ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಬಿಜೆಪಿ ಸೇರಿದ ಎಎಪಿ ಮುಖಂಡರು

Published 18 ಏಪ್ರಿಲ್ 2024, 16:16 IST
Last Updated 18 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ಸುರಪುರ: 2023ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ಆರ್.ಎಂ. ನಾಯಕ ಇನಾಮದಾರ್ ಬುಧವಾರ ತಮ್ಮ ಬೆಂಬಲಿಗರೊಂದಿಗೆ ಅಭ್ಯರ್ಥಿ ರಾಜೂಗೌಡ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಇನಾಮದಾರ್, ‘ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಉಳಿದ ಪಕ್ಷಗಳಿಂದ ದೇಶಕ್ಕೆ ಕೊಡುಗೆ ಇಲ್ಲ. ಆಮ್ ಆದ್ಮಿ ಪಕ್ಷ ಕೇವಲ ಎರಡು ರಾಜ್ಯಗಳಲ್ಲಿ ಪ್ರಭಾವ ಹೊಂದಿದೆ. ರಾಜೂಗೌಡ ಅವರಲ್ಲಿ ವಿಶ್ವಾಸವಿಟ್ಟು ಬಿಜೆಪಿ ಸೇರಿದ್ದೇನೆ’ ಎಂದು ತಿಳಿಸಿದರು.

ರಾಜೂಗೌಡ ಮಾತನಾಡಿ, ‘ದೇಶದಲ್ಲಿ ಆಮ್ ಆದ್ಮಿ ಪಕ್ಷ ಇಂಡಿಯಾ ಒಕ್ಕೂಟ ಬೆಂಬಲಿಸುತ್ತಿದೆ. ಸುರಪುರದಲ್ಲಿ ಆ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಬಿಜಿಪಿಗೆ ಸೇರಿದ್ದಾರೆ. ಇದು ನನ್ನ ಗೆಲುವಿಗೆ ಕೊಡುಗೆ ನೀಡಲಿದೆ’ ಎಂದರು.

ಎಎಪಿ ಮುಖಂಡರಾದ ಲಕ್ಷ್ಮಣನಾಯಕ ಇನಾಮದಾರ, ವೆಂಕಟೇಶನಾಯಕ ಇನಾಮದಾರ, ಪ್ರಭು ಮುದನೂರ, ಪರಶುರಾಮ ಪೂಜಾರಿ, ಪರಶುರಾಮ ರಾಠೋಡ, ರಂಗಪ್ಪನಾಯಕ ಪ್ಯಾಪ್ಲಿ, ಸೋಮಣ್ಣಗೌಡ ಕಮಲಾಪುರ, ರೇವಣಸಿದ್ದಪ್ಪ ಕಮಾಲಪುರ ಇತರರು ಬಿಜೆಪಿಗೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT