ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೇಂದ್ರದ ವಿರುದ್ಧ ವಿವಿಧೆಡೆ ಪ್ರತಿಭಟನೆ

ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಮುಷ್ಕರ, ವಿವಿಧ ಬೇಡಿಕೆ ಈಡೇರಿಸಲು ಸಂಘಟನೆಗಳ ಆಗ್ರಹ
Last Updated 9 ಜನವರಿ 2020, 10:26 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರದ ಜನ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸಾರ್ವತ್ರಿಕ ಮುಷ್ಕರ ಕರೆಯಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಪ್ರತಿಭಟನೆಗಳು ನಡೆದವು.

ಜಂಟಿ ಸಮಿತಿ: ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯನಿಧಿ ಮತ್ತು ಪಿಂಚಣಿ ನೀಡಬೇಕು, ಸಾಮಾಜಿಕ ಭದ್ರತಾ ನಿಧಿ ಸ್ಥಾಪಿಸಬೇಕು, ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದು ಪಡಿಸಬೇಕು, ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು, ರೈತರ ಎಲ್ಲ ಸಾಲ ಮನ್ನಾ ಮಾಡಬೇಕು, ರೈಲ್ವೆ ಖಾಸಗೀಕರಣ ಮತ್ತು ರಕ್ಷಣೆ, ಕಲ್ಲಿದ್ದಲು, ಬ್ಯಾಂಕಿಂಗ್, ವಿಮೆ ಮುಂತಾದ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಕೈ ಬಿಡಬೇಕು ಎಂದರು.

ಸಿಐಟಿಯು ಜಿಲ್ಲಾ ಮುಖಂಡ ಜೈಲಾಲ್ ತೋಟದಮನಿ, ಎಐಯು ಟಿಯುಸಿ ಜಿಲ್ಲಾಧ್ಯಕ್ಷೆ ಡಿ. ಉಮಾದೇವಿ, ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್., ಗ್ರಾಮ ಪಂಚಾಯಿತಿ ನೌಕರರ ಸಂಘದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಾಲಿಬ ಸಾಬ ಎಂ.ಹಳಿಗೇರಿ, ಅಂಗನವಾಡಿ ನೌಕರರ ಸಂಘ ಜಿಲ್ಲಾ ಕಾರ್ಯದರ್ಶಿ ಅನಿತಾ ಹಿರೇಮಠ, ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ತಾಜುದ್ಧೀನ್, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಸೈದಪ್ಪ ಎಚ್.ಪಿ, ಕಾರ್ಯದರ್ಶಿ ಸುಭಾಷ್ಚಂದ್ರ ಬಿ.ಕೆ, ಸಿಂಧು ಬಿ., ಚೇತನಾ ಕೆ.ಎಸ್., ಸದಸ್ಯರಾದ ನಾಗರಾಜ, ಶಿವರಾಜ, ನಿಂಗರಾಜ, ಮಲ್ಲಿಕಾರ್ಜುನ್, ಪ್ರದೀಪ್ ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ನಂತರ ತಹಶೀಲ್ದಾರ್‌, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಅಂಚೆ ನೌಕರರ ಸಂಘ: ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು, ಕನಿಷ್ಠ ವೇತನ ಮತ್ತು ಫಿಟ್‌ಮೆಂಟ್‌ ಜಾರಿಗೊಳಿಸಬೇಕು, ಜಿಡಿಎಸ್ ನೌಕರರನ್ನು ಕಾಯಂಗೊಳಿಸಬೇಕು, ಖಾಸಗೀಕರಣ ಮಾಡಬಾರದು ಎಂಬಿಇ ತ್ಯಾದಿ ಬೇಡಿಕೆಗಳ ಈಡೇರಿಕೆಗಾಗಿ ಯಾದಗಿರಿ ಅಂಚೆ ಜಂಟಿ ಕ್ರಿಯಾ ಸಮಿತಿಯವರು ಮುಷ್ಕರ ನಡೆಸಿದರು.

ನೌಕರರು ಶಾಂತಿಯುತ ಬೈಕ್ ರ್‍ಯಾಲಿ ಮೂಲಕ ಯಾದಗಿರಿ ಜಿಲ್ಲಾಧಿಕಾರಿಗೆ ಮತ್ತು ಅಂಚೆ ಇಲಾಖೆಯ ಯಾದಗಿರಿ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಜಯಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.

ಜೆಸಿಎ ಅಧ್ಯಕ್ಷ ಮರೆಪ್ಪ ಗುರುಸುಣಗಿ, ಕಾರ್ಯದರ್ಶಿ ಕುಪೇಂದ್ರ ವಠಾರ್, ಉಪಾಧ್ಯಕ್ಷ ಸಿ.ಎಂ. ಚಿಲ್ಲಾಳ, ಎಚ್ ಭೀಮರಾವ, ನಾಗರತ್ನ ಎಚ್‌.ಎಸ್., ಚಂದ್ರಕಮಲ ಗಡಲ್, ಮಲ್ಲಿಕಾರ್ಜುನ ಮಳ್ಳಿ, ಜಿ.ಶಂಕ್ರಪ್ಪ, ಸಾಬರಡ್ಡಿ ಕಣೆಕಲ್, ದೇವಣ್ಣ ಕಲಬುರ್ಗಿ, ಪರಶುರಾಮ ಕೊಡೇಕಲ್, ಬಾಪುಗೌಡ, ಹನುಮಂತ ನಾಯಕ, ಭಾಗಪ್ಪ ಮುಂಡಾಸ, ಸೈಯದ್ ಸಾಧಿಕ್, ಅಬು ಅಹಮದ್ ಭಾಗವಹಿಸಿದ್ದರು.

ಕಾಂಗ್ರೆಸ್ ಜಿಲ್ಲಾ ಸಮಿತಿ: ದುಡಿಯುವ ಜನರ ಹಕ್ಕುಗಳ ರಕ್ಷಣೆಗಾಗಿ, ಪರ್ಯಾಯ ಆರ್ಥಿಕ ನೀತಿಗಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಕಲಬುರ್ಗಿ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ‌, ಕೆಪಿಸಿಸಿ ಕಾರ್ಮಿಕ ಘಟಕ ಅಧ್ಯಕ್ಷ ಸಾಬರಡ್ಡಿ ಎನ್ ಕಲಬುರ್ಗಿ, ಮಲ್ಲಪ್ಪ ಪೂಜಾರಿ ಬಬಲಾದ, ಮರೆಪ್ಪ ಬಿಳ್ಹಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಗೂಳಿ, ಮುಖಂಡ ಮಾಣಿಕರೆಡ್ಡಿ ಕುರಕುಂದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT