ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ತಲೆ ನೋವಾದ ಚಿರತೆ ಶೋಧ 

Published 11 ಮಾರ್ಚ್ 2024, 7:01 IST
Last Updated 11 ಮಾರ್ಚ್ 2024, 7:01 IST
ಅಕ್ಷರ ಗಾತ್ರ

ಸುರಪುರ: ಕಳೆದ ಬುಧವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಎರಡು ತಂಡ ರಚಿಸಿದ್ದು, ಒಂದು ತಂಡ ಬೆಳಗಿನ ಸಮಯ ಮತ್ತೊಂದು ತಂಡ ರಾತ್ರಿ ವೇಳೆ ಗಸ್ತು ತಿರುಗುತ್ತಿದೆ.

ಇದುವರೆಗೂ ಚಿರತೆ ಶೋಧವಾಗದಿರುವುದು ತಲೆ ನೋವಾಗಿ ಪರಿಣಮಿಸಿದೆ. ಬುಧವಾರ ಸಿದ್ದಾಪುರದ ತೋಟದ ಮನೆಯೊಂದರಲ್ಲಿ ನಾಯಿಯನ್ನು ಕಚ್ಚಿದ್ದು, ಗುರುವಾರ ಮಾಚಗುಂಡಾಳ ಹತ್ತಿರ ನಾಯಿಯನ್ನು ತಿಂದು ಹಾಕಿದ್ದು ಬಿಟ್ಟರೆ ಚಿರತೆ ಯಾವ ಸುಳಿವನ್ನು ನೀಡುತ್ತಿಲ್ಲ. ಚಿರತೆ ಯಾರ ಕಣ್ಣಿಗೂ ಬೀಳುತ್ತಿಲ್ಲ.

ಮಾಚಗುಂಡಾಳ ಹತ್ತಿರ ಪಂಜರ ಮತ್ತು ಕ್ಯಾಮೆರಾ ಅಳವಡಿಸಲಾಗಿದ್ದು ಯಾವುದೇ ಚಿತ್ರ ಸೆರೆಯಾಗಿಲ್ಲ. ಇದರಿಂದ ಜನರಲ್ಲಿ ಅವ್ಯಕ್ತ ಭಯ ಮುಂದುವರಿದಿದೆ.

‘ಸೋಮವಾರ ಇನ್ನೊಂದು ಪಂಜರ ಮತ್ತು 4 ಕ್ಯಾಮೆರಾ ಟ್ರಾಕ್‍ಗಳನ್ನು ಅಳವಡಿಸಲಾಗುತ್ತದೆ. ಚಿರತೆ ಸೆರೆಗೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ’ ಎಂದು ವಲಯ ಅರಣ್ಯಾಧಿಕಾರಿ ಬುರಾನುದ್ದೀನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT