ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೆಕಾಯಿ ದರ ತ್ರಿಶತಕ: ಇಳಿಕೆಯತ್ತ ತರಕಾರಿ ದರ; ನಿಟ್ಟುಸಿರು ಬಿಟ್ಟ ಗ್ರಾಹಕರು

Last Updated 28 ನವೆಂಬರ್ 2021, 5:16 IST
ಅಕ್ಷರ ಗಾತ್ರ

ಯಾದಗಿರಿ: ತರಕಾರಿ ದರದಲ್ಲಿ ಕಳೆದ ವಾರಕ್ಕಿಂತ ಈ ವಾರ ಇಳಿಕೆ ಕಂಡು ಬಂದಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತೆ ಆಗಿದೆ. ಆದರೆ, ನುಗ್ಗೆಕಾಯಿ ದರ ಮಾತ್ರ ಗಗನಕ್ಕೇರಿದೆ.

ನುಗ್ಗೆಕಾಯಿ ಒಂದು ಕೆಜಿ ₹300 ದರ ಇದ್ದು, ಚಿಲ್ಲರೆ ಅಂಗಡಿಗಳಲ್ಲಿ ನೋಡಲು ಸಿಗುತ್ತಿಲ್ಲ. ದೊಡ್ಡ ತರಕಾರಿ ಅಂಗಡಿಗಳಲ್ಲಿ ಮಾತ್ರ ನುಗ್ಗೆಕಾಯಿ ಮಾರಾಟವಾಗುತ್ತಿದೆ. ಅದು ಬೇಕಾದರೆ ತೆಗೆದುಕೊಳ್ಳಿ. ಇಲ್ಲದಿದ್ದರೆ ಇಲ್ಲ ಎನ್ನುವ ಮಾತು ವ್ಯಾಪಾರಿಗಳಿಂದ ಕೇಳಿ ಬರುತ್ತಿದೆ.

ಟೊಮೆಟೊ ದರ ಒಮ್ಮೆಲೆ ₹20 ಇಳಿಕೆಯಾಗಿದೆ. ಕಳೆದ ವಾರ ₹70ರಿಂದ 80 ಒಂದು ಕೆಜಿ ಮಾರಾಟವಾಗುತ್ತಿತ್ತು. ಈ ವಾರ ₹60ರಿಂದ 70 ಇದೆ. ಕೆಲ ಕಡೆ ₹50ಕ್ಕೂ ಸಿಗುತ್ತಿದೆ. ದರ ಅಧಿಕವಿದ್ದಾಗ ಕಡಿಮೆ ಖರೀದಿ ಮಾಡುತ್ತಿದ್ದವರು, ಈಗ ಎರಡ್ಮೂರು ಕೆಜಿ ತೆಗೆದುಕೊಂಡು ಹೋಗುತ್ತಿದ್ದಾರೆ.

ಈರುಳ್ಳಿ ಸೊಪ್ಪು ಒಂದು ಕೆಜಿ ₹50–60 ಸಿಗುತ್ತಿದೆ. ಕರಿಬೇವು ಒಂದು ಕೆಜಿ ₹100 ಇದ್ದು, ಬೆಳ್ಳುಳ್ಳಿ ₹100 ರಿಂದ ₹120, ಶುಂಠಿ ₹60–70 ಕೆಜಿ ಇದೆ.

ಸೊಪ್ಪುಗಳ ದರ: ಕಳೆದ ವಾರದಂತೆ ಈ ವಾರವೂ ಸೊಪ್ಪುಗಳ ದರವೂ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಮೆಂತೆ ಸೊಪ್ಪು ₹5 ಇಳಿಕೆಯಾಗಿದೆ.

ಮೆಂತೆ ಸೊಪ್ಪು ದೊಡ್ಡ ಗಾತ್ರದು ₹20, ಪಾಲಕ್‌ ಸೊಪ್ಪು ಒಂದು ಕಟ್ಟು ₹5-10, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹ 5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ದೊಡ್ಡ ಗಾತ್ರದು ಕಟ್ಟು ₹10–15, ಕೊತಂಬರಿ ಸೊಪ್ಪು ದೊಡ್ಡ ಗಾತ್ರದ ಒಂದು ಕಟ್ಟು ₹15–20 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹15–20 ದರ ಇದೆ.

ಹಣ್ಣುಗಳ ದರ: ಸೇಬು ₹20, ಮೋಸಂಬಿ ₹10, ಸಂತೂರ ₹20, ಡಜನ್‌ ಬಾಳೆಹಣ್ಣು ₹40, ಸಪೋಟ ₹40 ದರ ಇದೆ.

****

ತರಕಾರಿ; ದರ

(ಪ್ರತಿ ಕೆ.ಜಿಗೆ ₹ಗಳಲ್ಲಿ)

ಟೊಮೆಟೊ;60-70

ಬದನೆಕಾಯಿ;50–60

ಬೆಂಡೆಕಾಯಿ;40–50

ದೊಣ್ಣೆಮೆಣಸಿನಕಾಯಿ;60–70

ಆಲೂಗಡ್ಡೆ;30-35

ಈರುಳ್ಳಿ;40–40

ಎಲೆಕೋಸು;50–60

ಹೂಕೋಸು; 70–80

ಚವಳೆಕಾಯಿ;70–80

ಬೀನ್ಸ್; 70–80

ಗಜ್ಜರಿ;60-70

ಸೌತೆಕಾಯಿ; 40–50

ಮೂಲಂಗಿ;40-50

ಮೆಣಸಿನಕಾಯಿ;40-50

ಸೋರೆಕಾಯಿ;40–50

ಬಿಟ್‌ರೂಟ್;60-70

ಹೀರೆಕಾಯಿ;70-80

ಹಾಗಲಕಾಯಿ; 50-60

ತೊಂಡೆಕಾಯಿ; 50-60

ಅವರೆಕಾಯಿ; 70–80

***

ಕಳೆದ ಎರಡು ದಿನಗಳಿಂದ ಟೊಮೆಟೊ ದರ ಇಳಿಕೆಯಾಗಿದ್ದರಿಂದ ಗ್ರಾಹಕರು ಹೆಚ್ಚು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ

- ಬಸು ಚಿಂತನಹಳ್ಳಿ, ತರಕಾರಿ ವ್ಯಾಪಾರಿ

***

ತರಕಾರಿಗಳ ದರ ತುಸು ಇಳಿಕೆಯಾಗಿದ್ದು, ಸಮಾಧಾನ ಮೂಡಿಸಿದೆ. ಮತ್ತಷ್ಟು ದರ ಕಡಿಮೆಯಾದರೆ ಚೆನ್ನಾಗಿರುತ್ತದೆ

- ನಾಗರಾಜ ಕೋಲಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT