ಸುರಪುರ: ‘ಅಮೂಲ್ಯವಾದ ಬಸವಾದಿ ಶಿವಶರಣ ವಚನ ಸಾಹಿತ್ಯವನ್ನು ಮಡಿವಾಳ ಮಾಚಿದೇವರು ರಕ್ಷಿಸಿದ್ದಾರೆ. ವಚನಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿನ ಅಂಕು-ಡೊಂಕು, ಮೌಢ್ಯ, ಕಂದಾಚಾರಗಳನ್ನು ತಿದ್ದಿ, ನೇರವಾಗಿ ಹೇಳಿ ಅಮೂಲ್ಯ ಸಂದೇಶ ನೀಡಿದ್ದಾರೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಶರಣರಲ್ಲಿ ತನ್ನದೇ ಆದ ವಿಶೇಷತೆ ಹೊಂದಿ, ಶರಣರಿಗೆಲ್ಲ ರಕ್ಷಕನಾಗಿ ನಿಂತಂತಹ ಶರಣರಲ್ಲಿ ಮಾಚಿದೇವರು ಪ್ರಮುಖರು. ಇಂದು ನಮಗೇನಾದರೂ ವಚನ ಸಾಹಿತ್ಯ ಲಭ್ಯ ಇದೆ ಎಂದರೆ ಅದಕ್ಕೆ ಕಾರಣ ಮಾಚಿದೇವರು’ ಎಂದರು.

‘ಪ್ರತಿಯೊಬ್ಬರು ಮಡಿವಾಳ ಮಾಚಿದೇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ದಾರಿಯಲ್ಲಿ ಸಾಗಬೇಕು. ಕಾಯಕ ಬಂಧುಗಳಾಗಿರುವ ಮಡಿವಾಳ ಸಮಾಜ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದಲ್ಲಿ ಪ್ರಗತಿ ಸಾಧಿಸಬೇಕು. ಮಕ್ಕಳನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಬೇಕ’ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಹುಸೇನಸಾಬ್ ಸರಕಾವಸ್ ಮಾತನಾಡಿ, ‘ಮಡಿವಾಳ ಮಾಚಿದೇವರು ಸಮಾಜಕ್ಕೆ ಶುದ್ಧ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟರು. ಅವರ ವಚನಗಳು ಸಮಾಜಕ್ಕೆ ದಾರಿ ದೀಪವಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಾಡಬೇಕು’ ಎಂದರು.

ಯುವ ಮುಖಂಡ ರಾಜಾ ಸುಶಾಂತ ನಾಯಕ, ಮಡಿವಾಳ ಸಮಾಜದ ಮುಖಂಡರಾದ ಸಾಯಿಬಣ್ಣ ಮಡಿವಾಳರ, ಬಸವರಾಜ ಚಂದನಕೇರಿ, ಚಂದ್ರಶೇಖರ ಗೋಗಿ, ಧರ್ಮರಾಜ ಮಡಿವಾಳರ, ಅಪ್ಪಣ್ಣ ಮಡಿವಾಳರ, ದೇವಿಂದ್ರಪ್ಪ ಮುಷ್ಠಳ್ಳಿ, ನಿಂಗಪ್ಪ ಕಟ್ಟಿಮನಿ, ಯಲ್ಲಪ್ಪ ಮಂಗಿಹಾಳ, ದೇವಿಂದ್ರಪ್ಪ ಚಂದನಕೇರಿ, ವಿಶ್ವನಾಥ ಹುಂಡೇಕಲ್, ಶೇಖರ್, ಸಂತೋಷ್, ಬಸವರಾಜ ಚಂದನಕೇರಿ, ಬಸವರಾಜ್ ಹುಂಡೇಕಲ್, ಸಮಾಜದ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.