಾರೆ.

ರಾತ್ರಿ ಸಮಯದಲ್ಲಿ ಮಹಿಳೆಯರು ಭೀತಿಯಲ್ಲಿ ಮನೆ ತಲುಪುವಂತೆ ಆಗಿದೆ. ನಗರಸಭೆ ತುರ್ತಾಗಿ ಹೂಳು ತುಂಬಿದ ಚರಂಡಿ ಸ್ವಚ್ಛಗೊಳಿಸುವುದು. ಬೀದಿ ದೀಪ ಅಳವಡಿಸಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಿಸಬೇಕು. ತುಕ್ಕು ಹಿಡಿದ ನಗರಸಭೆಯ ಆಡಳಿತ ವ್ಯವಸ್ಥೆಗೆ ಚಿಕಿತ್ಸೆ ನೀಡಬೇಕು ಎಂದು ನಗರದ ಜನರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT