ನಗನೂರ (ಕೆಂಭಾವಿ): ನಗನೂರ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣ ಪೀಠ ತ್ಯಾಗ ಮಾಡಿದ್ದಾರೆ.

‘13 ವರ್ಷಗಳ ಕಾಲ ನಿರಂತರವಾಗಿ ಶರಣಬಸವೇಶ್ವರರ ಹಾಗೂ ಭಕ್ತರ ಸೇವೆ ಮಾಡಿದ ತೃಪ್ತಿ ನನಗಿದೆ. ವಯೋಸಹಜ ಕಾಯಿಲೆಗಳಿರುವ ಕಾರಣ ಮಠದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪೀಠ ತ್ಯಾಗ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

‘ನನಗೆ ನಾಲ್ಕು ಜನ ಗಂಡು ಮಕ್ಕಳಿದ್ದಾರೆ. ಅದರಲ್ಲಿ ಅರ್ಹರನ್ನು ದಾಸೋಹ ಮಠದ ಪೀಠಾಧಿಕಾರಿ, ಅರ್ಚಕ ಹಾಗೂ ಮಠದ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಬೇಕು ಎಂದು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.

ಭಕ್ತರಲ್ಲಿ ಆತಂಕ: ಕರ್ನಾಟಕ ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ರಾಜ್ಯಗಳಲ್ಲಿ ಮಠದ ಭಕ್ತರಿದ್ದಾರೆ. ಈ ಬೆಳವಣಿಗೆಯಿಂದ ಅವರು ಆತಂಕಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.