ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಹೊರಗುತ್ತಿಗೆ ನೌಕರರ ಕಾಯಂಗೊಳಿಸಿ: ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ

Last Updated 3 ಫೆಬ್ರುವರಿ 2023, 6:41 IST
ಅಕ್ಷರ ಗಾತ್ರ

ಸುರಪುರ: ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಆಗ್ರಹಿಸಿ ಹೊರಗುತ್ತಿಗೆ ನೌಕರರ ಸಂಘದವರು ಬುಧವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ಶಾಖಾನವರ ಮಾತನಾಡಿ, ‘ರಾಜ್ಯ ಸಮಿತಿ ಆದೇಶದ ಮೇರೆಗೆ ಕಸದ ಗಾಡಿಯ ಚಾಲಕರು, ನೀರು ಸರಬರಾಜು ಸಹಾಯಕರು, ಒಳಚರಂಡಿ ಕಾರ್ಮಿಕರು ಮುಂತಾದ ಹೊರಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸದೆ ಬೇಡಿಕೆ ಈಡೇರುವ ವರೆಗೆ ಧರಣಿ ನಡೆಸುತ್ತಿದ್ದೇವೆ’ ಎಂದರು.

‘ಹೊರಗುತ್ತಿಗೆ ನೌಕರರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ಒಳಪಡಿಸಬೇಕು. ಹಂತ ಹಂತವಾಗಿ ಸೇವೆ ಕಾಯಂಗೊಳಿಸಬೇಕು. ನಮ್ಮನ್ನು ನಗರಸಭೆ ಮಲತಾಯಿ ಮಕ್ಕಳಂತೆ ನೋಡಿಕೊಳ್ಳುತ್ತಿದೆ. ಇದರಿಂದ ನಮ್ಮ ಸಂಸಾರ ನಿರ್ವಹಣೆ ತೊಂದರೆಯಾಗಿದೆ’ ಎಂದರು.

ನಗರಸಭೆ ಎಇಇ ಶಾಂತಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಗೌರವಾಧ್ಯಕ್ಷ ಮೌನೇಶ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಮಲ್ಲಿಭಾವಿ, ಅಯ್ಯಣ್ಣ ಪುಜಾರಿ, ಅನಿಲಕುಮಾರ ನಾಯಕ, ಬಸವರಾಜ ರತ್ತಾಳ, ಸತೀಶಕುಮಾರ ನಾಯಕ, ಗೋಪಾಲ ಸತ್ಯಂಪೇಟೆ, ಮಹ್ಮದ್ ಅನ್ವರ್‍ಸಾಬ, ರಾಘವೇಂದ್ರ ಸುರಪುರಕರ, ಮಲ್ಲಿಕಾರ್ಜುನ ಉಲ್ಪೇನವರ, ನಾಗರಾಜ ನಾಯಕ, ವಿನೋದ ಬಲ್ಲಿದವ, ಪರಶುರಾಮ ಪುಜಾರಿ, ವೆಂಕಟೇಶ ಪುಜಾರಿ, ಬಸವರಾಜ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT