ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಯುವತಿ ಹೊಟ್ಟೆಯೊಳಗಿಂದ 300 ಗ್ರಾಂ ಕೂದಲು ಗೆಡ್ಡೆ ತೆಗೆದ ವೈದ್ಯರು

ವಿಬಿಆರ್ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯಲ್ಲಿ ಅಪರೂಪ ಶಸ್ತ್ರಚಿಕಿತ್ಸೆ ಯಶಸ್ವಿ: ಡಾ.ಮುದ್ನಾಳ
Last Updated 19 ಜುಲೈ 2020, 17:09 IST
ಅಕ್ಷರ ಗಾತ್ರ

ಯಾದಗಿರಿ: 3ನೇ ವಯಸ್ಸಿನಿಂದ ತಲೆ ಕೂದಲು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದ 16 ವರ್ಷದ ಯುವತಿಯ ಹೊಟ್ಟೆಯೊಳಗಿಂದ 300 ಗ್ರಾಂ ಕೂದಲು ಗೆಡ್ಡೆ (50 ಸೆಂಟಿ ಮೀಟರ್) ಯನ್ನು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆಯುವಲ್ಲಿ ವೈದ್ಯರು ಯಶ್ವಸಿಯಾಗಿದ್ದಾರೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕಮರವಾಡಿ ಗ್ರಾಮದ 16 ವರ್ಷದ ಯುವತಿ 5 ದಿನಗಳ ಹಿಂದೆ ಹೊಟ್ಟೆ ನೋವಿನಿಂದ ನಗರದ ವಿಬಿಆರ್ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನಿಂಗ್‌ ಮಾಡಿದಾಗ ಹೊಟ್ಟೆಯೊಳಗೆ ಕೂದಲು ಇರುವುದು ಪತ್ತೆಯಾಯಿತು. ಎರಡು ದಿನಗಳ ಹಿಂದೆ ಆಪರೇಷನ್‌ ಮಾಡಿ ಕೂದಲು ಹೊರ ತೆಗೆಯಲಾಗಿದೆ ಎಂದು ವಿಬಿಆರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ. ವೀರಬಸವಂತರೆಡ್ಡಿ ಮುದ್ನಾಳ ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

ಮಾನಸಿಕವಾಗಿ ಬಳಲಿದಂತೆ ಇರುವ ಯುವತಿ13 ವರ್ಷಗಳ ಕಾಲಕೂದಲು ಕಿತ್ತಿಕೊಂಡು ತಿನ್ನುತ್ತಿದ್ದರು. ಪೋಷಕರಿಗೆ ತಿಳಿಯದಂತೆ ಇದನ್ನು ಮಾಡುತ್ತಿದ್ದರು. ಆ ನಂತರ ಹೊಟ್ಟೆಯೊಳಗೆ ಕೂದಲು ಗೆಡ್ಡೆ ಬೆಳೆದಂತೆ ಊಟ ಮಾಡಿದರೆ ವಾಂತಿ ಆಗುತ್ತಿತ್ತು. ಇದರಿಂದ ಪೋಷಕರು ನಮ್ಮ ಆಸ್ಪತ್ರೆಗೆ ಕರೆ ತಂದಾಗ ಎಲ್ಲವನ್ನು ಪರಿಶೀಲಿಸಿ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇಂಥ ಪ್ರಕರಣಗಳು ಅಪರೂಪ ಎಂದು ತಿಳಿಸಿದರು.

ವಿಜಯಪುರದ ಬಿ.ಎಲ್.ಡಿ ಆಸ್ಪತ್ರೆ ಹಾಗೂ ಯಾದಗಿರಿ ಹೋಲ್‌ಸ್ಟನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಅನುಭವಿದೆ. ಜನಸಂಖ್ಯೆಯಲ್ಲಿ ಶೇ 1ರಷ್ಟು ಜನರು ಇಂಥ ಹವ್ಯಾಸ ಬೆಳೆಸಿಕೊಂಡಿರುತ್ತಾರೆ.ಡಾ. ವೀರಬಸವಂತರೆಡ್ಡಿ ಮುದ್ನಾಳ, ಡಾ.ಬಸವರಾಜ, ಡಾ. ಅಭಿಷೇಕ ಪಲ್ಲಾ ನೇತೃತ್ವದ ತಂಡ ಶಸ್ತ್ರ ಚಿಕಿತ್ಸೆ ಮಾಡಿ ‘ಟ್ರೈಕೊ ಬಿಜರ್’ ಕೂದಲು ಗಡ್ಡೆ ತೆಗೆಯಲಾಗಿದೆ.ಈಗ ಯುವತಿಹೊಟ್ಟೆ ನೋವಿನಿಂದ ಮುಕ್ತಳಾಗಿದ್ದಾಳೆ. 4 ದಿನಗಳನಂತರ ಆಹಾರ ಸೇವಿಸಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಸಂಗಮ್ಮ ವಿ. ರಡ್ಡಿ, ಡಾ. ಬಸವರಾಜ, ಡಾ. ಅಭಿಷೇಕ ಪಲ್ಲಾ, ಡಾ. ಅಮೋಘ, ಡಾ.ಸಿದ್ದವೀರಪ್ಪ ಪಾಟೀಲ, ಡಾ. ಕ್ಷೀತಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT