ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್: ಆತಂಕಗೊಂಡ ಜನ

Last Updated 21 ಜನವರಿ 2020, 9:21 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ.ಬ್ಯಾಗ್ ಕಂಡು ಜನರು ಕೆಲ ಕಾಲ ಆತಂಕಗೊಂಡರು.

ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿ ಬ್ಯಾಗ್ ಬಿಟ್ಟು ಹೋಗಿದ್ದರು. ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳದಿಂದ ಬ್ಯಾಗ್ ತಪಾಸಣೆ ನಡೆಸಿದರು. ಬ್ಯಾಗ್‌ನಲ್ಲಿ ಬಟ್ಟೆ, ಹಣ ಪತ್ತೆಯಾಗಿದೆ.

ಡಿವೈಎಸ್ಪಿ ಶರಣಪ್ಪ ಅವರ ನೇತೃತ್ವದ ತಂಡ ಬ್ಯಾಗ್ ಕುರಿತು ಸ್ಪಷ್ಟನೆ ನೀಡಿ ಜನರ ಆತಂಕ ನಿವಾರಿಸಿತು.

ಮಸೀದಿ ಬಳಿ ಅನುಮಾ‌ನಸ್ಪದ ಬ್ಯಾಗ್ ಪತ್ತೆ
ಕೇಂದ್ರ ಬಸ್ ನಿಲ್ದಾಣದಲ್ಲಿ ಬ್ಯಾಗ್ ಪತ್ತೆಯಾದ ನಂತರ ನಗರದ ಅಜೀಜ್ ಕಾಲೋನಿಯ ಸನಾ ಮಸೀದಿ ಪಕ್ಕದಲ್ಲಿ ಮತ್ತೊಂದು ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿತ್ತು.ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಭೇಟಿ ನೀಡಿ ಅಲ್ಲಿಯೂ ಬ್ಯಾಗ್ ಪರಿಶೀಲಿಸಿದವು.

ಬ್ಯಾಗ್‌ನಲ್ಲಿ ನೆಹರು ಶಾಲೆಯ ವಿದ್ಯಾರ್ಥಿ ಶೇಕ್ ಇಮ್ರಾನ್ ಹೆಸರಿನ ಐಡಿ ಕಾರ್ಡ್,ಪುಸ್ತಕ ಪತ್ತೆಯಾಗಿತ್ತು.

ಈ ಕುರಿತು 'ಪ್ರಜಾವಾಣಿ' ಜೊತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, 'ಕೇಂದ್ರ ಬಸ್ ನಿಲ್ದಾಣ ಬಳಿ ಬಟ್ಟೆ, ಹಣವಿರುವ ಬ್ಯಾಗ್ ಪತ್ತೆಯಾಗಿದೆ. ಇದರಿಂದ ಆತಂಕಪಡುವ ಅವಶ್ಯವಿಲ್ಲ. ಶಂಕಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ' ಎಂದು ಮನವಿ ಮಾಡಿದರು.

'ಬ್ಯಾಗ್ ವರಸುದಾರರು ಬಂದರೆ ಬ್ಯಾಗ್ ನೀಡುತ್ತೇವೆ. ಮಂಗಳೂರು ಬಾಂಬ್‌ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ರೈಲು ನಿಲ್ದಾಣ, ಬಸ್ ನಿಲ್ದಾಣ ನಾರಾಯಣಪುರ ಜಲಾಶಯ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿ ಭದ್ರತೆ ಕಲ್ಪಿಸಲಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT