ಕಳೆದ 4 ದಶಕಗಳಿಂದ ಹಾಲು ಮಾರಾಟ ಮಾಡುತ್ತಿದ್ದೇವೆ. ನಮ್ಮ ಬದುಕು ಏಳಕ್ಕೂ ಎರದ ಆರಕ್ಕೂ ಇಳಿಯದ ಸ್ಥಿತಿಗೆ ಬಂದಿದೆ. ಹೈನುಗಾರಿಕೆಗೆ ಸರ್ಕಾರ ಉತ್ತೇಜನ ನೀಡಬೇಕು
ಅಲ್ಲಾವುದ್ದೀನ್ ನದಾಫ ಹಾಲು ಮಾರಾಟಗಾರರು
ರಿಯಾಯತಿ ದರದಲ್ಲಿ ಪಶು ಇಲಾಖೆ ಮೇವು ಪೂರೈಸಬೇಕು. ಎಮ್ಮೆ ಶೆಡ್ ನಿರ್ಮಾಣ ಎಮ್ಮೆ ಖರೀದಿಗೆ ಸರ್ಕಾರ ಸಾಲ ಸೌಲಭ್ಯ ಮತ್ತು ರಿಯಾಯಿತಿ ನೀಡಬೇಕು
ವೆಂಕಟೇಶ ಮಂಗಿಹಾಳ ಹಾಲು ಮಾರಾಟಗಾರರು
ನೆರವಿಗೆ ಬಾರದ ಪಶು ಇಲಾಖೆ
ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಜಾನುವಾರುಗಳಿಗೆ ಮೇವು ಪೂರೈಸುತ್ತಿಲ್ಲ ಅನಿವಾರ್ಯವಾಗಿ ಎಮ್ಮೆ ಮಾಲಿಕರು ಭತ್ತದ ಮೇವನ್ನು ಖರೀದಿ ಮಾಡುತ್ತಿದ್ದಾರೆ. ಗಿರಣಿಯಲ್ಲಿ ಕೆಳಗೆ ಬಿದ್ದ ಹಿಟ್ಟನ್ನು ಮಂಡಾಳ ಭಟ್ಟಿಯಲ್ಲಿ ತವಡನ್ನು ಖರೀದಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸುತ್ತಾರೆ. ನಗರದ ಪಶು ಆಸ್ಪತ್ರೆ ಕಟ್ಟಡ ನೂತನವಾಗಿ ನಿರ್ಮಾಣವಾಗುತ್ತಿದೆ. ಚಿಕಿತ್ಸೆಗೆ ಬರುವ ಎಮ್ಮೆಯನ್ನು ಕಟ್ಟಿಹಾಕಿ ಚುಚ್ಚುಮದ್ದು ನೀಡುವ ಪರೀಕ್ಷಿಸುವ ಟ್ರೇವಿಸ್ ಇಲ್ಲ. ಸ್ಥಳಾವಕಾಶ ಇಲ್ಲ. ಹೀಗಾಗಿ ಎಮ್ಮೆಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ತೊಂದರೆಯಾಗಿದೆ.