ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ದೇವಿ ತಾಳಿ ಕದ್ದ ಕಳ್ಳರು

Published 12 ಅಕ್ಟೋಬರ್ 2023, 16:07 IST
Last Updated 12 ಅಕ್ಟೋಬರ್ 2023, 16:07 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಲಕ್ಷ್ಮೀನಗರದ ಲಕ್ಷ್ಮೀ ದೇವಸ್ಥಾನ, ಬಸವೇಶ್ವರ ನಗರದ ಈಶ್ವರ ದೇವಸ್ಥಾನ ಹಾಗೂ ಅಂಜನೇಯ ದೇವಸ್ಥಾನದಲ್ಲಿ ಗುರುವಾರ ಕಳವು ನಡೆದಿದೆ.

ಲಕ್ಷ್ಮೀ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಗರ್ಭ ಗುಡಿಯಲ್ಲಿರುವ ದೇವಿಯ ಮೂರ್ತಿ ಮೇಲಿರುವ 6 ಗ್ರಾಂ ಚಿನ್ನದ ಮಾಂಗಲ್ಯ, ಹುಂಡಿ ಹಾಗೂ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್ ದೋಚಿ ಪರಾರಿಯಾಗಿದ್ದಾರೆ. ಅಕ್ಟೋಬರ್‌ 1 ರಂದು ದೇವಸ್ಥಾನದಲ್ಲಿರುವ ಮರದ ಮೂಲಕ ಇಳಿದು ಕಳವು ಮಾಡಲಾಗಿತ್ತು. ಈಗ ಮತ್ತೆ ಕಳ್ಳತನ ಜರುಗಿದೆ. ಈಶ್ವರ ಹಾಗೂ ಆಂಜನೇಯ ದೇವಸ್ಥಾನದ ಹುಂಡಿ ಕಳವು ಮಾಡಲಾಗಿದೆ. ಪದೇ ಪದೇ ಕಳ್ಳತನ ಘಟನೆ ನಡೆಯುತ್ತಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಈ ಕುರಿತು ನಗರಠಾಣೆ ಅಪರಾಧ ವಿಭಾಗದ ಪಿಎಸ್‌ಐ ಮಂಜು ಪಾಟೀಲ ಮಾಹಿತಿ ನೀಡಿ, ‘ಲಕ್ಷ್ಮೀ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಈ ಹಿಂದೆ ಕಳ್ಳತನವಾಗಿತ್ತು. ಕಳ್ಳರನ್ನು ಬಂಧಿಸಿ ಹಣ ವಸೂಲಿ ಮಾಡಲಾಗಿತ್ತು. ಮತ್ತೆ ಕಳ್ಳರ ಬೆರಳಚ್ಚು ಪರಿಶೀಲಿಸಿ ಬಂಧಿಸಿ ಪ್ರಕರಣ ದಾಖಲಿಸುತ್ತೇವೆ. ಸದ್ಯಕ್ಕೆ ಪ್ರಕರಣ ದಾಖಲಾಗಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT