ಯಾದಗಿರಿ: ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಳೆದ 14 ವರ್ಷಗಳ ಅವಧಿಯಲ್ಲಿ 398 ಪ್ರಕರಣಗಳನ್ನು ಸ್ವೀಕರಿಸಿ, ಅವುಗಳಲ್ಲಿ 331 ಪ್ರಕರಣಗಳನ್ನು ಇತ್ಯರ್ಥಿಸಿದೆ. ಸಂತ್ರಸ್ತರಿಗೆ ₹ 1.25 ಕೋಟಿ ಪರಿಹಾರ ಕೊಡುವಂತೆಯೂ ಆದೇಶ ಹೊರಡಿಸಿದೆ.

ಸೇವಾ ನ್ಯೂನ್ಯತೆ ಎಸಗಿ ಗ್ರಾಹಕರಿಗೆ ತೊಂದರೆ ನೀಡಿದವರನ್ನು ಆಯೋಗದ ಮುಂದೆ ಕರೆತಂದು ನಿಲ್ಲಿಸಿದವರಿಗೆ ಪರಿಹಾರ ಕೊಡಿಸುವ ಯಾದಗಿರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 2012ರಲ್ಲಿ ಸ್ಥಾಪಿಸಲಾಯಿತು. ಆದರೆ, ವಂಚನೆಗೆ ಒಳಗಾದವರು ಅರಿವಿನ ಕೊರತೆಯಿಂದ ಆಯೋಗದ ಕದ ತಟ್ಟಿದವರ ಸಂಖ್ಯೆ ಬಹಳ ಕಡಿಮೆ ಇದೆ.

ದೂರು–ದುಮ್ಮಾನಗಳನ್ನು ಹೊತ್ತು ಬಂದವರ ಅರ್ಜಿಗಳನ್ನು ಪಡೆದ ಆಯೋಗವು, ಅವರಿಗೆ ನ್ಯಾಯ ಒದಗಿಸಿದೆ. ನ್ಯಾಯಯುತ ಸೇವೆ ಒದಗಿಸಿದ್ದರೂ ಪರಿಹಾರದ ಆಸೆಗೆ ಅರ್ಜಿ ಹಾಕಿದವರನ್ನೂ ವಿಚಾರಣೆ ನಡೆಸಿ, 71 ಗ್ರಾಹಕರ ವಿರುದ್ಧವೇ ಆದೇಶಗಳನ್ನು ಹೊರಡಿಸಿದೆ. ಜತೆಗೆ ಅವರಿಗೆ ಬಿಸಿಯೂ ಮುಟ್ಟಿಸಿದೆ.

ಜೀವ ವಿಮೆ, ಬ್ಯಾಂಕ್ ಚೆಕ್ ಬೌನ್ಸ್, ದೋಷಪೂರಿತ ವಾಹನ, ವೈದ್ಯಕೀಯ ಸೇವಾ ನ್ಯೂನತೆ, ಅಧಿಕ ಶುಲ್ಕ, ಕಳಪೆ ಗುಣಮಟ್ಟದ ಔಷಧಿ, ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳ ಪ್ರಕರಣಗಳಲ್ಲಿಯೂ ಆಯೋಗವು ನ್ಯಾಯಕೊಡಿಸಿದೆ. ಬೇರೆ ಜಿಲ್ಲೆಗಳಿಗೆ ಹೊಲಿಸಿದರೆ ಯಾದಗಿರಿಯಲ್ಲಿ ಸೇವಾ ನ್ಯೂನ್ಯತೆಗೆ ಆಯೋಗದ ಮುಂದೆ ಬರುವವರ ಸಂಖ್ಯೆ ಬಹಳ ಕಡಿಮೆಯೇ ಇದೆ. ಈಚಿನ ದಿನಗಳಲ್ಲಿ ಅರ್ಜಿದಾರರ ಸಂಖ್ಯೆ ಆಶಾದಾಯಕವಾಗಿ ಏರಿಕೆ ಆಗುತ್ತಿದೆ ಎನ್ನುತ್ತಾರೆ ಆಯೋಗದ ಅಧಿಕಾರಿಗಳು.

ಆಯೋಗದ ಕಚೇರಿ ಆರಂಭಿಸಿದ 2012ರ ಮೊದಲ ವರ್ಷದಲ್ಲಿ ಕೇವಲ ಮೂರು ದೂರುಗಳು ಬಂದಿದ್ದವು. 2023ರ ವರ್ಷದಲ್ಲಿ ದೂರುದಾರರ ಸಂಖ್ಯೆ 133ಕ್ಕೆ ಏರಿಕೆಯಾಗಿದೆ. ಒಂದು ಅಂಕಿಯಿಂದ ಶುರುವಾದ ದೂರುಗಳು ಮೂರು ಅಂಕಿ ತಲುಪಲು 11 ವರ್ಷಗಳು ಬೇಕಾಯಿತು. 2012ರಿಂದ 2022ರ ನಡುವೆ ಕನಿಷ್ಠ 3 ಹಾಗೂ ಗರಿಷ್ಠ 20ರ ನಡುವೆ ದೂರುಗಳು ಸಲ್ಲಿಕೆ ಆಗಿದ್ದವು. ಕಳೆದ ಮೂರು ವರ್ಷಗಳಿಂದ ದೂರು ಸ್ವೀಕೃತಿ ಪ್ರಮಾಣದಲ್ಲಿ ಏರುಗತಿಯಲ್ಲಿದೆ.

‘ಜಿಲ್ಲಾ ಆಯೋಗವು ಜೀವ ವಿಮೆ ಸಂಬಂಧಿತ ಅತ್ಯಧಿಕ 278 ಪ್ರಕರಣಗಳನ್ನು ಇದುವರೆಗೂ ಸ್ವೀಕರಿಸಿದ್ದು, ಅವುಗಳಲ್ಲಿ 226 ಸಂತ್ರಸ್ತರಿಗೆ ಪರಿಹಾರ ಕೊಡಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಸಂತ್ರಸ್ತರೊಬ್ಬರಿಗೆ ₹ 50 ಲಕ್ಷ ಪರಿಹಾರಕ್ಕೆ ಆದೇಶಿಸಿದು ಆಯೋಗದ ಹೆಗ್ಗಳಿಕೆಯಾಗಿದೆ’ ಎನ್ನುತ್ತಾರೆ ಆಯೋಗದ ಸಹಾಯಕ ಆಡಳಿತ ಅಧಿಕಾರಿ ಮಲ್ಲಿಕಾರ್ಜುನ ಒಡೆಯರ್.

‘ಬ್ಯಾಂಕ್ ಸಂಬಂಧಿತ 26 ದೂರುಗಳಲ್ಲಿ 22 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಗೃಹ ಬಳಕೆ ಸಾಮಗ್ರಿಗಳ 12, ಅಂಚೆ ಕಚೇರಿಯ 3, ಜೆಸ್ಕಾಂನ 14, ವೈದ್ಯಕೀಯ ನಿರ್ಲಕ್ಷ್ಯದಡಿ ಎರಡು ಪ್ರಕರಣಗಳು ಬಗೆಹರಿಸಲಾಗಿದೆ. ಆಯೋಗದ ಬಳಿ ಇನ್ನೂ 69 ಪ್ರಕರಣಗಳ ವಿಚಾರಣೆಯ ಹಂತದಲ್ಲಿವೆ. ಇದುವರೆಗೂ ₹ 1.25 ಕೋಟಿ ಪರಿಹಾರ ಕೊಡುವಂತೆ ಸಂಬಂಧಿಸಿದ ಸಂಸ್ಥೆ, ಕಂಪನಿಗಳಿಗೆ ಆದೇಶ ಹೊರಡಿಸಲಾಗಿದೆ’ ಎಂದರು.

‘ಬೆಳೆ ವಿಮೆ ವ್ಯಾಜ್ಯಗಳೂ ಸ್ವೀಕಾರ’:

‘ಇತ್ತೀಚಿನ ದಿನಗಳಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ ಎಂಬ ದೂರುಗಳು ಸಾಕಷ್ಟು ಕೇಳಿಬರುತ್ತಿವೆ. ಸಂತ್ರಸ್ತ ರೈತರು ಆಯೋಗಕ್ಕೆ ಬಂದು ಮೌಖಿಕವಾಗಿ ಹೇಳಿದ್ದನ್ನು ನಾವೇ ಬರೆದುಕೊಂಡು ಪ್ರಕರಣವನ್ನು ದಾಖಲಿಸಿಕೊಳ್ಳುತ್ತೇವೆ. ಜತೆಗೆ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅಥವಾ ₹ 5 ಲಕ್ಷ ವರೆಗಿನ ಪರಿಹಾರದ ಮೊತ್ತಕ್ಕೆ ಯಾವುದೇ ಶುಲ್ಕ ಇರುವುದಿಲ್ಲ’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತ ಅಧಿಕಾರಿ ಮಲ್ಲಿಕಾರ್ಜುನ ಒಡೆಯರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಹೆಚ್ಚಿನ ಹಣ ಪಡೆಯಬಹುದು ವಿನಾಕಾರಣ ವಿಚಾರಣೆಗೆ ಕರೆಯುವ ಊಹೆಯಿಂದ ಕೆಲವರು ದೂರು ಕೊಡಲು ಮುಂದೆ ಬರುತ್ತಿಲ್ಲ. ಅನ್ಯಾಯಕ್ಕೆ ಒಳಗಾದ ಗ್ರಾಹಕರು ರೈತರು ಹಿಂಜರಿಕೆ ಇಲ್ಲದೆ ಆಯೋಗದ ಕದ ತಟ್ಟಬಹುದು. ಎರಡ್ಮೂರು ಬಾರಿ ಮಾತ್ರವೇ ವಿಚಾರಣೆಗೆ ಕರೆಯುತ್ತೇವೆ. ತಮ್ಮ ದೂರಿನ ಹಂತವನ್ನು ಆನ್ಲೈನ್ನಲ್ಲಿಯೂ ಪರಿಶೀಲಿಸಬಹುದು. ತಾವು ಇದ್ದಲ್ಲಿಯೇ ಕುಳಿರು https://e-jagriti.gov.in ಮೂಲಕವೂ ದೂರು ದಾಖಲಿಸಬಹುದು’ ಎಂದು ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.