ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಪುಣೆಯಲ್ಲಿ ಕರ್ನಾಟಕದ ಸಾರಿಗೆ ಬಸ್‌ಗೆ ಕಲ್ಲು ತೂರಾಟ: ಗ್ಲಾಸ್ ಜಖಂ

Last Updated 19 ಡಿಸೆಂಬರ್ 2021, 16:36 IST
ಅಕ್ಷರ ಗಾತ್ರ

ಯಾದಗಿರಿ: ಶಹಾಪುರ ಬಸ್ ಡಿಪೋದ ಸುರಪುರ-ಪುಣೆ ಬಸ್‌ಗೆ ಮಹಾರಾಷ್ಟ್ರದ ಪುಣೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದು, ಎರಡು ಬದಿಯ ಗ್ಲಾಸ್‌ಗಳು ಜಖಂ ಆಗಿವೆ.

ಸುರಪುರ, ಶಹಾಪುರ, ಸಿಂದಗಿ, ಸೊಲ್ಲಾಪುರ ಮಾರ್ಗವಾಗಿ ಪುಣೆಗೆ ಬಸ್ ಸಂಚಾರ ಮಾಡುತಿತ್ತು. ಭಾನುವಾರ ಪುಣೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.‌

ಈ ವೇಳೆ ಕಿಡಿಗೇಡಿಗಳು ಬಸ್‌ ಮುಂಭಾಗದ ಗ್ಲಾಸ್‌ಗೆ ಕಲ್ಲು ತೂರಿದ್ದರಿಂದ ಚೂರು ಚೂರಾಗಿದೆ. ಹಿಂಭಾಗದ ಗ್ಲಾಸ್ ಒಡೆದಿದೆ. ಮುಂಬೈಗೆ ತೆರಳಬೇಕಿದ್ದ ಗುರುಮಠಕಲ್ ಘಟಕದ ಬಸ್ ಅನ್ನು ಕರ್ನಾಟಕದ ಗಡಿಯಿಂದಲೇ ವಾಪಾಸ್ ಕರೆಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

'ಶಹಾಪುರ ಬಸ್ ಘಟಕದ ಕೆಎ 33 ಎಫ್ 0395 ಬಸ್‌ಗೆ ಕಲ್ಲು ತೂರಲಾಗಿದೆ. ಸ್ಥಳೀಯ ಠಾಣೆಯಲ್ಲಿ ಘಟನೆ ಬಗ್ಗೆ ದೂರು ನೀಡಲಾಗಿದೆ. ಇದರ ಜೊತೆಗೆ ಸಿಂದಗಿ, ಕಲಬುರಗಿ ಬಸ್ ಘಟಕದ ಬಸ್‌ಗಳ‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ' ಎಂದು ಶಹಾಪುರ ಡಿಪೋ ವ್ಯವಸ್ಥಾಪಕ ಪಾಲಕ್ಷಿ ಹರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT