ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಪುರ: ರಜಾ ಅವಧಿ ಬಿಸಿಯೂಟಕ್ಕೆ ಚಾಲನೆ

Published 11 ಏಪ್ರಿಲ್ 2024, 14:39 IST
Last Updated 11 ಏಪ್ರಿಲ್ 2024, 14:39 IST
ಅಕ್ಷರ ಗಾತ್ರ

ನಾರಾಯಣಪುರ: ಬರ ಪೀಡಿತ ತಾಲ್ಲೂಕು ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ರಜಾ ಅವಧಿಯಲ್ಲೂ ಮಧ್ಯಾಹ್ನ ಬಿಸಿಯೂಟ ವಿತರಣೆ ಯೋಜನೆಗೆ ಗುರುವಾರ ಚಾಲನೆ ನೀಡಲಾಗಿದೆ ಎಂದು ಸಿಆರ್‌ಪಿ ಮೌನೇಶ ಬಡಿಗೇರ ಮಾಹಿತಿ ನೀಡಿದ್ದಾರೆ.

ನಾರಾಯಣಪುರ ಕ್ಲಸ್ಟರ್ ವ್ಯಾಪ್ತಿಯ 14 ಶಾಲೆಗಳ ಮುಖ್ಯಶಿಕ್ಷಕರ ಉಪಸ್ಥಿತಿಯಲ್ಲಿ ಬಿಸಿಯೂಟಕ್ಕೆ ಚಾಲನೆ ನೀಡಲಾಗಿದೆ. ಗುರುವಾರ 854 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದಾರೆ, ಏ.11 ರಿಂದ ಮುಂದಿನ ಮೇ 28ರ (41 ದಿನಗಳ)ವರೆಗೆ ಬಿಸಿಯೂಟ ನೀಡಲಾಗುವದು ಎಂದು ಪ್ರಜಾವಾಣಿಗೆ ಅವರು ತಿಳಿಸಿದರು.

ನಾರಾಯಣಪುರ ಸಮೀಪದ ಮಾವಿನಗಿಡದ ತಾಂಡಾದ ಅನುದಾನಿತ ಶಾಲೆಯಲ್ಲಿ ರಜಾ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ವಿತರಣೆಗೆ ಚಾಲನೆ ನೀಡಲಾಯಿತು. ಮುಖ್ಯಶಿಕ್ಷಕ ಅಶೋಕ ಪತ್ತಾರ ಉಪಸ್ಥಿತರಿದ್ದರು
ನಾರಾಯಣಪುರ ಸಮೀಪದ ಮಾವಿನಗಿಡದ ತಾಂಡಾದ ಅನುದಾನಿತ ಶಾಲೆಯಲ್ಲಿ ರಜಾ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ವಿತರಣೆಗೆ ಚಾಲನೆ ನೀಡಲಾಯಿತು. ಮುಖ್ಯಶಿಕ್ಷಕ ಅಶೋಕ ಪತ್ತಾರ ಉಪಸ್ಥಿತರಿದ್ದರು

ಮುಖ್ಯಶಿಕ್ಷಕಿ ಜಯಶ್ರೀ, ಬಿಸಿಯೂಟ ಸಿಬ್ಬಂದಿ ಸೇರಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT