ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಟಿಕೆಟ್‌ ಮೇಲೆ ಲಸಿಕೆ ಜಾಗೃತಿ

ಎನ್‌ಈಕೆಆರ್‌ಟಿಸಿ ಅಧಿಕಾರಿಗಳಿಂದ ಕೋವಿಡ್‌ ಚುಚ್ಚುಮದ್ದು ಪಡೆಯಲು ಅರಿವು
Last Updated 4 ಜುಲೈ 2021, 6:09 IST
ಅಕ್ಷರ ಗಾತ್ರ

ಯಾದಗಿರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಈಕೆಆರ್‌ಟಿಸಿ) ಅಧಿಕಾರಿಗಳು ಬಸ್‌ ಟಿಕೆಟ್‌ ಮೇಲೆ ಕೋವಿಡ್‌ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

‘ಕೋವಿಡ್‌ ನಿಯಂತ್ರಿಸಲು ಲಸಿಕೆ ಹಾಕಿಸಿಕೊಳ್ಳಿ. ಮಾಸ್ಕ್‌ ಧರಿಸಿ ಪ್ರಯಾಣಿಸಿ’ ಎನ್ನುವ ಬರಹ ಪ್ರಯಾಣಿಕರ ಚೀಟಿ ಮೇಲೆ ಮುದ್ರಿಸಿದ್ದಾರೆ. ನಗರ ಸಾರಿಗೆ, ಗ್ರಾಮಾಂತರ, ರಾಜಧಾನಿ ಬಸ್ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಜಿಲ್ಲೆಯ ನಾಲ್ಕು ಡಿಪೋಗಳ ಬಸ್‌ಗಳಲ್ಲಿ ಶನಿವಾರದಿಂದ ಟಿಕೆಟ್‌ ಮೇಲೆ ಮುದ್ರಿಸಲಾಗುತ್ತಿದೆ. ಈಗಾಗಲೇ ಬಸ್‌ ನಿಲ್ದಾಣ, ಬಸ್‌ಗಳಲ್ಲಿ ಜಾಗೃತಿ ಫಲಕಗಳನ್ನು ಹಾಕಲಾಗಿದೆ. ವಿಶೇಷವಾಗಿ ಪ್ರಯಾಣಿಕರ ಟಿಕೆಟ್‌ ಮೇಲೆ ಮುದ್ರಿಸುವುದರಿಂದ ಲಸಿಕೆ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಿದಂತೆ ಆಗುತ್ತದೆ ಎನ್ನುವುದು ಸಾರಿಗೆ ಇಲಾಖೆ ಅಧಿಕಾರಿಗಳ ಮಾತಾಗಿದೆ.

ಗ್ರಾಮೀಣ ಜನರುಲಸಿಕೆ ಬಗ್ಗೆ ಹೊಂದಿರುವ ಮೂಢನಂಬಿಕೆಯಿಂದ ಚುಚ್ಚುಮದ್ದು ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಪ್ರಯಾಣಿಕರಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT